ಮಂಗಳೂರಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ವಿಶಿಷ್ಟ ಪ್ರತಿಭಟನೆ

Posted By:
Subscribe to Oneindia Kannada

ಮಂಗಳೂರು, ಅ.17 : ಜಿಲ್ಲಾ ಕೇಂದ್ರದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂಬ ಒತ್ತಾಯಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ಮಂಗಳೂರಿನಲ್ಲೂ ಕ್ಯಾಂಟೀನ್ ಆರಂಭಿಸಬೇಕು ಎಂದು ವಿನೂತನ ಪ್ರತಿಭಟನೆ ನಡೆಯಿತು.

ಜಾತ್ರೆಯಂತಾದ ಇಂದಿರಾ ಕ್ಯಾಂಟೀನ್ ನಲ್ಲಿ ಜನವೋ ಜನ

ಡಿ.ವೈ.ಎಫ್.ಐ ಸಂಘಟನೆಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೆಕೆಂದು ಆಗ್ರಹಿಸಿ ಅಣುಕು ಇಂದಿರಾ ಕ್ಯಾಂಟೀನ್ ಪ್ರದರ್ಶನ ಮಾಡುವ ಮೂಲಕ ವಿಭಿನ್ನವಾದ ಪ್ರತಿಭಟನೆ ನಡೆಸಿದರು.

 DYFI demands for Indira Canteens in Mangaluru

ಹೋಟೆಲ್ ಗಳಲ್ಲಿ ತಿಂಡಿಯ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ವಿಚಾರವಾಗಿ ಹೋಟೆಲ್ ಮಾಲೀಕರನ್ನು ಯಾರೂ ಕೇಳುವವರಿಲ್ಲ. ಹೋಟೆಲ್ ಗಳು ಜನರನ್ನ ಹಗಲು ದರೋಡೆ ಮಾಡುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಹೋಟೆಲ್, ಉಪಹಾರ ಗೃಹಗಳಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಮತ್ತು ಒಂದೇ ಶ್ರೇಣಿಯ ಹೋಟೇಲ್ ಗಳಲ್ಲಿ ಒಂದೇ ರೀತಿಯ ದರವಿರುವಂತೆ ಮಾಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

 DYFI demands for Indira Canteens in Mangaluru

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಇಂದಿರಾ‌ ಕ್ಯಾಂಟೀನ್ ಪ್ರಾರಂಭಿಸುತ್ತಿರುವುದು ಶ್ಲಾಘನೀಯ. ಆದರೆ, ಬೆಂಗಳೂರಿನಲ್ಲಿ ಮಾತ್ರ ಅಲ್ಲ ಮಂಗಳೂರಿನಲ್ಲೂ ಇಂದಿರಾ ಕ್ಯಾಂಟೀನ್ ಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Democratic Youth Federation of India (DYFI) welcomed the move of state government launching Indira Canteens in Bengaluru, also demanded the same in Mangaluru City and also in other parts of the districts.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X