ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮೃದ್ಧ ಜೀವನ್ ಸಂಸ್ಥೆ ಮೇಲೆ ಡಿವೈಎಫ್ಐ ದಿಢೀರ್ ದಾಳಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಜನವರಿ.06: ಮಂಗಳೂರಿನ ಪೆರೆಡಿಯಂ ಪ್ಲಾಜಾದಲ್ಲಿರುವ ಸಮೃದ್ಧ ಜೀವನ್ ಸಂಸ್ಥೆಯು ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಹಿಂತಿರುಗಿಸಬೇಕೆಂದು ಡಿವೈಎಫ್ಐ ಕಾರ್ಯಕರ್ತರು ಒತ್ತಾಯಿಸಿದ್ದು, ಸಂಸ್ಥೆಯ ಸಿಬ್ಬಂದಿ ಹಾಗೂ ಡಿವೈಎಫ್ಐ ಕಾರ್ಯಕರ್ತರ ನಡುವೆ ಇಂದು ಮಾತಿನ ಚಕಮಕಿ ನಡೆಯಿತು.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರ ನಡುವೆಯೂ ತಿಕ್ಕಾಟ ನಡೆಸಿದ ಸಮೃದ್ಧ ಜೀವನ್ ಸಂಸ್ಥೆ ಹಾಗೂ ಡಿವೈಎಫ್ಐ ಕಾರ್ಯಕತ್ರರ ನಡುವೆ ತಿಕ್ಕಾಟ ನಡೆದಿದ್ದು, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಸಹಿತ ಹಲವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.[ಜನವರಿ 12ರಿಂದ ವಿವೇಕ್ ಬ್ಯಾಂಡ್ ಅಭಿಯಾನ]

DYFI

ಮಂಗಳೂರಿನ ಪೆರೆಡಿಯಂ ಪ್ಲಾಜಾದಲ್ಲಿರುವ ಸಮೃದ್ಧ ಜೀವನ್ ಮಲ್ಟಿ ಸ್ಟೇಟ್ ಮಲ್ಪಿ ಕೋ-ಓಪರೇಟಿವ್ ಸೊಸೈಟಿ ಒರಿಸ್ಸಾ ಮೂಲದ ಕಂಪನಿ. ಇದು ಆಡು, ಕುರಿ ಸಾಕಣೆಕೆ, ಪಿಗ್ಮಿ ಹೆಸರಿನಲ್ಲಿ ಬಡವರಿಂದ ಹಣ ಸಂಗ್ರಹಿಸಿ ಮೋಸ ಮಾಡುತ್ತಿದೆ. ರಾಜ್ಯ ಸರಕಾರದಿಂದ ಯಾವುದೇ ರೀತಿಯ ಪರವಾನಿಗೆ ಪಡೆದಿಲ್ಲ ಎಂಬ ಕಾರಣಕ್ಕೆ ಸೋಮವಾರ ಡಿವೈಎಫ್ಐ ಕಾರ್ಯಕರ್ತರು ದಿಢೀರ್ ದಾಳಿ ನಡೆಸಿದ್ದರು.

ಕಚೇರಿಗೆ ಡಿವೈಎಫ್ಐನ ಕಾರ್ಯಕರ್ತರು ಧಿಡೀರ್ ದಾಳಿ ನಡೆಸಿ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ವಾಪಾಸು ಪಡೆದಿದ್ದು, ಇದರ ಮುಖ್ಯಸ್ಥ ಮಹೇಶ್ ಮೋತೆವಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಆರ್‌ಬಿ‌ಐ ಸಂಸ್ಥೆಯೂ ಕೂಡ ಸಮೃದ್ಧ ಜೀವನ್ ಸೊಸೈಟಿ ವಿರುದ್ಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದು ಕರ್ನಾಟಕದ 17 ಕಡೆ ಕಾರ್ಯನಿರ್ವಹಿಸುತ್ತಿದೆ.[ಎಂ.ಚಂದ್ರಶೇಖರ್ ಮಂಗಳೂರು ನೂತನ ಪೊಲೀಸ್ ಆಯುಕ್ತ]

DYFI

ಡಿವೈಎಫ್ಐನ ಕಾರ್ಯಕರ್ತರಿಂದ ದಾಳಿ ನಡೆದಿದ್ದರೂ, ಪೊಲೀಸರಿಗೆ ದೂರು ಕೊಟ್ಟರೂ ಈ ಸಂಸ್ಥೆ ಮಾತ್ರ ರಾಜಾರೋಷವಾಗಿ ಜನರಿಂದ ಹಣ ಸಂಗ್ರಹದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಎಚ್ಚರಿಸುವ, ಮೋಸದ ಜಾಲದಿಂದ ದೂರ ಇರುವಂತೆ ಹೇಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಸಂಸ್ಥೆಯ ವಿರುದ್ಧ ದಿಢೀರ್ ದಾಳಿ ನಡೆಸಲಾಯಿತು ಎಂದು ಡಿವೈಎಫ್ಐ ಮುಖಂಡ ಸಂತೋಷ್ ಬಜಾಲ್ ತಿಳಿಸಿದರು.[8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]

English summary
DYFI (Democrative Youth Federation of India) activits attacked on Samvrudh jeevan company at Peridium Plaza, Mangaluru. This company is origin of Orissa. It is collected lot of money from poor people and cheated them. So DYFI attacked suddenly and forced to return the money to public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X