26 ಪಾಸ್‌ಪೋರ್ಟ್‌ ಹೊಂದಿದ್ದ ವ್ಯಕ್ತಿ ಮಂಗಳೂರಿನಲ್ಲಿ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 17 : 26 ಪಾಸ್​​ಪೋರ್ಟ್​ಗಳೊಂದಿಗೆ ಅಕ್ರಮವಾಗಿ ಪ್ರಯಾಣಿಸುತ್ತಿದ್ದ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹಜ್ ಯಾತ್ರೆ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳಿಗೆ ವೀಸಾ ಮಾಡಿ ಕೊಡುವುದಾಗಿ ಹೇಳಿ ಈತ ಪಾಸ್​ಪೋರ್ಟ್​ ಪಡೆದಿದ್ದ ಎಂದು ಶಂಕಿಸಲಾಗಿದೆ.

ಬಂಧಿತ ಆರೋಪಿಯನ್ನು ಕಣ್ಣೂರು ನಿವಾಸಿ ಪಲ್ಲಕ್ಕನ್ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಜೆಟ್​ ಏರ್​ವೇಸ್​ ಮೂಲಕ ದುಬೈಗೆ ಪ್ರಯಾಣ ಬೆಳೆಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ.[ಮಕ್ಕಳ ಪಾಸ್ ಪೋರ್ಟಿಗೆ ತಾಯಿ ಹೆಸರಿದ್ದರೆ ಸಾಕು!]

Dubai bound passenger arrested for illegally carrying 26 passports

ಅನುಮಾನಾಸ್ಪದ ವರ್ತನೆ ಮೇಲೆ ಅಬ್ದುಲ್ಲಾ ಬಂಧನವಾಗಿದ್ದು, ಆತನಿಂದ 26 ಪಾಸ್​ಪೋರ್ಟ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ ಇಬ್ಬರು ಅಮೆರಿಕ ಪ್ರಜೆಗಳಾದ ಅರಕ್ಕಲ್ ಮಂಜೂರು ಮತ್ತು ಮಂಜೂರು ಶೂಜಾ ಅವರ ಪಾಸ್​ಪೋರ್ಟ್​ ಕೂಡ ಹೊಂದಿದ್ದ.[ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

ಹಜ್ ಯಾತ್ರೆ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳಿಗೆ ವೀಸಾ ಮಾಡಿ ಕೊಡುವುದಾಗಿ ಹೇಳಿ ಈತ ಪಾಸ್​ಪೋರ್ಟ್​ ಪಡೆದಿದ್ದ ಎಂದು ಶಂಕಿಸಲಾಗಿದ್ದು, ಬಜಪೆ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.[ಪೊಲೀಸ್ ವೆರಿಫಿಕೇಶನ್ ಇಲ್ಲದೇ ಕೈಗೆ ಪಾಸ್ ಪೋರ್ಟ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Immigration officers of Mangaluru International Airport arrested a passenger bound for Dubai and sized 26 passports of other citizens. The accused Abdulla Pallakkan was arrested on Tuesday August 16, 2016.
Please Wait while comments are loading...