ಕರಾವಳಿ ಹಳೆ ಬಂದರಿಗೆ ಬಂತು ಹೂಳೆತ್ತುವ ಯಂತ್ರ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್, 23: ಮಂಗಳೂರಿನ ಹಳೆಯ ಬಂದರಿನ ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಯಂತ್ರ ಬಂದಿದ್ದು, ಮುಂದಿನ ಮೂರು ತಿಂಗಳೊಳಗೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳಲಿದೆ.

ದೊಡ್ಡ ಪ್ರಮಾಣದಲ್ಲಿ ಹೂಳು ತುಂಬಿರುವುದರಿಂದ ಅವಘಡಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ಶಾಸಕ ಜೆ. ಆರ್ ಲೋಬೊ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಹೂಳೆತ್ತುವ ಯಂತ್ರವನ್ನು ತರಿಸಲಾಗಿದೆ . ಸುಮಾರು 99.50 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ.

Dredging machine arrives in Mangaluru old sea port

ಮುಂದಿನ ಮೂರು ತಿಂಗಳೊಳಗೆ ಬಂದರಿನಲ್ಲಿ ಹೂಳು ತೆಗೆದು ದೋಣಿಗಳ ಸಾಗಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಜೆ. ಆರ್. ಲೋಬೊವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಳಿವೆ ಬಾಗಿಲಿನಲ್ಲಿ ಹೂಳು ತೆಗೆದರೆ ದೋಣಿಗಳು ಅವಘಡವಿಲ್ಲದೆ ಸಲೀಸಾಗಿ ಹೋಗಲು ಸಹಕಾರಿಯಾಗುವುದು. ಕಾಮಗಾರಿಯನ್ನು ಶೀಘ್ರವಾಗಿ ನಿರ್ವಹಿಸುವಂತೆ ಮುಂಬೈ ಮೂಲದ ಸಂಸ್ಥೆಗೆ ಹೇಳಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಬಂದರಿನಲ್ಲಿ 2.1 ಮೀಟರ್ ಮಾತ್ರ ಆಳವಿದ್ದು ಇದನ್ನು 4 ಮೀಟರಿಗೇರಿಸಲಾಗುವುದು. ಇದರಿಂದ ವಾಣಿಜ್ಯ ವ್ಯವಹಾರ ಹೆಚ್ಚಾಗುವುದು. ಜೊತೆಗೆ ಸುಮಾರು 37 ಸಾವಿರ ಕ್ಯೂಸೆಕ್ಸ್ ಮರಳು ತೆಗೆಯಲಾಗುವುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dredging machine arrives in Mangaluru old sea port to complete dredging works at its harbour. in the inner harbour within three months.
Please Wait while comments are loading...