ಜ.15ಕ್ಕೆ ಕರ್ನಾಟಕ ಕಾಂಗ್ರೆಸ್ ಪ್ರಣಾಳಿಕೆ ಕರಡು ಸಿದ್ಧ

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 04 : '2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ' ಎಂದು ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ ಅವರು, 'ಕರಡು ಪ್ರಣಾಳಿಕೆ ಸಮಿತಿಯ ಮೊದಲ ಸಭೆಯಲ್ಲಿ 15 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಸಮಿತಿಗಳು ತಮ್ಮ ಭಾಗದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಯಾವ ವಿಷಯವನ್ನು ಪ್ರಣಾಳಿಕೆಯನ್ನು ಸೇರಿಸಬೇಕು ಎಂಬುದನ್ನು ಸಮಿತಿಗೆ ವರದಿ ರೂಪದಲ್ಲಿ ನೀಡಲಿವೆ' ಎಂದರು.

ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ರಚನೆ

Draft Congress manifesto to be ready by Jan 15, 2018

'ಪ್ರತಿ ವಲಯಕ್ಕೆ ಕರಡು ಸಮಿತಿ ಭೇಟಿ ನೀಡಿ ಸಮಾಲೋಚನೆ ನಡೆಸುತ್ತಿದೆ. ಪ್ರಣಾಳಿಕೆ ರಚನೆಯಲ್ಲಿ ಪಕ್ಷದ ಸಿದ್ಧತೆ ಒಂದು ಕಡೆಯಾದರೆ ರಾಜ್ಯ ಸರ್ಕಾರದಿಂದ ಸಿದ್ದರಾಮಯ್ಯ ಸೂಚನೆಯಂತೆ 'ನವ ಕರ್ನಾಟಕ 2025' ವಿಷನ್ ಡಾಕ್ಯುಮೆಂಟ್' ತಯಾರಿಸಲಾಗಿದೆ' ಎಂದು ಮೊಯ್ಲಿ ಹೇಳಿದರು.

ಗುಜರಾತ್ ಕಾಂಗ್ರೆಸ್ ಪ್ರಣಾಳಿಕೆ ಪ್ರಕಟ, 10 ರು ಪೆಟ್ರೋಲ್, ಡೀಸೆಲ್

'2013ರಿಂದ ಇದುವರೆಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ 6.54 ಕೋಟಿ ಜನರಲ್ಲಿ 5 ಕೋಟಿ ಜನರು ವಿವಿಧ ಯೋಜನೆ ಫಲವನ್ನು ಪಡೆದಿದ್ದಾರೆ' ಎಂದರು.

ವಿಧಾನಸಭೆ ಚುನಾವಣೆ, 15 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ

2018ರ ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳು ಸಿದ್ಧತೆಯನ್ನು ನಡೆಸುತ್ತಿವೆ. ಮೇ 10ರೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chikkaballapur MP and manifesto committee chief M.Veerappa Moily said that, the draft manifesto of the Congress for the forthcoming assembly election will be submitted to Siddaramaiah by January 15,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ