ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀನಿವಾಸ ಮಲ್ಯ ಸ್ಮಾರಕ ಜೀವಮಾನ ಸಾಧನೆ ಪ್ರಶಸ್ತಿಗೆ ಡಾ.ಬಿ.ಎಂ. ಹೆಗ್ಡೆ ಆಯ್ಕೆ

|
Google Oneindia Kannada News

ಮಂಗಳೂರು, ಜನವರಿ 11: ಮಹಾನಗರ ಪಾಲಿಕೆ ವತಿಯಿಂದ ಪ್ರತಿವರ್ಷ ನೀಡಲಾಗುವ ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯ ಸ್ಮಾರಕ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ವೈದ್ಯ ಹಾಗೂ ಸಂಶೋಧಕ ಡಾ.ಬಿ.ಎಂ. ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯ

2018ನೇ ಸಾಲಿನ ಉಳ್ಳಾಲ ಶ್ರೀನಿವಾಸ ಮಲ್ಯ ಸ್ಮಾರಕ ಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇದೇ ಬರುವ ಜ.12ರಂದು ನಡೆಯಲಿದೆ.

 ನಿರುದ್ಯೋಗಿಗಳಿಗೆ ದಾರಿದೀಪವಾದ ಮೈಸೂರಿನ ಅಚ್ಯುತಾನಂದ ನಿರುದ್ಯೋಗಿಗಳಿಗೆ ದಾರಿದೀಪವಾದ ಮೈಸೂರಿನ ಅಚ್ಯುತಾನಂದ

ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಇದೇ ವೇಳೆ ಸಮಾಜ ಸೇವೆ ಕ್ಷೇತ್ರದಲ್ಲಿ ರಾಮಕೃಷ್ಣ ಆಶ್ರಮ, ಪತ್ರಿಕೋದ್ಯಮದಲ್ಲಿ ಮನೋಹರ್ ಪ್ರಸಾದ್, ಸಮುದಾಯ ಶಿಕ್ಷಣ ಮತ್ತು ಸೇವೆಯಲ್ಲಿ ಡಾ. ಹನಿಬಾಲ್ ಆರ್. ಕಬ್ರಾಲ್, ಸಾಹಿತ್ಯ ಕ್ಷೇತ್ರದಲ್ಲಿ ಸಾರಾ ಅಬೂಬಕರ್ ಗೆ ವಿವಿಧ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.

Dr BM Hegde selected for Ullala Srinivas Mallya Honorary Award

ಸಾಧಕರಿಗೆ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದರಾದ ಡಾ.ಎಂ. ವೀರಪ್ಪ ಮೊಯ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಮಾರಂಭವನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು.

 ರಷ್ಯಾದ ಮೌಂಟ್ ಎಲ್‌ಬ್ರಸ್ ನಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ಕುವರಿ ಭವಾನಿ ರಷ್ಯಾದ ಮೌಂಟ್ ಎಲ್‌ಬ್ರಸ್ ನಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ಕುವರಿ ಭವಾನಿ

ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಬಿ.ಎಂ. ಫಾರೂಕ್, ಎಸ್.ಎಲ್. ಭೋಜೇಗೌಡ ಮೊದಲಾದವರು ಭಾಗವಹಿಸಲಿದ್ದಾರೆ.

English summary
Renowned Cardiologist Dr B M Hegde selected for Ullala Srinivas Mallya Honorary Award MCC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X