ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಡುವ ಡಾಂಬರ್ ಡಬ್ಬಕ್ಕೆ ಬಿದ್ದ ನಾಯಿಗೆ ಸಿಕ್ಕಿತು ಮರುಜನ್ಮ!

|
Google Oneindia Kannada News

ಮಂಗಳೂರು, ಸೆಪ್ಟೆಂಬರ್.18: ಬೇಸಿಗೆ ಮುನ್ನವೇ ಬಿಸಿಲ ಝಳ ಕರಾವಳಿಯಲ್ಲಿ ಹೆಚ್ಚುತ್ತಿದೆ. ಮಾರ್ಚ್ ಕೊನೆವಾರದಾಚೆಗೆ ಸುಡುಬಿಸಿಲು ಕಾಣಬೇಕಾದ ಕರಾವಳಿಯಲ್ಲಿ ಮಳೆ ಕಡಿಮೆಯಾಗಿ 20 ದಿನಗಳು ಉರುಳುವ ಮುನ್ನವೇ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಗೆ ಏರಿದೆ . ಬಿರು ಬಿಸಿಲಿಗೆ ರಸ್ತೆಗೆ ಹಾಕಲಾದ ಡಾಂಬರ್ ಕೂಡ ಕರಗುತ್ತಿದೆ.

ಬೀದಿನಾಯಿಗಳೆಂದರೆ ಬಿಬಿಎಂಪಿಗೆ ಅಷ್ಟೇಕೆ ಅಚ್ಚುಮೆಚ್ಚು?ಬೀದಿನಾಯಿಗಳೆಂದರೆ ಬಿಬಿಎಂಪಿಗೆ ಅಷ್ಟೇಕೆ ಅಚ್ಚುಮೆಚ್ಚು?

ಈ ನಡುವೆ ರಸ್ತೆ ಬದಿಯ ಡಾಂಬರು ಡಬ್ಬಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಯಿಯನ್ನು ಮಂಗಳೂರಿನ ಅನಿಮಲ್ ಕೇರ್‌ ಟ್ರಸ್ಟ್ ಸಿಬ್ಬಂದಿ ರಕ್ಷಿಸಿದ್ದಾರೆ.

ಘಟನೆಯ ವಿವರ:
ಮಂಗಳೂರು ನಗರ ಹೊರವಲಯದ ಬಜ್ಪೆ ಬಳಿ ರಸ್ತೆ ಡಾಂಬರೀಕರಣಕ್ಕಾಗಿ ಡಾಂಬರು ಡಬ್ಬಿಗಳನ್ನು ಇಡಲಾಗಿತ್ತು. ಈ ವೇಳೆ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಡಾಂಬರು ಡಬ್ಬಿ ಒಳಗೆ ಬಿದ್ದಿದೆ.

Dog turned rock solid in tar rescued in Mangaluru

ಬಿಸಿಲಿಗೆ ಕರಗಿದ ಬಿಸಿ ಡಾಂಬರ್ ಡಬ್ಬಕ್ಕೆ ಬಿದ್ದ ನಾಯಿಯ ಮೈ ತುಂಬ ಡಾಂಬರ್ ಅಂಟಿಕೊಂಡಿದೆ. ಅತ್ತ ಹೊರಬರಲಾಗದೇ ಇತ್ತ ಬಿಸಿ ಡಾಂಬರನ್ನು ಸಹಿಸಲಾಗದೇ ನಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು .

 ಮಂಗಳೂರಿನ ಪಿಂಕಿ 'ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್' ಫೈನಲಿಸ್ಟ್ ಮಂಗಳೂರಿನ ಪಿಂಕಿ 'ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್' ಫೈನಲಿಸ್ಟ್

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಕ್ತಿ ನಗರದ ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು, ಡಾಂಬರಿನಲ್ಲಿ ಅದ್ದಿ ಹೋಗಿದ್ದ ನಾಯಿಯನ್ನು ಮೇಲೆತ್ತಿದ್ದಾರೆ.

 ಬೀದಿ ನಾಯಿ ಆರೈಕೆಗೆ ಮುಕ್ತಮನಸ್ಸಿನಿಂದ ಮುಂದಾಗಿ: ಸಂಯುಕ್ತ ಹೊರನಾಡ್ ಬೀದಿ ನಾಯಿ ಆರೈಕೆಗೆ ಮುಕ್ತಮನಸ್ಸಿನಿಂದ ಮುಂದಾಗಿ: ಸಂಯುಕ್ತ ಹೊರನಾಡ್

Dog turned rock solid in tar rescued in Mangaluru

ಕೂಡಲೇ ತಮ್ಮ ಶಕ್ತಿನಗರದ ಅನಿಮಲ್ ಕೇರ್ ಸೆಂಟರಿಗೆ ಕೊಂಡೊಯ್ದು ಸುಮಾರು ಹತ್ತು ಲೀಟರ್‌ನಷ್ಟು ಅಡುಗೆ ಎಣ್ಣೆಯನ್ನು ನಾಯಿಯ ಮೈಗೆ ಸುರಿದಿದ್ದಾರೆ. ನಿಧಾನಕ್ಕೆ
Dog turned rock solid in tar rescued in Mangaluru

ನಾಯಿ ಮೈಯಲ್ಲಿ ಅಂಟಿದ್ದ ಹತ್ತು ಕೆಜಿಯಷ್ಟು ಡಾಂಬರನ್ನು ಬಟ್ಟೆಯಿಂದ ಉಜ್ಜಿ ತೆಗೆದಿದ್ದಾರೆ. ಸದ್ಯ ನಾಯಿ ಚೇತರಿಕೆ ಕಂಡಿದ್ದು ಮರುಜನ್ಮ ಪಡೆದಂತಾಗಿದೆ.

English summary
Dog turned rock solid in tar rescued in Mangaluru at Bajpe by Animal Trust care of Mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X