ಪ್ರತಿಭಾ ಕುಳಾಯಿ ವಿರುದ್ಧ ನೋಟಿಸ್ ಜಾರಿ ಮಾಡಿದ ದಕ್ಷಿಣ ಕನ್ನಡ ಕಾಂಗ್ರೆಸ್‌

Posted By:
Subscribe to Oneindia Kannada

ಮಂಗಳೂರು, ಮಾರ್ಚ್ 14: ಅಸಭ್ಯ ವರ್ತನೆ ತೋರಿದ ಕಾಂಗ್ರೆಸ್‌ ಮುಖಂಡನಿಗೆ ಧರ್ಮದೇಟು ನೀಡಿದ್ದ ಮಹಿಳಾ ಕಾರ್ಪೊರೇಟರ್ ಗೆ ಈಗ ಸಂಕಷ್ಟ ಎದುರಾಗಿದೆ. ಘಟನೆಯ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರಿಗೆ ವಿವರಣೆ ಕೇಳಿ ಕಾಂಗ್ರೆಸ್‌ ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ನೋಟೀಸ್ ಜಾರಿ ಮಾಡಿದೆ

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಮಂಗಳೂರು ಮಹಾನಗರ ಪಾಲಿಗೆ ಸದಸ್ಯೆ ಪ್ರತಿಭಾ ಕುಳಾಯಿ ಜೊತೆ ಅಸಭ್ಯ ವರ್ತನೆ ಮಾಡಿದ ಬಗ್ಗೆ ಮಾಧ್ಯಮದ ಚರ್ಚೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶಿಸ್ತು ಕ್ರಮ ಏಕೆ ಜರಗಿಸಬಾರದು? ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಮಹಿಳಾ ಕಾರ್ಪೊರೇಟರ್ ಜೊತೆ ಅಸಭ್ಯ ವರ್ತನೆ, ಕಾಂಗ್ರೆಸ್‌ ಮುಖಂಡ ವಜಾ

ಅಬ್ದುಲ್ ಸತ್ತಾರ್ ಅವರು ಪ್ರತಿಭಾ ಕುಳಾಯಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಸಂದರ್ಭದಲ್ಲಿ ಪ್ರತಿಭಾ ಕುಳಾಯಿ ಧರ್ಮದೇಟು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರು ಅಬ್ದುಲ್ ಸತ್ತಾರ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಿದ್ದರು.

DK District Congress issues show cause notice to Pratibha Kulai for taking to media

ನಿನ್ನೆ ಬೆಂಗಳೂರಿಗೆ ತರಳಿದ್ದ ಪ್ರತಿಭಾ ಕುಳಾಯಿ ಈ ಬಗ್ಗೆ ಮಾಧ್ಯಮದ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಚರ್ಚಾ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಪ್ರತಿಭಾ ಕುಳಾಯಿ ಮಾತಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನೋಟೀಸ್ ಜಾರಿ ಮಾಡಿದ್ದಾರೆ.

DK District Congress issues show cause notice to Pratibha Kulai for taking to media

ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರತಿಭಾ ಕುಳಾಯಿ ಪಕ್ಷದ ರಾಜ್ಯ ಮುಖಂಡರು‌ ಮತ್ತು ಜಿಲ್ಲಾ ಮುಖಂಡರುಗಳ ಅನುಮತಿ ಪಡೆಯದೆ ಮಾತಾಡಿರುವುದಕ್ಕೆ ನೋಟೀಸ್ ಜಾರಿ‌ಮಾಡಲಾಗಿದೆ ಎಂದು ಹೇಳಲಾಗಿದ್ದು, ಏಳು ದಿನಗಳೊಳಗೆ ನೋಟೀಸ್ ಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The district Congress has issued a show-cause notice to corporator Pratibha Kulai for appearing in a debate on television channels without the party's permission.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ