ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡದಲ್ಲಿ ಮತದಾರರ ಪಟ್ಟಿ ಅಂತಿಮ

|
Google Oneindia Kannada News

ಮಂಗಳೂರು, ಜನವರಿ 17: ಮುಂಬರುವ ಲೋಕಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಮತದಾರರ ಅಂತಿಮ ಪಟ್ಟಿಯ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಜಿಲ್ಲೆಯಲ್ಲಿ ಒಟ್ಟು 8,33,719 ಪುರುಷ ಮತದಾರರು ಹಾಗೂ 8,63,698 ಮಹಿಳಾ ಮತದಾರರಿದ್ದು, ಒಟ್ಟು 16,97,417 ಮತದಾರರನ್ನು ಗುರುತಿಸಲಾಗಿದೆ. ಮುಂದೆ ಚುನಾವಣೆ ದಿನಾಂಕ ನಿಗದಿಪಡಿಸುವವರೆಗೂ ಹೊಸ ಹೆಸರು ಸೇರ್ಪಡೆ, ಹೆಸರು ಹಿಂತೆಗೆತ, ಬದಲಾವಣೆ ಇತ್ಯಾದಿಗಳನ್ನು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗ

ಅರ್ಹ ಮತದಾರರ ನೋಂದಣಿಗಾಗಿ 2018ರ ನವೆಂಬರ್.17 ಮತ್ತು 18ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿನ ಕಾಲೇಜುಗಳಲ್ಲಿ ಮತದಾರರ ನೋಂದಣಿ ಹಮ್ಮಿಕೊಳ್ಳಲಾಗಿತ್ತು. 2018 ನವೆಂಬರ್.23ರಿಂದ 25ರ ತನಕ ಚುನಾವಣಾ ಆಯೋಗದ ಸೂಚನೆಯಂತೆ ಎಲ್ಲಾ ಮತಗಟ್ಟೆಗಳು ಮತ್ತು ಕಾಲೇಜುಗಳಲ್ಲಿ ವಿಶೇಷ ನೋಂದಣಿ ಅಭಿಯಾನ ನಡೆಸಲಾಗಿತ್ತು.

DK administration releases new voters list

ಮುಂಬರುವ ಚುನಾವಣೆಗೆ ಜಿಲ್ಲೆಯಲ್ಲಿ 71 ನೂತನ ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಹಿಂದೆ ಜಿಲ್ಲೆಯಲ್ಲಿ 1,790 ಮತಗಟ್ಟೆಗಳಿದ್ದವು. ಹೆಚ್ಚುವರಿ 71 ನೂತನ ಮತಗಟ್ಟೆಗಳ ಸೇರ್ಪಡೆಯಿಂದಾಗಿ ಮತಗಟ್ಟೆಗಳ ಸಂಖ್ಯೆ 1,861ಕ್ಕೆ ಏರಿಕೆಯಾಗಿದೆ.

 ಜನವರಿ 25ರ ಬಳಿಕ ಹೊಸ ಮಾತದಾರರ ಕೈಸೇರಲಿದೆ ಗುರುತಿನ ಚೀಟಿ ಜನವರಿ 25ರ ಬಳಿಕ ಹೊಸ ಮಾತದಾರರ ಕೈಸೇರಲಿದೆ ಗುರುತಿನ ಚೀಟಿ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 241, ಮೂಡಬಿದರೆಯಲ್ಲಿ 221, ಮಂಗಳೂರು ನಗರ ಉತ್ತರದಲ್ಲಿ 245, ಮಂಗಳೂರು ನಗರ ದಕ್ಷಿಣದಲ್ಲಿ 244, ಮಂಗಳೂರು ಕ್ಷೇತ್ರದಲ್ಲಿ 210, ಬಂಟ್ವಾಳದಲ್ಲಿ 249, ಪುತ್ತೂರಿನಲ್ಲಿ 220 ಮತ್ತು ಸುಳ್ಯದಲ್ಲಿ 231 ಮತಗಟ್ಟೆಗಳನ್ನು ಗುರುತಿಸಲಾಗಿದೆ.

English summary
Dakshina kannada administration has prepared the total number of voters as 16,97,417 for the upcoming Lok Sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X