ನೌಕ ದಳಕ್ಕೆ ಆಯ್ಕೆಯಾದ ಮಂಗಳೂರಿನ ದಿಶಾಳ ಸಾಹಸಗಾಥೆ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್. 21 : ಒಂದು ಕುಟುಂಬ.. ಒಂದೇ ಆಸೆ, ಗುರಿ, ಕನಸು. ಒಂದೇ ಕುಟುಂಬದಲ್ಲಿರುವ ನಾಲ್ಕು ಮಂದಿಯ ಗುರಿ ಈಡೇರಿದ್ದು ಆ ಕುಟುಂಬದ ಹೆಣ್ಮಗುವಿಂದ.

ಹೌದು, ಇದು ದಕ್ಷಿಣ ಭಾರತದಲ್ಲೇ ನೌಕಾ ದಳಕ್ಕೆ ಆಯ್ಕೆಯಾದ ಪ್ರಪ್ರಥಮ ಯುವತಿ ದಿಶಾ ಅಮೃತಳ ಸಾಹಸಗಾಥೆ. ಈಕೆ ಮಂಗಳೂರಿನ ಬೋಳೂರು ತಿಲಕ್ ನಗರದ ಅಮೃತ್ ಕುಮಾರ್ ಹಾಗೂ ಲೀಲಾ ಅಮೃತ್ ದಂಪತಿ ಪುತ್ರಿ. ಈ ಹಿಂದೆ ಸರ್ಕಾರಿ ಹುದ್ದೆಯಲ್ಲಿದ್ದು ನಿವೃತ್ತಿಯಾಗಿರುವ ಅಮೃತ್ ರಿಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಗುರಿ ಇತ್ತು. ಆದರೆ ಅವಕಾಶ ಸಿಕ್ಕಿರಲಿಲ್ಲ.

ಇವರ ಪತ್ನಿ ಲೀಲಾರಿಗೂ ಸಹ ಭಾರತೀಯ ಸೇನೆಯ ಮೇಲೆ ಅಪಾರ ಗೌರವ. ಆದರೆ ಅವಕಾಶ ಕೂಡಿ ಬರಬೇಕಲ್ವಾ..? ಕೊನೆಗೆ ಇವರ ಆಸೆ ಈಡೇರಿದ್ದು ದಿಶಾಳ ಮೂಲಕ.

ಮಂಗಳೂರಿನ ಕೆನರಾ ಸ್ಕೂಲ್ ನಲ್ಲಿ ಎಲ್ ಕೆಜಿಯಿಂದ ಹಿಡಿದು ಪಿಯುಸಿಯವರೆಗೆ ಶಿಕ್ಷಣ ಕಲಿತ ದಿಶಾ ನಂತರ ಬೆಂಗಳೂರಿನ ಬಿಎ ಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಒಂದೂವರೆ ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಸೋಸಿಯೇಟ್ ಇಂಜಿನಿಯರ್ ಆಗಿ ಕೆಲಸ ಮಾಡಿದ ದಿಶಾ ಭಾರತೀಯ ಸೇನೆಗೆ ಸೇರಲು ಪ್ರಯತ್ನಿಸಿದರು.

ಶಾಲಾ ದಿನಗಳಲ್ಲಿ ಎನ್ ಸಿಸಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದ ಕಾರಣ 2008 ರಲ್ಲಿ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಈಕೆಯ ಚುರುಕುತನವನ್ನ ನೋಡಿದ ಹಿರಿಯ ಅಧಿಕಾರಿಗಳು ಸೇನೆ ಸೇರಲು ಪ್ರೇರೆಪಿಸಿದರು. ಅಲ್ಲದೇ ಅರ್ಹತೆ ಪಡೆಯಲು ದಿಶಾ ವಿವಿಧ ಪರೀಕ್ಷೆಗಳನ್ನು ಎದುರಿಸಿದಳು.

ಈಕೆಗೆ ಆರ್ಮಿಗೆ ಸೇರಬೇಕೆಂಬ ಆಸೆ ಇದ್ದರೂ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲಿಲ್ಲ. ನಾಲ್ಕು ಸಲ ರಿಜೆಕ್ಟ್ ಆಗಿದ್ದಳು. ಕೊನೆಗೆ ನೌಕಾ ದಳಕ್ಕೆ ಆಯ್ಕೆಯಾದರು.ಇದೀಗ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಏಳು ಜನರ ಪೈಕಿ ದಕ್ಷಿಣ ಭಾರತದಿಂದ ದಿಶಾ

ಏಳು ಜನರ ಪೈಕಿ ದಕ್ಷಿಣ ಭಾರತದಿಂದ ದಿಶಾ

ಈ ಹುದ್ದೆಗೆ ದೇಶದಲ್ಲಿ ಏಳು ಮಂದಿ ಆಯ್ಕೆಯಾಗಿದ್ದಾರೆ. ಆದರೆ ಈ ಹುದ್ದೆಗೆ ದಕ್ಷಿಣ ಭಾರತದಲ್ಲಿ ಆಯ್ಕೆಯಾದ ಯುವತಿ ಈಕೆ ಒಬ್ಬಳೇ. ಇಷ್ಟಪಡುವ ದಿಶಾಳ ಮನೆಯಲ್ಲೀಗ ಹಬ್ಬದ ಸಂಭ್ರಮ. ಇನ್ನು ಇವರ ಅಕ್ಕ ಜೋಸ್ನಾ ಸಾದಾರ್ಣದವರಲ್ಲ, ಪ್ರಸ್ತುತ ಇವರು ಡೆನ್ಮಾರ್ಕ್ ನಲ್ಲಿದ್ದಾರೆ. ಹಾಕೇ ಕಲೆಯಲ್ಲಿ ಎತ್ತಿದ ಕೈ, ಇವರ ಅತ್ಯತ್ತಮ ಕಲೆಗೆ 2004ರಲ್ಲಿ ದೇಶದ ರಾಷ್ಟ್ರಪತಿಯಿಂದ ಬಾಲ್ ಶ್ರೀ ಪ್ರಶಸ್ತಿ ಕೂಡ ದೊರಕಿದೆ .

ದಿಶಾಳ ಮನೆಯಲ್ಲಿ ಮಿಲಿಟರಿ ರೂಲ್

ದಿಶಾಳ ಮನೆಯಲ್ಲಿ ಮಿಲಿಟರಿ ರೂಲ್

ಬೆಳಿಗ್ಗೆ 6ಗಂಟೆಗೆ ಹೇದೇಳಬೇಕು. 8.30ಕ್ಕೆ ತಿಂಡಿ ತಿಂದು ಮುಗಿಸಬೇಕೊಂಡು 9ಗಂಟೆಗೆ ಶಾಲೆ ತಲುಪಿರಬೇಕು.
ಇನ್ನು ಶಾಲೆಯಿಂದ ಬಂದ ನಂತರ ಹೋಮ್ ವರ್ಕ್ ಮಾಡಬೇಕು, 5.30 ಆಟವಾಡುವ ಸಮಯ, 7.30ಮನೆಗೆ ಇಂತಿರುಗಿ ಬರಬೇಕು, ವಿಶೇಷ ಏನಾಪ್ಪ ಅಂದ್ರೆ, ಪ್ರತಿ ದಿನ ರಾತ್ರಿ 9.30ಕ್ಕೆ ಇವರ ಮನೆಯಲ್ಲಿ 4 ಮಂದಿ ಸದ್ಯಸರು ಸೇರಿ ಸಾಮಾನ್ಯ ರಸಪ್ರಶ್ನೆ ಸ್ಪರ್ಧೆ ಆಯೋಜಿಸುತ್ತಾರೆ, ಇವೆಲ್ಲ ನನ್ನ ಸಾಧನೆಗೆ ಸ್ಪೂರ್ತಿ ಎಂದು ಹೇಳುತ್ತಾರೆ ದಿಶಾ

2008ರ ಏನ್ ಸಿ ಸಿ ಪೆರೇಡ್ ವರದಾನ

2008ರ ಏನ್ ಸಿ ಸಿ ಪೆರೇಡ್ ವರದಾನ

ಇನ್ನು 2008ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಏನ್ ಸಿ ಸಿ ಪೆರೇಡ್ ನಲ್ಲಿ "ಅತ್ಯುತ್ತಮ ಕೆಡೆಟ್" ಎಂಬ ಪ್ರಶಸ್ತಿ ಕೂಡ ಇವರಿಗೆ ಲಾಭವಾಗಿದೆ. 2008ರಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ದೇಶದ 8 ಮಂದಿ ಹುಡುಗಿಯರ ಪೈಕಿ ಮಂಗಳೂರಿನ ದಿಶಾ ಕೂಡ ಒಬ್ಬರು. ಏನ್ ಸಿ ಸಿ ಯಾ ಜೂನಿಯರ್ ವಿಂಗ್ ಪರೀಕ್ಷೆಯಲ್ಲಿ ಆ ಗ್ರೇಡ್ ಪಡೆದ್ದಿದ್ದು, ಸೀನಿಯರ್ ವಿಂಗ್ ಪರೀಕ್ಷೆಯಲ್ಲಿ ಕೂಡ ಆ ಗ್ರೇಡ್ ನಲ್ಲೆ ಪಾಸ್.

ಒನ್ ಇಂಡಿಯಾ ಜತೆ ದಿಶಾ

ಒನ್ ಇಂಡಿಯಾ ಜತೆ ದಿಶಾ

ಕೆನರಾ ಶಾಲೆಯ ಅಧ್ಯಾಪಕರು, ಬಿ ಎಂ ಸ್ ಕಾಲೇಜ್ ನ ಪ್ರಾಂಶುಪಾಲರು, ಅಧ್ಯಾಪಕರು ಹಾಗು ಕಾಲೇಜಿನ ಆಡಳಿಯ ಮಂಡಳಿ, ತನ್ನ ಆತ್ಮೀಯ ಸ್ನೇಹಿತರಿಗೆ, ಅದಕ್ಕಿಂತ ಮಿಗಿಲಾಗಿ ನನ್ನ ತಂದೆ ತಾಯಿ ಹಾಗು ಅಕ್ಕಗೆ ತುಂಬಾ ಹೃದಯದ ಕೃತಜ್ಞತೆಗಳು ಎಂದು ತಮ್ಮ ಸಂತಸವನ್ನು ಒನ್ ಇಂಡಿಯಾಕ್ಕೆ ಹಂಚಿಕೊಂಡರು.

ಏನಿ ವೇ, ಗುಡ್ ಲಕ್ ದಿಶಾ

ಏನಿ ವೇ, ಗುಡ್ ಲಕ್ ದಿಶಾ

ಏಳು ಜನರ ಪೈಕಿ ದಕ್ಷಿಣ ಭಾರತದಿಂದ ಭಾರತೀಯ ನೌಕ ದಳಕ್ಕೆ ಆಯ್ಕೆಯಾಗಿರುವ ಮಂಗಳೂರಿನ ಬೆಡಗಿ ದಿಶಾ ಅವರು ಮುಂದೆ ಈ ಹುದ್ದೆಯಲ್ಲಿ ಇನ್ನೂ ಹೆಚ್ಚು-ಹೆಚ್ಚು ಸಾಧನೆಗಳನ್ನು ಮಾಡಿ ಇನಷ್ಟು ಏತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Exclusive interview by Oneindia Kannada with Disha who is selected as Navy Observor officer in aviation specialization among 7 in India. She is the only girl selected from south India who hails from Mangaluru.
Please Wait while comments are loading...