ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಯದಲ್ಲೀಗ ದೀಕ್ಷಿತ್ ಗೌಡ ಇಸ್ಲಾಂ ಧರ್ಮಕ್ಕೆ ಮತಾಂತರದ್ದೇ ಸುದ್ದಿ

|
Google Oneindia Kannada News

ಸುಳ್ಯ, ಸೆಪ್ಟೆಂಬರ್ 9: ಅಲೆಟ್ಟಿ ಗ್ರಾಮದ ಆರಂಬೂರಿನ ಪಾಳಡ್ಕದ ದೀಕ್ಷಿತ್ ಗೌಡ (19) ಎಂಬ ಯುವಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಕುರಿತು ವ್ಯಾಪಕ ಪ್ರಚಾರವಾಗಿದ್ದು, ಬುಧವಾರ ಆತ ಮನೆ ಬಿಟ್ಟು ತೆರಳಿದ್ದಾನೆ.

ಆರಂಬೂರು ಜನಾರ್ದನ ಗೌಡರ ಏಕೈಕ ಪುತ್ರ ದೀಕ್ಷಿತ್ ಗೌಡ ಕೇರಳದ ಕಾಂಜ್ಞಗಾಡಿನಲ್ಲಿ ಆಯಿಲ್ ಮತ್ತು ಗ್ಯಾಸ್ ಡಿಪ್ಲೊಮಾ ತರಬೇತಿಗೆಂದು ತೆರಳಿದ್ದು, ಅಲ್ಲಿ ಮತಾಂತರ ಆಗಿರುವುದಾಗಿ ವ್ಯಾಪಕ ವದಂತಿ ಹಬ್ಬಿದೆ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗಲೇ ಮುಸ್ಲಿಂ ಧರ್ಮದತ್ತ ಒಲವು ಹೊಂದಿದ್ದ ಅತ, ದ್ವಿತೀಯ ಪಿಯುಸಿಯಲ್ಲಿ ಗಣಿತ ವಿಷಯದಲ್ಲಿ ಫೇಲ್ ಆಗಿದ್ದ.[ಟಿಪ್ಪು ದಕ್ಷಿಣದ ಔರಂಗಜೇಬ್, ಸಿದ್ದರಾಮಯ್ಯ ದಕ್ಷಿಣದ ಲಾಲೂ ಪ್ರಸಾದ್: RSS]

Dikshith gowda islam conversion news viral in sullia

ಈತ ಸುಳ್ಯದ ಕೆಲವು ಮುಸ್ಲಿಂ ಯುವಕರೊಂದಿಗೆ ಸುತ್ತಾಟ ನಡೆಸುತ್ತಿದ್ದ. ಮೂರು ತಿಂಗಳ ಹಿಂದೆ ಆತನ ಸ್ನೇಹಿತನೊಬ್ಬ ಆರಂಬೂರಿನ ಜನಾರ್ದನ ಗೌಡರ ಮನೆಗೆ ಬಂದಿದ್ದು, ದೀಕ್ಷಿತ್ ಮುಸ್ಲಿಂ ಧರ್ಮಾಚರಣೆ ಮಾಡುತ್ತಿರುವುದಾಗಿ ಮನೆಯವರಿಗೆ ತಿಳಿಸಿದ್ದ.

ಚೌತಿ ಹಬ್ಬಕ್ಕೆಂದು 15 ದಿನಗಳ ಹಿಂದೆ ದೀಕ್ಷಿತ್ ಗೌಡ ಮನೆಗೆ ಬಂದಿದ್ದ ಸಂದರ್ಭ ಗಡ್ಡ ಬಿಟ್ಟಿದ್ದು, ಮುಸ್ಲಿಮರಂತೆ ಕಾಣಿಸುತ್ತಿದ್ದ ಎಂದು ಊರಿನವರು ಹೇಳುತ್ತಾರೆ. ಮನೆಯಲ್ಲಿ ಬುಧವಾರ ಬೆಳಗ್ಗೆ ನಮಾಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ತಂದೆ ಜನಾರ್ದನ ಗೌಡರು ಮಗನನ್ನು ಥಳಿಸಿದ್ದರು. ಇದರಿಂದ ಬೇಸತ್ತ ದೀಕ್ಷಿತ್, ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಟಿದ್ದ.[ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್]

ಸಂಜೆಯಾದರೂ ಮನೆಗೆ ಬಾರದಿರುವುದರಿಂದ ಆತಂಕಗೊಂಡ ಜನಾರ್ದನ ಗೌಡರು ನಾಪತ್ತೆ ಕುರಿತು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ದೀಕ್ಷಿತ್ ಸಣ್ಣವನಿದ್ದಾಗಲೇ ಯೋಗ ಮಾಡುತ್ತಿದ್ದು, ಬೆಳಗ್ಗೆ ಯೋಗ ಮಾಡಿದ್ದೋ ನಮಾಜ್ ಮಾಡಿದ್ದೋ ಎಂಬ ಬಗ್ಗೆ ಇನ್ನೂ ನನಗೆ ಗೊಂದಲವಿದೆ ಎಂದು ಜನಾರ್ದನ ಗೌಡ ಹೇಳಿದ್ದಾರೆ.

ತನ್ನ ಮೊಬೈಲ್ ಫೋನ್, ಹಣ ಯಾವುದನ್ನೂ ಕೊಂಡೊಯ್ಯದೆ ಮನೆ ತೊರೆದ ದೀಕ್ಷಿತ್ ಸಂಜೆ ತಾಯಿಗೆ ಫೋನ್ ಮಾಡಿ, ನಾನು ಚೆನ್ನೈಗೆ ಹೋಗುತ್ತಿದ್ದೇನೆ, ಒಂದು ವಾರದಲ್ಲಿ ಮನೆಗೆ ಬರುತ್ತೇನೆ ಎಮ್ದು ತಿಳಿಸಿದ್ದಾನೆ. ಕರೆ ಬಂದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ನಾನು ಕಾಸರಗೋಡಿನ ಶಾಫಿ ಎಂದು ಆತ ಉತ್ತರಿಸಿದ್ದಾನೆ.[ಪಕ್ಷದ ನಾಯಕರ ಅಸಂಬದ್ದ ಹೇಳಿಕೆ: ಸತ್ಯ ಒಪ್ಪಿಕೊಂಡ ಅಮಿತ್ ಶಾ]

ಸಹ ಪ್ರಯಾಣಿಕನೊಬ್ಬ ಮೊಬೈಲ್ ಬಿಟ್ಟು ಬಂದಿದ್ದು, ಮನೆಗೆ ಕರೆ ಮಾಡಲು ತನ್ನ ಮೊಬೈಲ್ ಕೇಳಿದಾಗ ನೀಡಿದ್ದಾಗಿ ಆತ ಉತ್ತರಿಸಿದ್ದಾನೆ. ಆದರೆ ದೀಕ್ಷಿತ್ ಚೆನ್ನೈಗೆ ಹೋಗದೆ ತಿರೂರಿಗೆ ತೆರಳಿದ್ದು, ಅಲ್ಲಿಂದ ಗುರುವಾರ ಬೆಳಿಗ್ಗೆ ತನ್ನ ತಾಯಿಗೆ ಕರೆ ಮಾಡಿದ್ದಾನೆ. ನಾನು ಚೆನ್ನೈಗೆ ತಲುಪಿರುವುದಾಗಿ ಆತ ತಾಯಿಗೆ ತಿಳಿಸಿದ್ದಾನೆ.

English summary
Deekshith gowda conversion news become viral in Sullia, Dakshin Kannada. Deekshith gowda left house on Wednesday, his father registered a complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X