ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರವೇ ಮಂಗಳೂರಿನಲ್ಲಿ ಡಿಸಾಲಿನೇಷನ್ ಸ್ಥಾವರ ಅಸ್ತಿತ್ವಕ್ಕೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ. 02 : ಸರ್ಕಾರಿ ಸ್ವಾಮ್ಯದ ಪೆಟ್ರೋ ಕೆಮಿಕಲ್ ಕಂಪೆನಿ ಹೆಚ್ಚಿನ ಮುತುವರ್ಜಿ ವಹಿಸಿರುವುದರಿಂದ ನಗರದಲ್ಲಿ ಶೀಘ್ರದಲ್ಲಿಯೇ ಡಿಸಾಲಿನೇಷನ್ (ನೀರಿನ ಉಪ್ಪಿನಂಶ ತೆಗೆಯುವ) ಸ್ಥಾವರ ಅಸ್ತಿತ್ವಕ್ಕೆ ಬರುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.

ಈಗಾಗಲೇ ಡಿಸಾಲಿನೇಷನ್ ಸ್ಥಾವರ ಪರಿಣಾಮಕಾರಿಗೊಳಿಸುವಂತೆ ಎಂಆರ್ ಪಿಎಲ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಮಹಾನಗರ ಪಾಲಿಕೆಯ ತಂಡವೊಂದು ಮುಂದಿನ ತಿಂಗಳು ಪೂರ್ವ ಕರಾವಳಿಯಲ್ಲಿ ಡಿಸಾಲಿನೇಷನ್ ಸ್ಥಾವರ ಹೇಗೆ ಕರ್ತವ್ಯ ನಿರ್ವಹಿಸುತ್ತಿದೆ ಎಂಬುದನ್ನು ಅಧ್ಯಯನ ನಡೆಸಲು ಚೆನ್ನೈಗೆ ಭೇಟಿ ನೀಡಲಿದೆ.

Desalination plant in Mangaluru may become a reality as MRPL shows interest

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಇಂಡಸ್ಟ್ರೀಸ್ ಸೆಂಟರ್ ನ ಸಹ ನಿರ್ದೇಶಕ ಗೋಕುಲದಾಸ್ ನಾಯಕ್, ಎಂಆರ್ ಪಿಎಲ್ (ದಿನಕ್ಕೆ 10 ದಶಲಕ್ಷ ಲೀಟರ್ )50 ಎಂಎಲ್ ಡಿ ಸಾಮರ್ಥ್ಯದ ಪ್ಲ್ಯಾಂಟನ್ನು ತಣ್ಣೀರು ಬಾವಿ ಪ್ರದೇಶದಲ್ಲಿ ಸುಮಾರು 10 ಎಕ್ಕರೆ ಜಾಗದಲ್ಲಿ ಅಂದಾಜು 200 ರು. ಕೋಟಿ ವೆಚ್ಚದಲ್ಲಿ ಅಸ್ಥಿತ್ವಗೊಳಿಸಲು ಪ್ರಸ್ತಾವಿಸಿದೆ.

ಇದೇ ವೇಳೆ ಎಂಆರ್ ಪಿಎಲ್ ಉತ್ಪಾದನಾ ಸಾಮರ್ಥ್ಯವನ್ನು ಪ್ರಸಕ್ತ ಇರುವ 15 ಮಿಲಿಯನ್ ಮೆಟ್ರಿಕ್ ಟನ್ನುಗಳನ್ನು 2020ರೊಳಗೆ 18ದಶಲಕ್ಷ ಮೆಟ್ರಿಕ್ ಟನ್ನುಗಳಿಗೆ ವಿಸ್ತರಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಕೋರಿಕೊಂಡಿದೆ.

ಹಾಗಾಗಿ ಎಂಆರ್ ಪಿಎಲ್ ಹೆಚ್ಚಿನ ನೀರಿನ ಅವಶ್ಯಕತೆಯನ್ನು ಹೊಂದಿದೆ ಎಂದು ಹೇಳಿದರು.

English summary
A move to set up a desalination plant in the city has inched forward with a government owned petrochemical company coming forward for it even as a team of Mangaluru City Corporation is set to visit Chennai next month to study the functioning of such a plant in the Eastern coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X