ಫೇಸ್ಬುಕ್ ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದವ ಒಳಗೆ

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 12 : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದವನನ್ನು ಬುಧವಾರ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ದೀಪಕ್ ಕಾಮತ್ ಎಂಬಾತ ಯುವಕ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ದಲಿತರು ಮೋಸಗಾರರು, ದ್ರೋಹಿಗಳು ಎಂದು ಅಶುದ್ಧ ಶಬ್ದಗಳಿಂದ ಅಂಬೇಡ್ಕರ್ ಹಾಗೂ ದಲಿತರ ವಿರುದ್ಧ ಅವಹೇಳನಕಾರಿ ಬರಹ ಪೋಸ್ಟ್ ಹಾಕಿ ನಿಂದಿಸಿದ್ದಾನೆ.

Derogatory comments on facebook against Dr Ambedkar accused Deepak Kamath Arrested

ಇದರಿಂದ ಆಕ್ರೋಶಗೊಂಡ ದಲಿತ ಸಂಘಟನೆಳ ಒಕ್ಕೂಟ ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಧಾಖಲಿಸಿಕೊಂಡ ಪೊಲೀಸರು ದೀಪಕ್ ಕಾಮತ್ ಗಾಗಿ ಶೋಧ ನಡೆಸಿ ಎರಡು ತಿಂಗಳ ನಂತರ ಬಂಧಿಸುವಲ್ಲಿ ಪಾಂಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Pandeshwar police arrest Deepak Kamath for alleged derogatory comments on facebook against Dr Ambedkar.
Please Wait while comments are loading...