ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ-ಪರಮೇಶ್ವರ್ ರಹಸ್ಯ ಮಾತುಕತೆ

|
Google Oneindia Kannada News

ಮಂಗಳೂರು ಜೂನ್. 25 : ರಾಜ್ಯ ರಾಜಕೀಯದಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ನೂತನ ಮೈತ್ರಿ ಸರ್ಕಾರದ ಬಜೆಟ್ ಮಂಡನೆಯ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಯಲದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಮಹತ್ವ ಪಡೆಯುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗೆ ಮೊರೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಏಕಾಏಕಿ ರಾಜಕೀಯವಾಗಿ ಚುರುಕಾಗಿದ್ದಾರೆ.

ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ?ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ?

ಒಬ್ಬರ ಹಿಂದೆ ಮತ್ತೊಬ್ಬರಂತೆ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ಹಾಗೂ ಚರ್ಚೆ ನಡೆಸುತ್ತಿರುವ ಸಿದ್ದರಾಮಯ್ಯ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Deputy chief minister Dr.G Parameshwar met Siddaramaiah

ಈ ಹಿನ್ನೆಲೆಯಲ್ಲಿ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರ ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗಿದೆ.

ಭಾನುವಾರ ಏಕಾಏಕಿ ಉಪಮುಖ್ಯಮಂತ್ರಿ ಡಾ .ಜಿ ಪರಮೇಶ್ವರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಿ. ಪರಮೇಶ್ವರ್ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪರಮೇಶ್ವರ್ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಆಪ್ತ ಶಾಸಕರ ಜೊತೆ ರಹಸ್ಯ ಸಭೆ ನಡೆಸಿದ ಸಿದ್ದರಾಮಯ್ಯ!ಆಪ್ತ ಶಾಸಕರ ಜೊತೆ ರಹಸ್ಯ ಸಭೆ ನಡೆಸಿದ ಸಿದ್ದರಾಮಯ್ಯ!

ಈ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪರಮೇಶ್ವರ್ , ಸಮ್ಮಿಶ್ರ ಸರ್ಕಾರ ಹೊಸ ಬಜೆಟ್ ಮಂಡಿಸುವುದು ಸ್ವಾಭಾವಿಕ. ಅದರಲ್ಲಿ ಹೊಸತೇನಿಲ್ಲ. ಹಾಗಂತ ಹಳೇ ಕಾರ್ಯಕ್ರಮಗಳನ್ನು ಬದಲು ಮಾಡುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನು ಮುಂದುವರಿಸುತ್ತೇನೆ

ತೆಗೆದುಕೊಳ್ಳುವುದಿಲ್ಲ. ನಿಗಮ ಮಂಡಳಿ, ಸಂಪುಟ ರಚನೆ ಇರಬಹುದು ಎಲ್ಲವನ್ನೂ ಅವರೊಂದಿಗೆ ಚರ್ಚಿಸುತ್ತೇನೆ. ನಿಗಮ ಮಂಡಳಿಗೆ ಒಂದಷ್ಟು ಹೆಸರು ಇಟ್ಟುಕೊಂಡು ಬಂದಿದ್ದೇನೆ.

Deputy chief minister Dr.G Parameshwar met Siddaramaiah

ಸಾಲಮನ್ನಾಕ್ಕೆ ಮುಖ್ಯಮಂತ್ರಿ ಅವರು ಕೇಂದ್ರದ ಬಳಿ 50 ಸಾವಿರ ಕೋಟಿ ಕೇಳಿದ್ದಾರೆ. ರಾಜ್ಯದ ಕಷ್ಟದ ಕುರಿತು ಪ್ರಧಾನಿ ಅವರಿಗೆ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು. ಹಾಗಾಗಿ ಬಜೆಟ್ ನಲ್ಲಿ ಸಾಲಮನ್ನಾ ಬಗ್ಗೆ ನಿರ್ಧರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಅವರಿಗೆ ಅಸಮಾಧಾನ ಇರುವ ಬಗ್ಗೆ ನನಗೆ ಗೊತ್ತಿಲ್ಲ. ನನ್ನಲ್ಲಿ ಅವರು ಈ ವರೆಗೂ ಹೇಳಿಕೊಂಡಿಲ್ಲ. ಏನಿದ್ದರೂ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.

ನಂತರ ಶಾಂತಿವನಕ್ಕೆ ತೆರಳಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪರಮೇಶ್ವರ್ ರಹಸ್ಯ ಮಾತುಕತೆ ನಡೆಸಿರುವುದು ಈಗ ಮಹತ್ವ ಪಡೆದಿದೆ. ಪ್ರಕೃತಿ ಚಿಕಿತ್ಸಾಲಯದ ಕೊಠಡಿಯಲ್ಲಿ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಒಂದು ಗಂಟೆ ಕಾಲ ಉಭಯ ನಾಯಕರು ಚರ್ಚೆ ನಡೆಸಿದ್ದು, ಈ ಸಂದರ್ಭದಲ್ಲಿ ಇತರ ಯಾವುದೇ ನಾಯಕರಿಗೆ ಕೊಠಡಿಯೊಳಗೆ ಪ್ರವೇಶ ಇರಲಿಲ್ಲ.

ಚರ್ಚೆ ಸಂದರ್ಭದಲ್ಲಿ ಸಾಲಮನ್ನಾ, ನಿಗಮ ಮಂಡಳಿ ವಿಚಾರದಲ್ಲಿ ನಿರ್ಣಾಯಕ ಮಾತುಕತೆ ನಡೆದಿದೆ. ಅದಲ್ಲದೇ ಕೆಲ ಮಹತ್ವದ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

English summary
Deputy chief minister Dr. G Parameshwar yesterday met Former Chief minister Siddaramaiah in Darmasthala. It is now politically significant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X