ಮಂಗಳೂರಲ್ಲಿ ಡೆಂಗ್ಯೂ, ಮಲೇರಿಯಾ ಆತಂಕ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 20 : ಮಂಗಳೂರಿನಲ್ಲಿ ಡೆಂಗ್ಯೂ ಜ್ವರ ಜನರಲ್ಲಿ ಆತಂಕ ಉಂಟು ಮಾಡಿದೆ. ಮಂಗಳೂರು ತಾಲೂಕು ಗ್ರಾಮಾಂತರ ಭಾಗದಲ್ಲಿ ಜುಲೈ ಮೊದಲ ವಾರದವರೆಗೂ 300ಕ್ಕೂ ಹೆಚ್ಚು ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಗ್ರಾಮೀಣ ಭಾಗದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಇದುವರೆಗೂ ಈ ಡೆಂಗ್ಯೂ ಮತ್ತು ಮಲೇರಿಯಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಮಂಗಳೂರು ಗ್ರಾಮಾಂತರದಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ.[ಬೆಳ್ತಂಗಡಿಯಲ್ಲಿ ಡೆಂಗ್ಯೂ ಜ್ವರದ ದಾಂಗುಡಿಗೆ ಇಬ್ಬರು ಬಲಿ]

Dengue creates panic in Mangaluru taluk

3 ತಂಡ ರಚನೆ : ಮಂಗಳೂರು ಗ್ರಾಮಾಂತರ ತಾಲೂಕು ಆರೋಗ್ಯಾಧಿಕಾರಿಯವರ ನೇತೃತ್ವದಲ್ಲಿ ಡೆಂಗ್ಯೂ, ಮಲೇರಿಯಾ, ಇಲಿಜ್ವರ ಇನ್ನಿತರ ಪ್ರಕರಣಗಳ ಪತ್ತೆ ಹಚ್ಚುವಿಕೆ ಹಾಗೂ ನಿಯಂತ್ರಣಾ ಕಾರ್ಯಾಚರಣೆಗೆ ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.[ಡೆಂಗ್ಯೂ ಜ್ವರ ಹೆಚ್ಚಾಗಲು ರಬ್ಬರ್ ಬೆಳೆಗಾರರು ಕಾರಣ?]

ಈ ತಂಡದಲ್ಲಿ ಒಬ್ಬ ವೈದ್ಯರು, ಆರೋಗ್ಯ ಸಹಾಯಕಿಯರು, ಪುರುಷ ಸಹಾಯಕರು ಇದ್ದಾರೆ. ಜನರಿಗೆ ಜ್ವರದ ಬಗ್ಗೆ ಮಾಹಿತಿ ನೀಡುವುದು, ಜನವಸತಿ ಪ್ರದೇಶಗಳಲ್ಲಿ ಫಾಗಿಂಗ್ ಮಾಡುವುದು, ಜ್ವರ ಪ್ರಕರಣಗಳ ಮಾಹಿತಿ ಸಂಗ್ರಹ, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳು , ಖಾಸಗಿ- ಆಸ್ಪತ್ರೆ ಕ್ಲಿನಿಕ್‌ಗಳ ಜತೆ ಸಂವಹನ ನಡೆಸಿ ತಂಡ ವರದಿ ನೀಡುತ್ತದೆ.[ಭಾರತದ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆ ಯಾವಾಗ ಬರುತ್ತದೆ?]

ಮಂಗಳೂರಿನ ತಾಲೂಕಿನ ಅಲ್ಲಲ್ಲಿ ಇಲಿ ಜ್ವರವೂ ಕಾಣಿಸಿಕೊಂಡಿದ್ದು, ಇಲಿ ಜ್ವರದ ಬಾಧೆಯಿಂದ ಬಜಪೆ ಗ್ರಾಮ ಪಂಚಾಯಿತಿ ಸದಸ್ಯ ವಾಮನ ಗೌಡ (45) ಅವರು ಮೃತಪಟ್ಟಿದ್ದಾರೆ. ಇದು ಮಂಗಳೂರು ಗ್ರಾಮಾಂತರ ತಾಲೂಕಿನಲ್ಲಿ ಇಲಿಜ್ವರದಿಂದ ಸಂಭವಿಸಿದ ಮೊದಲ ಸಾವು.

ವಿಶ್ರಾಂತಿ ಮುಖ್ಯ : ಎಲ್ಲಾ ಜ್ವರ ಪ್ರಕರಣಗಳಿಗೂ ಎಲಿಜಾ ರಕ್ತ ಪರೀಕ್ಷೆ ಮಾಡಲಾಗುವುದಿಲ್ಲ. ಶಂಕಿತ ಎಂದು ಕಂಡು ಬಂದ ಪ್ರಕರಣಗಳನ್ನು ಎಲಿಜಾ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ. ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ, ವಿಶ್ರಾಂತಿ, ದ್ರಾವಣಾಂಶ ಸೇವೆನೆ, ಅತೀ ಮುಖ್ಯ. ಜತೆಗೆ ವಾಸವಿರುವ ಪ್ರದೇಶದ ಶುಚಿತ್ವ ಬಹಳ ಮುಖ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dengue fever creates panic in Mangaluru taluk, Dakshina Kannada district. More than 200 suspected cases of dengue reported till July 2016.
Please Wait while comments are loading...