ಮಂಗಳೂರಿನ ಸಹಕಾರಿ ಬ್ಯಾಂಕಿನ ಮೇಲೆ ಐಟಿ ದಾಳಿ

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 27: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ದಕ್ಷಿಣ ಕನ್ನಡದ ಸಹಕಾರಿ ಬ್ಯಾಂಕಿನ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ.

ಅಪನಗದೀಕರಣದ ನಂತರ ಈ ಸಹಕಾರಿ ಬ್ಯಾಂಕುಗಳಲ್ಲಿ ಅಧಿಕ ಪ್ರಮಾಣದಲ್ಲಿ ಠೇವಣಿಯಾಗಿದ್ದರ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಹಠಾತ್ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Demonetisation: Income tax raids at Mangaluru bank

ಆದಾಯ ತೆರಿಗೆ ಇಲಾಖೆಯ ಆರು ಅಧಿಕಾರಿಗಳು ಹಾಗೂ ಜಾರಿ ನಿರ್ದೇಶನಾಲಯದ ಮೂವರು ಅಧಿಅಕರಿಗಳು ಬ್ಯಾಂಕಿನ ಜಮೆ ಪುಸ್ತಕವನ್ನು ಹುಡುಕಾಡಿ, ನವೆಂಬರ್ 8ರ ನಂತರದ ಠೇವಣಿ ವಿವರಗಳನ್ನು ಪಡೆದುಕೊಂಡಿದ್ದಾರೆ. ಕೊಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಸಹಕಾರಿ ಬ್ಯಾಂಕ್ ಕಚೇರಿ ಮೇಲೆ ಮೊದಲಿಗೆ ದಾಳಿ ನಡೆಸಲಾಯಿತು.


ಕಳೆದ ಒಂದು ವಾರದಿಂದ ಕರ್ನಾಟಕದ ವಿವಿಧೆಡೆ ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ನಡೆಸಲಾಗುತ್ತಿದೆ.ಬ್ಯಾಂಕುಗಳಲ್ಲಿ ಠೇವಣಿ ಇಡುವ ಮೂಲಕ ಕಾಳಧನವನ್ನು ಪರಿವರ್ತನೆ ಮಾಡುವ ವಿಧಾನದ ಮೇಲೆ ಕಡಿವಾಣ ಹಾಕಲು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ಬ್ಯಾಂಕುಗಳಲ್ಲಿ ಕೆವೈಸಿ ಅರ್ಜಿ ತುಂಬದೆ ಸಹಕಾರಿ ಬ್ಯಾಂಕುಗಳಲ್ಲಿ ಹಣ ಠೇವಣಿ ಮಾಡುವ ಅಕ್ರಮ ವ್ಯವಸ್ಥೆಯನ್ನು ತಡೆಗಟ್ಟಲು ನಿರ್ಧರಿಸಲಾಗಿದೆ. ನವೆಂಬರ್ 8ರ ನಂತರ ಬ್ಯಾಂಕುಗಳಲ್ಲಿ ಅಧಿಕ ಪ್ರಮಾಣದ ಮೊತ್ತವನ್ನು ತಮ್ಮ ಖಾತೆಗೆ ಹಾಕಿರುವ ಗ್ರಾಹಕರ ವಿವರಗಳನ್ನು ನೀಡುವಂತೆ ಬ್ಯಾಂಕ್ ಗಳನ್ನು ಕೋರಲಾಗಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Officials from the Income Tax department and the enforcement directorate raided South Canara DCC on Tuesday following tip off about unusual monetary transaction. As part of their crackdown on cooperative banks that have seen sudden surge in deposits post demonetisation, raids were carried out in a joint operation by the ED and IT.
Please Wait while comments are loading...