ಕಟೀಲು ದೇವಿಯನ್ನು ಅವಾಚ್ಯವಾಗಿ ನಿಂದಿಸಿದವರನ್ನು ಬಂಧಿಸಿ

Written By:
Subscribe to Oneindia Kannada

ಮಂಗಳೂರು, ಸೆ 9: ಕಟೀಲು ದುರ್ಗಾಪರಮೇಶ್ವರಿ ದೇವಿಯನ್ನು ಮತ್ತು ಹಿಂದೂ ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ವಿರೋಧಿಸಿ, ಕಟೀಲಿನ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಪೋಷಕರ ಸಹಿ ಸಂಗ್ರಹಿಸಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ.

ಸಮಾಜದ ಸ್ವಾಸ್ಥ್ಯ ಕೆಡಿಸುವವರನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕಾಗಿ ವಿದ್ಯಾರ್ಥಿ ಸಮೂಹ, ಶಿಕ್ಷಕವೃಂದ ಮತ್ತು ಪೋಷಕರು ಜಿಲ್ಲಾಧಿಕಾರಿಯವರನ್ನು ಶುಕ್ರವಾರ (ಸೆ 9) ಆಗ್ರಹಿಸಿದ್ದಾರೆ. (ಕಟೀಲು ದೇವಿ ಬಗ್ಗೆ ಅವಹೇಳನಕಾರಿ ಸಂದೇಶ)

Demanding for arrest of person written about goddess Kateel in his FB timeline

ಕಿಡಿಗೇಡಿಗಳನ್ನು ಹಿಡಿಯಲು ಈಗಾಗಲೇ ಇಲಾಖೆ ಪ್ರವೃತ್ತಿಯಾಗಿದೆ. ಈ ಕುರಿತು ಇನ್ನೂ ಮುತುವರ್ಜಿ ವಹಿಸಿತ್ತೇವೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ನಿಯೋಗಕ್ಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಹೋದ ನಿಯೋಗದಲ್ಲಿ ಬಿಜೆಪಿ ಮುಖಂಡ ಈಶ್ವರ ಕಟೀಲು, ಅಭಿಲಾಷ್ ಶೆಟ್ಟಿ, ಉಪನ್ಯಾಸಕರಾದ ಕೇಶವ ಹೆಗ್ಡೆ, ಶ್ರೀವತ್ಸ, ಸೋಂದಾ ಭಾಸ್ಕರ ಭಟ್ ಮುಂತಾದವರಿದ್ದರು.

ಏನಿದು ಪ್ರಕರಣ: ಆಗಸ್ಟ್ 29ರಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಜಬ್ಬಾರ್, ಬಿ ಸಿ ರೋಡ್ ಎನ್ನುವ ವ್ಯಕ್ತಿ ತನ್ನ ಟೈಂಲೈನ್ ನಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಿ ಹಾಗೂ ಹಿಂದೂ ಧರ್ಮದ ಕುರಿತು ಅವಹೇಳನಕಾರಿಯಾಗಿ ಬರೆದಿದ್ದ.

Demanding for arrest of person written about goddess Kateel in his FB timeline

ಕಾಮುಕ ರಾಮನ ಭಕ್ತ, ಅವನ ಭಕ್ತನಿಂದ ನಾವು ಕಲಿಯುವುದಕ್ಕೆ ಏನೂ ಇಲ್ಲ. ಮಂಗಳೂರಿನಲ್ಲಿ ಮುಸ್ಲಿಂ ಸಮಾಹ ಎದ್ದು ನಿಂತರೆ ಚಡ್ಡಿಗಳು ಭಸ್ಮವಾಗ್ತೀರಾ ಎಚ್ಚರಿಕೆ. ಹರಾಮಿ ರಾಮನ ಭಕ್ತ ನಿನಗಿದು ಕೊನೆಯ ಎಚ್ಚರಿಕೆ ಎಂದು ಎಚ್ಚರಿಕೆ ನೀಡಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Demanding for arrest of person written wrongly about goddess Kateel in his Facebook timeline.
Please Wait while comments are loading...