ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ ಕಲ್ಪಿಸಿ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಏಪ್ರಿಲ್ 12 : ಬೆಲ್ಜಿಯಂನಿಂದ ಉಡುಪಿಯ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಮಹಿಳೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರೂ ಅವರು ವಿಮಾನ ನಿಲ್ದಾಣದಿಂದ ಹೊರಗೆ ಬರಲು ಸಾಧ್ಯವಾಗದೆ ವಾಪಸ್ಸಾಗಿದ್ದಾರೆ.

ಅಮೆರಿಕಾದಲ್ಲಿರುವ ಮಂಗಳೂರು ಮೂಲದ ಮಹಿಳೆಯೊಬ್ಬರು ಕುಟುಂಬದ ಸದಸ್ಯರ ಆರೋಗ್ಯ ವಿಚಾರಿಸಲು ಬಂದಿದ್ದರು. ಆದರೆ, ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗಲಿಲ್ಲ. ಹಲವು ಪ್ರಯತ್ನಗಳ ಬಳಿಕ ಮೂರು ದಿನಗಳ ಮಟ್ಟಿಗೆ ಅವರಿಗೆ ಮಂಗಳೂರಿನಲ್ಲಿರಲು ಅವಕಾಶ ನೀಡಲಾಗಿತ್ತು. [24*7 ಕಾರ್ಯನಿರ್ವಹಿಸಲಿದೆ ಮಂಗಳೂರು ವಿಮಾನ ನಿಲ್ದಾಣ]

 airport

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆಗಳು ನಡೆಯಲು ಇ-ವೀಸಾ ಸೌಲಭ್ಯ ಇಲ್ಲದಿರುವುದು ಕಾರಣವಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಾಗಿದ್ದರೂ ಇಲ್ಲಿ ಈ ಸೌಲಭ್ಯವನ್ನು ಇನ್ನೂ ಕಲ್ಪಿಸಲಾಗಿಲ್ಲ. [ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಕಿರೀಟ]

ಸೋಮವಾರ ವರದಿಯಾದ ಪ್ರಕರಣದಲ್ಲಿ ವಿದೇಶಿ ಮಹಿಳೆ ಇ-ವೀಸಾದೊಂದಿಗೆ ಬೆಲ್ಜಿಯಂನಿಂದ ದುಬೈ ಮೂಲಕ ಮೂಲಕ ಜೆಟ್ ಏರ್‌ವೇಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದರು. ಆದರೆ, ಆಕೆಯ ಬಳಿ ಇದ್ದ ವೀಸಾ ಆನ್ ಅರೈವಲ್‌ಅನ್ನು ಪರಿಶೀಲಿಸುವ ಸೌಲಭ್ಯ ಇಲ್ಲಿನ ಇಮಿಗ್ರೇಶನ್ ವಿಭಾಗದಲ್ಲಿ ಇಲ್ಲದ ಕಾರಣ, ಅಧಿಕಾರಿಗಳು ಆಕೆಯನ್ನು ನಿಲ್ದಾಣದ ಹೊರಗೆ ಹೋಗಲು ಬಿಡಲಿಲ್ಲ. ಬೆಳಗ್ಗೆ 7.30 ಕ್ಕೆ ಬಂದಿದ್ದ ಆಕೆ ರಾತ್ರಿ 11 ಗಂಟೆ ತನಕ ವಿಮಾನ ನಿಲ್ದಾಣದ ಒಳಗೆ ಉಳಿದು ಕೊನೆಗೆ ಅದೇ ವಿಮಾನದಲ್ಲಿ ದುಬೈಗೆ ವಾಪಸ್ ಆಗಿದ್ದಾರೆ.

ಏನಿದು ಈ ವೀಸಾ? : ಇ-ವೀಸಾ ಎನ್ನುವುದು ಎಲೆಕ್ಟ್ರಾನಿಕ್ ತಂತ್ರಜ್ಞಾನದ ಮೂಲಕ ನೀಡಲಾಗುವ ವೀಸಾ . ಇದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕವೇ ವೀಸಾ ಮಂಜೂರಾಗುತ್ತದೆ. ಇಲ್ಲಿ ಸಮಯ ಮತ್ತು ಕಾಗದದ ಉಳಿತಾಯ ಆಗುವುದು ಮಾತ್ರವಲ್ಲದೆ ಹೆಚ್ಚು ಭದ್ರತೆ ಹೊಂದಿರುತ್ತದೆ.

ಸಾಂಪ್ರದಾಯಿಕ ರೀತಿಯಲ್ಲಿ ವೀಸಾ ಪಡೆಯಲು ಸುದೀರ್ಘ ಅರ್ಜಿ ಪ್ರಕ್ರಿಯೆ ಇದೆ. ವಿದೇಶ ಪ್ರಯಾಣ ಮಾಡುವವರು ಅರ್ಜಿ ಜತೆಗೆ ತಮ್ಮ ಮೂಲ ಪಾಸ್ ಪೋರ್ಟ್ ಅನ್ನು ಸಲ್ಲಿಸಬೇಕು. ಈ ವೀಸಾ ಪ್ರಕ್ರಿಯೆಗೆ ಸುಧೀರ್ಘ ಅವಧಿ ತೆಗೆದುಕೊಳ್ಳುತ್ತಿದೆಯಾದರೂ ಇದರ ಸಿಂಧುತ್ವ ಬಹುಕಾಲ ಉಳಿಯುತ್ತದೆ ಹಾಗೂ ಅಧಿಕ ಎಂಟ್ರಿಗಳನ್ನು ಇದರಲ್ಲಿ ನಮೂದಿಸಲು ಅವಕಾಶವಿದೆ.

ಆದರೆ, ಇ-ವೀಸಾ ಅಲ್ಪಾವಧಿಯದ್ದಾಗಿದ್ದು, ಇದನ್ನು ಪ್ರವಾಸಿಗಳ ಅನುಕೂಲಕ್ಕೆ ಪರಿಚಯಿಸಲಾಗಿದೆ. ಭಾರತದಲ್ಲಿ ಇದನ್ನು ಇ-ಟೂರಿಸ್ಟ್ ವೀಸಾ ಎಂಬುದಾಗಿ ಹೆಸರಿಸಲಾಗಿದೆ. ಇದನ್ನು ಹೊಂದಿದವರು ಗರಿಷ್ಟ ಎಂದರೆ ಭಾರತದಲ್ಲಿ 30 ದಿನ ಮಾತ್ರ ಉಳಿಯಬಹುದು . ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಎರಡು ಬಾರಿ ಇ-ವೀಸಾ ಪಡೆಯಬಹುದಾಗಿದೆ.

ಇ-ವೀಸಾ ಪಡೆಯಲು ಪ್ರವಾಸಿಗರು ವಿದೇಶದಿಂದ ಭಾರತದ ವಿಮಾನ ಏರುವ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿಮಾನದಲ್ಲಿ ಪ್ರಯಾಣಿಸಿ ಭಾರತದಲ್ಲಿ ಇಳಿದ ಬಳಿಕ ಅಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಅದನ್ನು ಪರಿಶೀಲಿಸಿ ನಿಲ್ದಾಣದಿಂದ ಹೊರಗೂ ಹೋಗಲು ಅನುಮತಿ ನೀಡುತ್ತಾರೆ.

ಬೆಂಗಳೂರು, ಚೆನ್ನೈ, ಕೊಚ್ಚಿನ್, ದೆಹಲಿ, ಗೋವಾ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ತಿರುವಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಇ-ವೀಸಾ ಪರಿಶೀಲನೆ ವ್ಯವಸ್ಥೆ ಇದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದರೂ ಇಲ್ಲಿ ಈ ಸೌಲಭ್ಯವನ್ನು ಇನ್ನೂ ಕಲ್ಪಿಸಲಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Belgium women stranded in Bajpe International Airport Mangaluru. Reason - The airport doesn't have e-visa facility. Its high time Mangaluru Airport extends the facility to Intl travelers.
Please Wait while comments are loading...