ಕುಸ್ವಾರ್ ಇಲ್ಲದೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಹೆಚ್ಚದು

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್. 24 : ನಗರದ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ನಕ್ಷತ್ರಗಳು, ಜಗಮಗಿಸುವ ಗೂಡುದೀಪಗಳು, ಕ್ರಿಬ್ಸ್ ಗೆ ಬೇಕಾದ ವಸ್ತುಗಳು, ಇನ್ನು ಬೇಕರಿಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ವಿವಿಧ ಆಕಾರದ ಕೇಕ್ ಗಳು ಹಾಗೂ ಬಗೆ-ಬಗೆಯ ತಿಂಡಿಗಳು ಯೇಸುವಿನ ಜನನದ ಆಗಮನವನ್ನು ಸಾರುತ್ತಿವೆ.

ಇನ್ನು ಕರಾವಳಿಯಲ್ಲಿ ಕುಸ್ವಾರ್ ಬಲು ಪ್ರಸಿದ್ಧಿ ಹೊಂದಿದೆ. ಈ ಕುಸ್ವಾರ್ ಎಂದಾಕ್ಷಣ ಗೋಲಿಯೂ, ಕಿಡಿಯೂ, ಕೂಲ್ ಕೂಲ್, ಗಜ್ಜಿಯಿ, ಅಕ್ಕಿ ಲಾಡು, ಖಾರಕಡ್ಡಿ ಬಾಯಲ್ಲಿ ನೀರು ಬರಿಸುತ್ತವೆ. [ಸಂತಾಕ್ಲಾಸ್ ವೇಷ ಧರಿಸಿ ಕ್ರಿಸ್ಮಸ್ ಶುಭಾಶಯ ಹೇಳುವ ಮಂಗಳೂರಿನ ಸಂತ]

ಕೆಲವರು ಮನೆಯಲ್ಲೇ ಕುಸ್ವಾರ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕೆಲವರು ಬೇಕರಿಯ ಕುಸ್ವಾರ್ ಖಾದ್ಯಗಳನ್ನು ಖರೀದಿಸುತ್ತಾರೆ. ಇಲ್ಲಿ ಕೇಕ್ ಗಳಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಆದರೆ, ಕುಸ್ವಾರ್ ಗಳಿಗಂತೂ ಬೇಡಿಕೆ ಇದ್ದೇ ಇದೆ.

delicious Cakes and Kuswar ready at mangaluru for Christmas

ಕರಾವಳಿಯ ಕ್ಯಾಥೊಲಿಕ್ ಬಂಧುಗಳು ಕುಸ್ವಾರ್ ಇಲ್ಲದೆ ಕ್ರಿಸ್ಮಸ್ ಹಬ್ಬವನ್ನು ಸರಿಯಾಗಿ ಆಚರಣೆಯೇ ಮಾಡೋದಿಲ್ಲ. ಇಂತಹ ವಿಶಿಷ್ಟ ಬೆಳವಣಿಗೆ ದೇಶ - ವಿದೇಶ ಯಾವುದೇ ಮೂಲೆಯಲ್ಲೂ ಕಾಣ ಸಿಗೋದಿಲ್ಲ.

ಮುಖ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿಯೇ ಕುಸ್ವಾರ್ ಗಳ ಕಚ್ಚಾ ಸಾಮಗ್ರಿಗಳು ಮನೆ ತಲುಪುತ್ತವೆ. ನಂತರ ಡಿಸೆಂಬರ್ ದಾಟುತ್ತಿದಂತೆ ಕುಸ್ವಾರ್ ತಯಾರಿಯಲ್ಲಿ ತೊಡಗುತ್ತಾರೆ.

delicious Cakes and Kuswar ready at mangaluru for Christmas

ಆಧುನಿಕ ಕಾಲದಲ್ಲಿ ಕೆಲಸದ ಒತ್ತಡ ಹಾಗು ಸಮಯದ ಅಭಾವಗಳು ಕಾಡುತ್ತಿರುವುದರಿಂದ ಇಂತಹ ಕುಸ್ವಾರ್ ತಿಂಡಿಗಳನ್ನು ಮನೆಯ ಸದಸ್ಯರು ಕೂಡಿಕೊಂಡು ಮಾಡುವುದಕ್ಕಿಂತ ಹೆಚ್ಚಾಗಿ ಬೇಕರಿಗಳಿಗೆ ಮೊರೆ ಹೋಗುತ್ತಾರೆ.

ಕುಸ್ವಾರ್ ಮೂಲತಃ ಗೋವಾ ರಾಜ್ಯದ್ದು: ಮೂಲತಃ ಗೋವಾ ರಾಜ್ಯದಿಂದ ಬಂದ ಪದ್ಧತಿಗಳಲ್ಲಿ ಕುಸ್ವಾರ್ ಒಂದು. ಅದರಲ್ಲೂ ವಿಶೇಷವಾಗಿ ಗೋವಾದಿಂದ ಕರಾವಳಿ ಕಡೆಗೆ ಹರಿದು ಬಂದ ಕ್ರೈಸ್ತರು ಅಲ್ಲಿನ ಕೆಲವೊಂದು ಸಂಪ್ರದಾಯ, ಆಚರಣೆ, ಆಹಾರ ಪದ್ದತಿಗಳನ್ನು ಕರಾವಳಿಯಲ್ಲಿ ಆಚರಣೆ ಮಾಡಲಾಗುತ್ತದೆ ಎನ್ನುತ್ತಾರೆ ಕೊಂಕಣಿ ಪ್ರಚಾರ ಸಂಚಾಲನ ಸಮಿತಿಯ ಕಾರ್ಯದರ್ಶಿ.

delicious Cakes and Kuswar ready at mangaluru for Christmas

ಕುಸ್ವಾರ್ ತಯಾರಿಯಲ್ಲಿ ಎಲ್ಲರು ಜತೆಗೂಡುವ ಮೂಲಕ ಕುಟುಂಬದ ಸದ್ಯಸರ ಏಕತೆಯ ಸಂಕೇತ ಇಮ್ಮಡಿಗೊಳ್ಳುತ್ತದೆ. ಮನೆಮಂದಿಯೆಲ್ಲ ತಯಾರಿಸಿದ ಕುಸ್ವಾರ್ ಕ್ರಿಸ್ಮಸ್ ನ ಪ್ರೀತಿಯ ಸಂಕೇತವಾಗಿ ನೆರೆಮನೆಯ ಬಾಂಧವರಿಗೆ, ಜಾತಿ ಮತ ಭೇದವಿಲ್ಲದೆ ವಿತರಿಸುತ್ತಾರೆ. ಇದು ಖುಷಿ ಕೂಡುವ ವಿಷಯ.

ನಿಮ್ಮೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Mangaloreans call Christmas Eve as Kuswar day. It is a day when Kuswar, the box of sweets is distributed to the dearest and nearest ones.
Please Wait while comments are loading...