ಊಟಕ್ಕೆಂದು ಬರುವವನು ಹೆಣವಾಗಿ ಬಂದ, ದೀಪಕ್ ತಾಯಿಯ ಕಣ್ಣೀರಿನ ಮಾತುಗಳು

Posted By:
Subscribe to Oneindia Kannada

ಮಂಗಳೂರು, ಜನವರಿ 04: "ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬರುವವನು ಹೆಣವಾಗಿ ಬಂದಿದ್ದಾನೆ. ಮನೆಗೆ ಆಧಾರವಾಗಿದ್ದ ಮಗನನ್ನೇ ಕಳೆದುಕೊಂಡಿದ್ದೇನೆ. ಮಗನಿಗಿಂತ ನನಗೆ ಪರಿಹಾರದ ಹಣ ದೊಡ್ಡದಲ್ಲ. ನನ್ನ ಮಗ ಯಾರರೊಂದಿಗೂ ವೈಷಮ್ಯ ಇಟ್ಟುಕೊಂಡವನಲ್ಲ". ಇವು ಹತ್ಯೆಯಾದ ದೀಪಕ್ ರಾವ್ ತಾಯಿ ಪ್ರೇಮ ಅವರು ಮಾಧ್ಯಮಗಳ ಮುಂದೆ ಆಡಿದ ಕಣ್ಣೀರಿನ ಮಾತುಗಳಿವು.

"ಅಮ್ಮ ನಾನು ಬೇರೆ ಕೆಲಸ ಮಾಡಲು ವಿದೇಶಕ್ಕೆ ಹೋಗ್ತೇನೆ ಅಂದಿದ್ದಾ. ಅದನ್ನು ನಾನು ಬೇಡ ಎಂದು ಹೇಳಿದ್ದೆ. ವಿದೇಶಕ್ಕೆ ಹೋಗಿದ್ರೆ ನನ್ನ ಮನಗ ನನಗೆ ಉಳಿತಿದ್ದ. ನಾನೇ ಹೋಗ್ಬೇಡ ಎದ್ಹೇಳಿ ತಪ್ಪು ಮಾಡಿ ಬಿಟ್ಟೆ ಎಂದು ಕಣ್ಣೀರು ಇಟ್ಟರು. ನನ್ನ ಮಗನನ್ನು ಕೊಲೆ ಮಾಡಿದವರಿಗೆ ಆ ದೇವರೇ ಶಿಕ್ಷೆ ನೀಡಲಿ ಎಂದು ಹೇಳಿ ದುಃಖತಪ್ತರಾದರು.

Deepak Rao's mather Preema reacts with media after funeral

ದೀಪಕ್ ರಾವ್ ಯಾರು? ಕೊಲೆ ಆಗಲು ಕಾರಣವೇನು?

ಮತ್ತೊಂದೆಡೆ ಸುರತ್ಕಲ್ ಶಾಸಕ ಮೊಯಿದ್ದೀನ್ ಬಾವಾ ಅವರು ಘೋಷಿಸಿದ್ದ 5 ಲಕ್ಷ ರು ಪರಿಹಾರ ಹಣವನ್ನು ತೆಗೆದುಕೊಳ್ಳುವುದಿಲ್ಲ. ಹಣ ಕೊಟ್ಟರೆ ಜೀವ ಪುನಃ ಬರುವುದಿಲ್ಲ. ಕೇವಲ ಸರ್ಕಾರ ನೀಡುವ ಪರಿಹಾರವನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಬೇರೆ ಯಾರ ಹಣ ಮುಟ್ಟುವುದಿಲ್ಲ ಎಂದು ದೀಪಕ್ ರಾವ್ ಅವರ ಚಿಕ್ಕಪ್ಪ ಸಾತೋರ್ಜಿ ಹೇಳಿದರು.

ಬುಧವಾರ (ಜನವರಿ 3) ಮಧ್ಯಾಹ್ನ ದೀಪಕ್ ರಾವ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮಂಗಳೂರು ಹೊರವಲಯದ ಕಾಟಿಪಳ್ಳ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.

ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು 24 ಗಂಟೆಯೊಳಗೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Deepak Rao's mather Preema reacts with media after Deepak funeral. I lost a son. compensation did not bigger me, said Preema.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ