ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕೈವಾಡ: ಶಾಸಕ ಮೊಯ್ದಿನ್ ಬಾವಾ ಆರೋಪ

|
Google Oneindia Kannada News

ಮಂಗಳೂರು, ಜನವರಿ 4: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿಯ ರಾಜಕೀಯ ಉದ್ದೇಶವಿದೆ ಎಂದು ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದರು.

ದೀಪಕ್ ರಾವ್ ಹತ್ಯೆ ಆರೋಪಿಗಳಾದ ಪಿಂಕಿ ನವಾಜ್‍ನ ಸಹೋದರ ಲಾದನ್ ಇಸ್ಮಾಯಿಲ್ ಹಾಗೂ ಆತನ ಅಕ್ಕನ ಗಂಡ (ಬಾವ) ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹತ್ಯೆಯ ಹಿಂದೆ ಇರಬಹುದಾದ ಬಿಜೆಪಿಯ ರಾಜಕೀಯ ಕೈವಾಡದ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.

Deepak murder was politically motivated, says MLA Mohiuddin Bava

ನಾನು ಶಾಸಕನಾದ ಮೇಲೆ 4 ವರ್ಷ 8 ತಿಂಗಳ ಕಾಲ ಈ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚುನಾವಣೆ ಸಮೀಪಿಸುತ್ತಿರುವಾಗ ಏಕಾಏಕಿ ಹತ್ಯೆ ಘಟನೆ ನಡೆದಿರುವುದು ಆತಂಕ
ಮೂಡಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು .

ನನ್ನ ಕ್ಷೇತ್ರದ ನಾಗರಿಕರಿಗೆ ರಕ್ಷಣೆ ನೀಡಬೇಕು. ಅದಕ್ಕಾಗಿ ಇನ್ನಷ್ಟು ಭದ್ರತೆಗೆ ಪೊಲೀಸರನ್ನು ನಿಯೋಜಿಸುವಂತೆ ಗೃಹ ಇಲಾಖೆಯನ್ನು ಕೋರಿದ್ದೇನೆ ಎಂದು ಬಾವಾ ಹೇಳಿದರು.

ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 5 ಲಕ್ಷ ಮೊತ್ತ ಪರಿಹಾರ ನೀಡುತ್ತೇನೆ. ಅದೇ ರೀತಿ ನಿನ್ನೆ ರಾತ್ರಿ ಚೂರಿ ಇರಿತದಿಂದ ಗಾಯಗೊಂಡ ಬಷೀರ್ ಅವರಿಗೆ 2 ಲಕ್ಷ ಹಾಗೂ ಮುಬಷಿರ್‍ ಅವರಿಗೆ 50 ಸಾವಿರವನ್ನು ವೈಯಕ್ತಿಕವಾಗಿ ನೀಡುತ್ತೇನೆ. ಅಲ್ಲದೆ ಗಾಯಾಳುಗಳ ಎಲ್ಲಾ ಆಸ್ಪತ್ರೆ ವೆಚ್ಚಗಳನ್ನು ಭರಿಸುವಂತೆ ಜಿಲ್ಲಾಡಳಿತವನ್ನು ಕೋರುತ್ತೇನೆ ಎಂದು ಅವರು ಹೇಳಿದರು.

English summary
MLA of Mangalore north constituency Mohiuddin Bava on Thursday December 4 expressed suspicions that the murder of Deepak Rao was politically motivated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X