ಪಂಚಭೂತಗಳಲ್ಲಿ ಲೀನರಾದ ದೀಪಕ್ ರಾವ್...ಅಮರ್ ರಹೇ…

Posted By:
Subscribe to Oneindia Kannada

ಮಂಗಳೂರು, ಜನವರಿ 04:ಕಾಟಪಳ್ಳದಲ್ಲಿ ಹತ್ಯೆಯಾದ ದೀಪಕ್ ರಾವ್ ಅವರ ಅಂತ್ಯಕ್ರಿಯೆ ಜನತಾ ಕಾಲೋನಿ ರುದ್ರಭೂಮಿಯಲ್ಲಿ ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ದೀಪಕ್ ಚಿತೆಗೆ ಸಹೋದರ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ದೀಪಕ್ ಪಂಚಭೂತಗಳಲ್ಲಿ ಲೀನರಾದರು.

ಈ ವೇಳೆ ನೆರೆದಿದ್ದ ಸಾವಿರಾರು ಜನರು ದೀಪಕ್ ರಾವ ಅಮರ್‌ ಹೇ ಎಂದು ಜೈಕಾರ ಕೂಗಿಅಂತಿಮ ದರ್ಶನ ಪಡೆದರು.

ದೀಪಕ್ ದೇಹ ಗೌಪ್ಯವಾಗಿ ಮನೆಗೆ ಶಿಫ್ಟ್, ಶವಯಾತ್ರೆಗೆ ಬಿಗಿಪಟ್ಟು

ಮಂಗಳೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕಾಟಿಪಳ್ಳದಲ್ಲಿರುವ ಕೊಲೆಯಾದ ದೀಪಕ್ ರಾವ್ ಅವರ ಮನೆಗೆ ಗುರುವಾರ ಭೇಟಿ ನೀಡಿ 10 ಲಕ್ಷ ರು, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ವಿ ಎಚ್ ಪಿ ಮುಖಂಡ ಗೋಪಾಲ್ ಜೀ ಅವರು ದೀಪಕ್ ಮನೆ ಭೇಟಿ ನೀಡಿ ಕುಟುಂಬಸ್ಥರನ್ನು ಹಾಗೂ ಪ್ರತಿಭಟನಾಕಾರರನ್ನು ಮನವೊಲಿಸಿದರು. ಗೋಪಾಲ್ ಜೀ ಮಾತಿಗೆ ಒಪ್ಪಿದ ಪ್ರತಿಭಟನಾಕಾರರು ಹಾಗೂ ಕುಟುಂಬಸ್ಥರು ಅಂತ್ಯಕ್ರಿಯೆಗೆ ಒಪ್ಪಿಕೊಂಡರು.

ಹಾಗೂ ದೀಪಕ್ ಶವಯಾತ್ರೆ ನಡೆಸಲು ಜಿಲ್ಲಾಧಿಕಾರಿ ಸೆಂಥಿಲ್ ಅವಕಾಶ ನೀಡಿದ್ದು. ಕಾಟಿಪಳ್ಳದ ನಿವಾಸದಿಂದ ಅಂತಿಮಯಾತ್ರೆ ಆರಂಭವಾಗಿದ್ದು, ಜನತಾ ಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯತ್ತ ಸಾಗಿದೆ.ನಂತರ ಶಿವಾಜಿ ಕ್ಷತ್ರಿಯ ವಿಧಿ-ವಿಧಾನದಂತೆ ದೀಪಕ್ ಅಂತ್ಯಕ್ರಿಯೆ ನಡೆಯಲಿದೆ.

ಮಂಗಳೂರಲ್ಲಿ ದೀಪಕ್ ಹತ್ಯೆ: ಚಿತ್ರಗಳಲ್ಲಿ ಪ್ರಕ್ಷುಬ್ಧ ಕರಾವಳಿ

Deepak Murder, DC Gives permission for Funeral Procession

ಅಂತಿಮಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The villagers and the BJP leaders received the body of Deepak Rao who was brutally murdered on January 3 at Katiipalla after the intervention of DC Sasikanth Senthil on January 4.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ