ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 11 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಸಮುದ್ರ ಜೀವಿಗಳಿಗೂ ಬೇಸಿಗೆ ಬಿಸಿ ತಟ್ಟಿದೆ. ಕರಾವಳಿಯಲ್ಲಿ ಏರುತ್ತಿರುವ ಬಿಸಿಲಿನ ಬೇಗೆಗೆ ಮೀನುಗಳು ಸಿಗದಂತಾಗಿದೆ. ದಕ್ಷಿಣ ಕನ್ನಡವನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ನೀರಿನ ಕೊರತೆಯ ಬಿಸಿ ಹಾಸ್ಟೆಲ್‌ಗಳಿಗೆ ತಟ್ಟಿದೆ, ಹಲವು ಹಾಸ್ಟೆಲ್‌ಗಳನ್ನು ಬಂದ್ ಮಾಡಲಾಗಿದೆ. ಅನೇಕ ಹೋಟೆಲ್‌ಗಳಲ್ಲಿ ನೀರಿಲ್ಲ. ನೀರಿನ ಕೊರತೆಯಿಂದ ಮಂಜುಗೆಡ್ಡೆ ಸ್ಥಾವರಗಳು ಬಾಗಿಲು ಮುಚ್ಚಿದ್ದು, ಮೀನು ಉದ್ಯಮದ ಮೇಲೆ ಇದು ಪರಿಣಾಮ ಬೀರಿದೆ. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]

fish market

ಮೀನುಗಾರಿಕೆಗೆ ಹೊಡೆತ : 22 ಡಿಗ್ರಿ ಉಷ್ಣಾಂಶದಲ್ಲಿ ಮಾತ್ರ ಮೀನುಗಳು ನೀರಿನ ಮೇಲ್ಭಾಗದಲ್ಲಿ ಇರುತ್ತವೆ. ಉಷ್ಣಾಂಶ ಏರುತ್ತಾ ಹೋದಂತೆ ಮೀನುಗಳು ನೀರಿನ ಆಳಕ್ಕೆ ಇಳಿದು ಬಿಡುತ್ತವೆ. ಇದರಿಂದಾಗಿ ಇತ್ತೀಚಿಗೆ ಮೀನುಗಾರಿಕೆಗೆ ಹೋದ ಮೀನುಗಾರರು ಅಲ್ಪ ಪ್ರಮಾಣದ ಮೀನುಗಳೊಂದಿಗೆ ವಾಪಸ್ ಆಗುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೀನುಗಳು ಸಿಗುತ್ತಿಲ್ಲ. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ]

ಸ್ಥಾವರಗಳು ಬಂದ್ : ನೀರಿನ ಕೊರತೆಯಿಂದಾಗಿ ಮಂಗಳೂರಿನ 17ಕ್ಕೂ ಅಧಿಕ ಮಂಜುಗಡ್ಡೆ ಸ್ಥಾವರಗಳು ಬಾಗಿಲು ಮುಚ್ಚಿವೆ. ಕೆಲವು ಸ್ಥಾವರಗಳು ದಿನಬಿಟ್ಟು ದಿನಾ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. 65 ಸ್ಥಾವರಗಳಲ್ಲಿ ದಿನವೊಂದಕ್ಕೆ 1,700 ಟನ್ ಐಸ್ ಉತ್ಪಾದನೆಯಾಗುತ್ತಿತ್ತು, ಈಗ ಇದು 700 ಟನ್‌ಗೆ ಕುಸಿದಿದೆ.

mangalore

ತೋಟಗಾರಿಕೆಗೆ ಸಂಕಷ್ಟ : ನೀರಿನ ಅಭಾವದಿಂದಾಗಿ ನರ್ಸರಿ, ತೋಟಗಾರಿಕೆಗೂ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವುದರಿಂದ ಕೈದೋಟ, ತೋಟಗಾರಿಕೆ ನರ್ಸರಿಗಳಿಗೆ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಲಾಗಿದೆ. ಟ್ಯಾಂಕರ್‌ಗಳಿಗೂ ಬೇಡಿಕೆ ಇಟ್ಟರು ನೀರು ಪೂರೈಕೆಯಾಗುತ್ತಿಲ್ಲ. [ತೋಟಗಳಿಗೆ ನೀರಿಲ್ಲ, ಅಡಿಕೆ ಬೆಳೆಗಾರರು ಕಂಗಾಲು]

ಹೋಟೆಲ್‌ಗಳಲ್ಲಿ ಊಟ ಇಲ್ಲ : ನೀರಿನ ಬರದಿಂದ ಹೋಟೆಲ್, ಕ್ಯಾಂಟೀನ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಬೈಕಂಪಾಡಿ, ಪಣಂಬೂರು, ಕುಂಜತ್ತಬೈಲ್, ಶಕ್ತಿನಗರ ಮುಂತಾದ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಅಭಾವದಿಂದ ಹೋಟೆಲ್‌ಗಳು ಬಾಗಿಲು ಹಾಕಿವೆ. ನಗರದ ಹೃದಯ ಭಾಗದಲ್ಲಿರುವ ಹೋಟೆಲ್‌ಗಳು ಅರ್ಧದಿನ ಮಾತ್ರ ತೆರೆದಿರುತ್ತವೆ.

ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆದಿಗಿಂತಲೂ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ, ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

English summary
Mangaluru city and other taluks of the Dakshina Kannada districts facing drinking water crisis. Various organizations demanded Chief Minister Siddaramaiah to declare Dakshina Kannada as drought hit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X