ಮಾರ್ಚ್ 1ರಿಂದ ಮಂಗ್ಳೂರು-ಬೆಂಗ್ಳೂರು ರೈಲು ಸಂಚಾರ ಆರಂಭ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 22 : ಬಜೆಟ್ ನಲ್ಲಿ ಘೋಷಣೆಯಾದ ಮಂಗಳೂರು- ಬೆಂಗಳೂರು ಹಗಲು ರೈಲು ಮಾರ್ಚ್ 1ರಿಂದ ಆರಂಭವಾಗುವ ಸಾಧ್ಯತೆಯಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಭಾರತೀಯ ರೈಲ್ವೆ ಇಲಾಖೆಯು 2014ರಲ್ಲಿ ಬೆಂಗಳೂರಿಗೆ ಹಗಲು ರೈಲು ಆರಂಭಿಸಲು ನಿರ್ಧರಿಸಿತ್ತು. ಆದರೆ, ವರ್ಷ ಕಳೆದರೂ ಇಲಾಖೆ ಮುಂದೂಡುತ್ತಾ ಬಂದಿತ್ತು. ಆದರೆ, ಇದೀಗ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಹಗಲು ರೈಲು ಆರಂಭವಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

 Day train from Bengaluru to Mangaluru to become reality on March 1

ಈ ಹಿನ್ನಲೆಯಲ್ಲಿ ಉಡುಪಿ ರೈಲ್ವೆ ಸಂಘ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಕೂಡಾ ಸಲ್ಲಿಸಿತ್ತು. ಹಗಲು ರೈಲು ಕಾರ್ಯಾಚರಣೆಯನ್ನು ಕೋರ್ಟ್ ಮುಂದೂಡಿ ಹಲವು ಬಾರಿ ರೈಲ್ವೆ ಇಲಾಖೆ ಸಂಘದವರಿಗೆ ನಿರಾಸೆ ಮೂಡಿಸಿತ್ತು.

ನಂತರ ರೈಲ್ವೆ ಹೈಕೋರ್ಟ್ ನ್ಯಾಯಾಧೀಶರು ಎಚ್ಚರಿಕೆ ನೀಡಿ ರೈಲ್ವೆ ಕಾರ್ಯಾಚರಣೆ ಮಾರ್ಚ್ 31, 2017ರ ಮೊದಲು ಆರಂಭಿಸುವಂತೆ ಹೇಳಿದರು.

ಪ್ರತಿದಿನ ಬೆಳಗ್ಗೆ 6.30ಕ್ಕೆ ಮಂಗಳೂರಿನಿಂದ ಹೊರಡುವ ರೈಲು ರಾತ್ರಿ 7.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಡುವ ರೈಲು ರಾತ್ರಿ 9.15ಕ್ಕೆ ಮಂಗಳೂರು ತಲುಪಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Railways had announced that it would operate day train between Mangaluru and Bengaluru via Hassan and Mysuru. The train will begin to chug from March 1 onward.
Please Wait while comments are loading...