ಎಂಬಿಎನಲ್ಲಿ ಚಿನ್ನದ ಪದಕ ಗೆದ್ದ ಮಂಗಳೂರಿನ ಡ್ಯಾಫ್ನಿ ಡಿಸೋಜಾ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 15: ಮಂಗಳೂರು ಮೂಲದ ಡ್ಯಾಫ್ನಿ ಡಿಸೋಜಾ ಎಂಬಿಎನಲ್ಲಿ ಚಿನ್ನದ ಪದಕದೊಂದಿದೆ ತೇರ್ಗಡೆಯಾಗಿದ್ದಾರೆ.

ಮೂಲತಃ ಮಂಗಳೂರು ಮೂಲದವರಾದ ಡ್ಯಾಫ್ನಿ ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಿದ್ದಾರೆ. ಬೆಂಗಳೂರಿನ ಸೇಂಟ್ ಜೋಸೆಫ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು 2017ರ ಏಪ್ರಿಲ್ 8 ರಂದು ಎಂಬಿಎ ಪರೀಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದು, ಚಿನ್ನದ ಪದಕ ಸಂಪಾದಿಸಿದ್ದಾರೆ. [ಶಾರ್ಟ್ ಸರ್ಕ್ಯೂಟ್, ಮಂಗಳೂರು ಕಾರ್ಪೊರೇಶನ್ ಬ್ಯಾಂಕಿಗೆ ಬೆಂಕಿ]

Daphne D’souza of Mangaluru secures Gold Medal in MBA

ಮಂಗಳೂರಿನಲ್ಲಿ ಜನಿಸಿದ ಡ್ಯಾಫ್ನಿ, ಬೆಂಗಳೂರಿನ ಸೇಕ್ರೆಡ್ ಹಾರ್ಟ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದಾರೆ. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪಿಯುಸಿ ಹಾಗೆಯೇ ಬಿ. ಕಾಂ ಅನ್ನು ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಮುಗಿಸಿದ್ದಾರೆ.

ಡ್ಯಾಫ್ನಿ ಡಿಸೋಜಾ ತಂದೆ ಕ್ಲಾರೆನ್ಸ್ ಮತ್ತು ತಾಯಿ ಶೀಲಾ (ಡಿಸಿಲ್ವಾ) ಮೂಲತಃ ಮಂಗಳೂರಿನವರು. ಮಗಳ ಸಾಧನೆ ಬಗ್ಗೆ ಮಾತನಾಡಿರುವ ಜಾಫ್ನಿ ಪೋಷಕರು, "ಡ್ಯಾಫ್ನಿ ಚಿಕ್ಕಂದಿನಿಂದಲೇ ಅಧ್ಯಯನದಲ್ಲಿ ಎತ್ತಿದ ಕೈ . ಅವಳು ಸೇಕ್ರೆಡ್ ಹಾರ್ಟ್ ಗರ್ಲ್ಸ್ ಹೈಸ್ಕೂಲ್ ನಿಂದ ಈಗಿನ ಎಂಬಿಎ ತನಕ ಎಂದೂ ಕಲಿಕೆಯಲ್ಲಿ ಹಿಂದಿರಲಿಲ್ಲ. ಮಗಳ ಸಾಧನೆ ಕಂಡು ಬಹಳ ಹೆಮ್ಮೆಯಾಗುತ್ತದೆ," ಎಂದು ಆಕೆಯ ತಾಯಿ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಡ್ಯಾಫ್ನಿ ಬೆಂಗಳೂರಿನ ಮರಾಠ ಹಳ್ಳಿಯ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಈ ಶೈಕ್ಷಣಿಕ ಸಾಧನೆಗಾಗಿ ಮಂಗಳೂರು ಜನತೆ ಡ್ಯಾಫ್ನಿ ಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. [ಇದು 56 ವಿದೇಶಿಯರ ಮಲಬಾರ್ ಆಟೋ ರಿಕ್ಷಾ ಚಾಲೆಂಜ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Daphne D’Souza, hailing from Mangaluru, presently residing with her parents in Indiranagar, Bengaluru has secured Gold Medal in MBA from St.Joseph’s Institute of Management.
Please Wait while comments are loading...