ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಲ್ 5 ಪರವಾನಗಿ ಪಡೆಯುವಲ್ಲಿ ದಕ್ಷಿಣ ಕನ್ನಡ ನಂ 1

|
Google Oneindia Kannada News

ಮಂಗಳೂರು, ಜನವರಿ 02: ಔತಣ ಕೂಟ, ಹುಟ್ಟು ಹಬ್ಬ ಸೇರಿದಂತೆ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಮದ್ಯ ವಿತರಣೆ ಮಾಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ. ಉಡುಪಿ 2ನೇ ಸ್ಥಾನದಲ್ಲಿದೆ.

ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ 2017 - 18ನೇ ಸಾಲಿನಲ್ಲಿ ಮದ್ಯ ವಿತರಣೆಗೆ ರಾಜ್ಯದಲ್ಲೇ ಗರಿಷ್ಠ 248 ಪರವಾನಗಿ ನೀಡಲಾಗಿದ್ದು, ಉಡುಪಿ ಜಿಲ್ಲೆಗೆ 122 ಪರವಾನಗಿ ನೀಡಲಾಗಿದೆ.

ಬನ್ನೇರುಘಟ್ಟ ಗಣಿಗಾರಿಕೆ ಪರವಾನಗಿ ರದ್ದತಿಗೆ ಪತ್ರಬನ್ನೇರುಘಟ್ಟ ಗಣಿಗಾರಿಕೆ ಪರವಾನಗಿ ರದ್ದತಿಗೆ ಪತ್ರ

ಯಾವುದೇ ಸಭಾಭವನದ ಸಮಾರಂಭದಲ್ಲಿ ಮದ್ಯ ವಿತರಣೆ ಮಾಡಬೇಕಿದ್ದರೆ 'ಸಿಎಲ್ 5 ' ಸಾಂದರ್ಭಿಕ ಪರವಾನಗಿ ಪಡೆಯುವುದು ಕಡ್ಡಾಯ. ಮನೆಯಲ್ಲೇ ದೊಡ್ಡ ಮಟ್ಟದ ಪಾರ್ಟಿ ನಡೆಸುವುದಿದ್ದರೂ ಈ ಪರವಾನಗಿ ಪಡೆಯಬೇಕು. ಈ ಹಿನ್ನೆಲೆಯಲ್ಲಿ ಕಾನೂನಿನಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾನೂನಿನಂತೆ ಪರವಾನಿಗೆ ಪಡೆಯಲಾಗಿದೆ.

 ಇಲ್ಲದ ಪರವಾನಗಿ, ನಿಲ್ಲದ ಸಂಗೀತ, 400 ಬಾರ್‌, ಪಬ್‌ಗಳಿಗೆ ನೋಟಿಸ್‌ ಇಲ್ಲದ ಪರವಾನಗಿ, ನಿಲ್ಲದ ಸಂಗೀತ, 400 ಬಾರ್‌, ಪಬ್‌ಗಳಿಗೆ ನೋಟಿಸ್‌

ಆದರೆ ಮಂಡ್ಯ, ಕೋಲಾರ, ಹಾವೇರಿ, ದಾವಣಗೆರೆ ಸಹಿತ 13 ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ ಯಾವುದೇ ಸಮಾರಂಭಗಳಲ್ಲಿ ಮದ್ಯ ವಿತರಣೆ ನಡೆದಿಲ್ಲ. ಅಬಕಾರಿ ಇಲಾಖೆ ಜಿಲ್ಲಾವಾರು ನೀಡಿದ ಸಿಎಲ್-5 ಸಾಂದರ್ಭಿಕ ಪರವಾನಗಿಯ ವಾರ್ಷಿಕ ಅಂಕಿ ಅಂಶದಲ್ಲಿ ಈ ಮಾಹಿತಿ ಸ್ಪಷ್ಟವಾಗಿದೆ. ಹಾಗೆಂದು ಈ ಜಿಲ್ಲೆಗಳ ಸಮಾರಂಭಗಳಲ್ಲಿ ಮದ್ಯ ವಿತರಣೆಯಾಗಿಲ್ಲವೇ? ಎಂಬ ಪ್ರಶ್ನೆ ವ್ಯಕ್ತವಾಗುತ್ತಿದೆ.

Dakshina kannada stands first in receiving C L 5 liquor license

ಬೆಂಗಳೂರು ನಗರ ಮತ್ತು ಗ್ರಾಮಾಂತರವನ್ನು ಅಬಕಾರಿ ಇಲಾಖೆ ಒಟ್ಟು 5 ಅಬಕಾರಿ ಜಿಲ್ಲೆಗಳಾಗಿ ವಿಂಗಡಿಸಿದೆ. ಈ ಐದು ಜಿಲ್ಲೆಗಳಲ್ಲಿ 2017-18 ಸಾಲಿನಲ್ಲಿ ಪಡೆದ ಒಟ್ಟು ಪರವಾನಗಿ 282 ಮಾತ್ರ. ಉಡುಪಿ ಜಿಲ್ಲೆಯಲ್ಲಿ 122, ಕೊಡಗಿನಲ್ಲಿ 52, ಚಿಕ್ಕಮಗಳೂರಿನಲ್ಲಿ 12, ಬೆಳಗಾವಿಯಲ್ಲಿ 11 ಪರವಾನಗಿ ವಿತರಣೆಯಾಗಿದೆ.

 ಶ್ವಾನಗಳಿಗೂ ಪರವಾನಗಿ: ಬಿಬಿಎಂಪಿಯ ಆದೇಶ ವಾಪಸ್ ಶ್ವಾನಗಳಿಗೂ ಪರವಾನಗಿ: ಬಿಬಿಎಂಪಿಯ ಆದೇಶ ವಾಪಸ್

ಸಿಎಲ್ 5 ಪರವಾನಗಿ ಪಡೆದವರು ಸ್ವಂತ ಬಳಕೆಗೆ 18.2 ಲೀಟರ್. ದೇಶಿ ಬಿಯರ್, 2.3 ಲೀಟರ್. ಮದ್ಯ ದಾಸ್ತಾನು ಇಡಬಹುದು. ಮದುವೆ ಸಹಿತ ಸಮಾರಂಭಗಳಲ್ಲಿ ಮದ್ಯ ವಿತರಣೆ ಮಾಡಬೇಕಿದ್ದರೆ ಅಬಕಾರಿ ಇಲಾಖೆಯಿಂದ ಪ್ರತ್ಯೇಕವಾಗಿ ಸಿಎಲ್ 5 ಸಾಂದರ್ಭಿಕ ಪರವಾನಗಿ ಪಡೆಯಬೇಕು. 11,500 ರೂಪಾಯಿ ಶುಲ್ಕ ಪಾವತಿಸಿ ಪಡೆಯುವ ಈ ಪರವಾನಗಿಯ ಅವಧಿ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ.

English summary
Dakshian Kannnda district stand first in receiving CL 5 liquor license in State. Udupi stands second.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X