ದಕ್ಷಿಣ ಕನ್ನಡದಲ್ಲಿ 6 ತಿಂಗಳಲ್ಲಿ 530 ಅಪಘಾತ

Posted By:
Subscribe to Oneindia Kannada

ಮಂಗಳೂರು, ಜುಲೈ 21 : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. 2016ರಲ್ಲಿ ಜೂನ್ 30ರ ತನಕ 530 ಅಪಘಾತ ಪ್ರಕರಣಗಳು ದಾಖಲಾಗಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 2016ರಲ್ಲಿ (ಜನವರಿಯಿಂದ ಜೂನ್ 30ವರೆಗೆ) ಒಟ್ಟು 530 ಅಪಘಾತಗಳಾಗಿವೆ. ಇವುಗಳಲ್ಲಿ 104 ಜನರು ಪ್ರಾಣ ಕಳೆದುಕೊಂಡಿದ್ದು, 759 ಮಂದಿ ಗಾಯಗೊಂಡಿದ್ದಾರೆ.[ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]

Dakshina Kannada road accident statistics

'ಹೆದ್ದಾರಿಗಳಲ್ಲಿ ಸಂಚಾರ ಸೂಚನಾ ಫಲಕಗಳಿಲ್ಲದಿರುವುದು, ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಸಂಚಾರ ಸುರಕ್ಷಾ ಸಾಧನಗಳನ್ನು ವ್ಯವಸ್ಥೆ ಮಾಡುವ ಮೂಲಕ ಅಪಘಾತ ನಿಯಂತ್ರಣಕ್ಕೆ ಸಹಕರಿಸಬೇಕೆಂದು' ಜಿಲ್ಲಾಡಳಿತಕ್ಕೆ ಭೂಷಣ್ ಬೊರಸೆ ಮನವಿ ಮಾಡಿದ್ದಾರೆ.[ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

'ಒಂದು ವಾರದಲ್ಲಿ ಸಂಬಂಧಪಟ್ಟ ಇಲಾಖೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯಾವ ಪ್ರದೇಶಗಳಲ್ಲಿ ಸೂಚನಾ ಫಲಕಗಳು, ಬ್ಯಾರಿಕೇಡ್ ಗಳ ಅಳವಡಿಕೆ ಅಗತ್ಯವಿದೆ ಎಂಬುದರ ಪಟ್ಟಿಯನ್ನು ಒದಗಿಸುತ್ತೇವೆ. ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು' ಎಂದು ಒತ್ತಾಯಿಸಿದ್ದಾರೆ.

ಅಪಘಾತಗಳ ಸಂಖ್ಯೆ : ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2011ರಲ್ಲಿ 750 ರಸ್ತೆ ಅಪಘಾತಗಳು ನಡೆದಿದ್ದು, 118 ಮಂದಿ ಮೃತಪಟ್ಟಿದ್ದರು. 2012ರಲ್ಲಿ 828 ರಸ್ತೆ ಅಪಘಾತಗಳಲ್ಲಿ 117 ಮಂದಿ ಸಾವನ್ನಪ್ಪಿದ್ದರು.

2013ರಲ್ಲಿ 891 ಅಪಘಾತಗಳು ನಡೆದಿದ್ದು, 147 ಮಂದಿ ಸಾವನ್ನಪ್ಪಿ, 1318 ಮಂದಿ ಗಾಯಗೊಂಡಿದ್ದರು. 2014ರಲ್ಲಿ 957 ಅಪಘಾತಗಳು ನಡೆದಿತ್ತು. 2015ರಲ್ಲಿ 959 ರಸ್ತೆ ಅಪಘಾತಗಳಲ್ಲಿ 169 ಜನರು ಮೃತಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
530 road accident reported at Dakshina Kannada district in 2016 till June 30. 169 people killed in accident on 2015. Here are the statistics.
Please Wait while comments are loading...