ದಕ್ಷಿಣ ಕನ್ನಡದ ಸಂಕ್ಷಿಪ್ತ ಸುದ್ದಿಗಳ ಗುಚ್ಛ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 28 : 'ನವ ಮಂಗಳೂರು ಬಂದರಿನಲ್ಲಿ ಪ್ರವಾಸಿಗರ ಪಾಸ್‌ಪೋರ್ಟ್ ಹಾಗೂ ದಾಖಲೆ ಪಾತ್ರಗಳ ತಪಾಸಣೆಗೂ ಪಿಎಚ್ಓ ಕಚೇರಿಯನ್ನು ತೆರೆಯಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ' ಎಂದು ಪಿ.ಸಿ.ಪರಿಡಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಹೊಸ ಮಂಗಳೂರು ಬಂದರು ಟ್ರಸ್ಟ್ ಅಧ್ಯಕ್ಷ ಪಿ.ಸಿ.ಪರಿಡಾ ಅವರು, 'ನವಮಂಗಳೂರು ಬಂದರು ಮೂಲಕ ಸರಕು ಸಾಗಾಟ ಹಾಗೂ ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ಸರಳವಾಗಿ ದಾಖಲೆ ಪತ್ರ ಶೀಘ್ರ ವಿಲೇವಾರಿ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಹೇಳಿದರು.[ವಿಶ್ವದ ಏಳು ಅದ್ಭುತಗಳನ್ನು ಮಂಗಳೂರಿನಲ್ಲಿ ನೋಡಿ!]

'ಎಡಿಬಲ್ ಎಣ್ಣೆ ಸಹಿತ ತೈಲ ಸಂಬಂಧಿತ ಕಂಟೈನರ್‌ಗಳ ತಪಾಸಣೆ ಹಾಗೂ ಶೀಘ್ರವಾಗಿ ಸಾಗಾಟಕ್ಕೆ ಅನುಕೂಲವಾಗುವಂತೆ ತಪಾಸಣಾ ಲ್ಯಾಬ್ ಅನ್ನು ಬಂದರಿನಲ್ಲಿ ಈಗ ನಿರ್ಮಿಸಲಾಗಿದೆ' ಎಂದು ತಿಳಿಸಿದರು.[ವರ್ಗಾವಣೆಯ ಗೊಂದಲಕ್ಕೆ ತೆರೆ ಎಳೆದ ಎ.ಬಿ.ಇಬ್ರಾಹಿಂ]

'ಸರಕು ಸಾಗಾಟ ಭದ್ರತೆ ಹಾಗೂ ಗೇಟ್ ಪಾಸ್ ವ್ಯವಸ್ಥೆಯನ್ನು ಗಣಕೀಕರಣಗೊಳಿಸಲು ಯೋಜನೆ ರೂಪಿಸಿದ್ದು, ಈ ವರ್ಷದ ನವೆಂಬರ್‌ ವೇಳೆಗೆ ಇದು ಅಂತ್ಯಗೊಳ್ಳಲಿದೆ. ಇದರ ಪ್ರಯೋಜನವನ್ನು ಕಂಪನಿಗಳ ಮಾಲೀಕರು, ನಿರ್ವಾಹಕರು ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು. ದಕ್ಷಿಣ ಕನ್ನಡದ ಸಂಕ್ಷಿಪ್ತ ಸುದ್ದಿಗಳ ಗುಚ್ಛ

ಬಸ್ ದುರಂತದಲ್ಲಿ ಕುಂದಾಪುರದ ಸುರೇಶ್ ಸಾವು

ಬಸ್ ದುರಂತದಲ್ಲಿ ಕುಂದಾಪುರದ ಸುರೇಶ್ ಸಾವು

ಹುಬ್ಬಳ್ಳಿಯ ವರೂರು ಬಳಿ ಜುಲೈ 27ರಂದು ದುರ್ಗಾಂಬ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಬೆಂಕಿಗೆ ಆಹುತಿಯಾಗಿ ಮೂವರು ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದಾರೆ. ಮೃತಪಟ್ಟವರ ಪೈಕಿ ಕುಂದಾಪುರದ ಸುರೇಶ್ ಹೆಗ್ಡೆ ಅವರು ಒಬ್ಬರಾಗಿದ್ದಾರೆ.

ಓಲಾ ಹಾಗೂ ಊಬರ್ ಕಾನೂನು ಬಾಹಿರವೆ?

ಓಲಾ ಹಾಗೂ ಊಬರ್ ಕಾನೂನು ಬಾಹಿರವೆ?

ಮಂಗಳೂರು ನಗರದ ಓಲ ಹಾಗೂ ಊಬರ್ ಕಂಪನಿಗಳಿಗೆ ದಿನ ರಾತ್ರಿ ದುಡಿಯುತ್ತಿರುವ ಟಾಕ್ಸಿ ಚಾಲಕರು, ಮಾಲೀಕರಿಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ನಿರಂತರವಾಗಿ ಕಿರುಕುಳ ನೀಡಿ ಹಾಗೂ ದಬ್ಬಾಳಿಕೆ ನಡೆಸುತ್ತಿವೆ ಎಂದು ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಡ್ರೈವರ್ ಆಂಡ್ ಒನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಡಿ. ಕೆ ಇಮ್ತಿಯಾಝ್ ಆರೋಪಿಸಿದ್ದಾರೆ. ಓಲಾ ಹಾಗೂ ಊಬರ್ ಕಂಪೆನಿಗಳು ಕಾನೂನು ಬಾಹಿರವಾಗಿದ್ದಾರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದ್ದಾರೆ.

ಶೀಘ್ರ ಗುಣಮುಖರಾಗಲು ಪ್ರಾರ್ಥನೆ

ಶೀಘ್ರ ಗುಣಮುಖರಾಗಲು ಪ್ರಾರ್ಥನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ಉಳ್ಳಾಲದ ಸಯ್ಯದ್ ಮದನಿ ದರ್ಗಾ ಸಮಿತಿಯವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರೊಫೆಸರ್ ಹಾಜಿ ಅಹ್ಮದ್ ಬಾವ ಅವರು ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಪೊಲೀಸ್ ಕಮಿಷನರೇಟ್ ವತಿಯಿಂದ ಸನ್ಮಾನ

ಪೊಲೀಸ್ ಕಮಿಷನರೇಟ್ ವತಿಯಿಂದ ಸನ್ಮಾನ

ತಮ್ಮ ಸ್ವತ ಆಸಕ್ತಿಂದ ಮಂಗಳೂರು ನಗರದ ಸಂಚಾರ ನಿರ್ವಹಣೆ ಮಾಡುತ್ತಿರುವ ಮೂವರನ್ನು ನಗರದ ಪೋಲೀಸ್ ಕಮಿಷನರೇಟ್ ವತಿಯಿಂದ ಬುಧವಾರ ಸನ್ಮಾನಿಸಲಾಯಿತು. ಮೋನಿಸ್, ಕೆ.ಮುಹಮ್ಮದ್ ಹಾಗೂ ಅಪಘಾತ ಪ್ರಕರಣವೊಂದರಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದ ತೋಟಗಾರಿಕಾ ಇಲಾಖೆಯ ಚಾಲಕ ಮೋಹನ್ ಅವರನ್ನು ಸನ್ಮಾನಿಸಲಾಯಿತು.

ಬಂದರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳು

ಬಂದರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳು

'ಸರಕು ಸಾಗಾಟ ಭದ್ರತೆ ಹಾಗೂ ಗೇಟ್ ಪಾಸ್ ವ್ಯವಸ್ಥೆಯನ್ನು ಗಣಕೀಕರಣಗೊಳಿಸಲು ಯೋಜನೆ ರೂಪಿಸಿದ್ದು, ಈ ವರ್ಷದ ನವೆಂಬರ್‌ ವೇಳೆಗೆ ಇದು ಅಂತ್ಯಗೊಳ್ಳಲಿದೆ. ಇದರ ಪ್ರಯೋಜನವನ್ನು ಕಂಪನಿಗಳ ಮಾಲೀಕರು, ನಿರ್ವಾಹಕರು ಪಡೆದುಕೊಳ್ಳಬೇಕು' ಎಂದು ಮಂಗಳೂರು ಬಂದರು ಟ್ರಸ್ಟ್ ಅಧ್ಯಕ್ಷ ಪಿ.ಸಿ.ಪರಿಡಾ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Port Health Office (PHO) office in the port premises will be opened very soon said, P.C.Parida chairman of New Mangalore Port Trust.
Please Wait while comments are loading...