ಉಜಿರೆ: ಸಾಂಕೇತಿಕ ದರದಲ್ಲಿ ಹಳೆಯ ಪುಸ್ತಕಗಳ ಮಾರಾಟ

By: ಕೃಷ್ಣಪ್ರಶಾಂತ್.ವಿ
Subscribe to Oneindia Kannada

ಉಜಿರೆ, ಜನವರಿ 18: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಜ. 27ರಿಂದ 29ರವರೆಗೆ ಉಜಿರೆಯಲ್ಲಿ ನಡೆಯಲಿದ್ದು 'ಹಳೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ' ಈ ಸಮ್ಮೇಳನದ ವಿಶೇಷ ಆಕರ್ಷಣೆಯಾಗಲಿದೆ.

ಸಾಹಿತ್ಯ ಸಮ್ಮೇಳನಗಳಲ್ಲಿ ಹೊಸ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಸಾಮಾನ್ಯವಾಗಿ ಕಾಣಸಿಗುತ್ತದೆ. ಆದರೆ ಸಾಂಕೇತಿಕ ದರದಲ್ಲಿ ಹಳೆಯ ಪುಸ್ತಕಗಳ ಮಾರಾಟ ಈ ಸಾಹಿತ್ಯ ಸಮ್ಮೇಳನದ ಒಂದು ವಿಭಿನ್ನ ಯೋಜನೆಯಾಗಿದೆ. ಶ್ರೀ ಸಾಮಾನ್ಯರ ಮನೆಗಳಲ್ಲಿ ಸಾಕಷ್ಟು ಹಳೆಯ ಪುಸ್ತಕಗಳು ಸರಿಯಾದ ಸಂಗ್ರಹಣೆಯ ಕೊರತೆಯಿಂದಾಗಿ ನಾಶವಾಗಿ ಹೋಗುತ್ತಿವೆ.

Dakshina Kannada district Sahithya Sammelana Old books discount sale

ಅದಕ್ಕಾಗಿ ತಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಈ ಮಳಿಗೆಗೆ ದಾನವಾಗಿ ನೀಡಿದಾಗ ಕೃತಿಯಲ್ಲಿ ಅಡಕವಾದ ಮೌಲ್ಯಗಳು ಇತರರಿಗೆ ಹಂಚಲ್ಪಡುತ್ತದೆ. ಇದರಿಂದ ಆ ಸಾಹಿತ್ಯಗಳಿಗೂ ಒಂದು ಸಾರ್ಥಕ್ಯ ಭಾವ ಒದಗಿದಂತಾಗುತ್ತದೆ ಎಂಬುದು ಈ ಯೋಜನೆಯ ಆಶಯ.

ಕರ್ನಾಟಕ ವಿಧಾನಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿಸೋಜ ಈ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಪುಸ್ತಕಗಳು, ನಿಯತಕಾಲಿಕೆಗಳನ್ನು ಮಳಿಗೆಗೆ ದಾನವಾಗಿ ನಿಡುವ ಮೂಲಕ ಸಾಹಿತ್ಯಸೇವೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada district Sahithya Sammelana 2017 scheduled to be held on Jan 27 to 29. Old books will be sold at discount rates.
Please Wait while comments are loading...