ಉಜಿರೆಯಲ್ಲಿ ಉತ್ತರಕಾಂಡ, ರಾಜ್ ಲೀಲಾ ವಿನೋದ ಜನಪ್ರಿಯತೆ

By: ವರದಿ: ರಮ್ಯಶ್ರೀ ದೊಂಡೋಲೆ ಚಿತ್ರಗಳು: ಕೃಷ್ಣಪ್ರಶಾಂತ ವಿ
Subscribe to Oneindia Kannada

21ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯ ಪುಸ್ತಕ ಮಳಿಗೆಗಳಲ್ಲಿ ವ್ಯಕ್ತಿತ್ವ ವಿಕಸನ, ಅಡುಗೆಗೆ ಸಂಬಂಧಿಸಿದ ಪುಸ್ತಕಗಳು, ಕಾದಂಬರಿ, ಕಥಾ ಪುಸ್ತಕಗಳ ಖರೀದಿ ಭರಾಟೆಯಿಂದ ನಡೆಯಿತು.

ಇಂದಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕಗಳನ್ನು ಕೊ0ಡು ಓದುವ ಆಸಕ್ತರು ಕಡಿಮೆ ಆಗುತ್ತಿದ್ದಾರೆ ಎಂಬ ಮಾತನ್ನು ಸುಳ್ಳಾಗಿಸುವಂತೆ ಹಲವರು ಕೃತಿಗಳನ್ನು ಖರೀದಿಸುತ್ತಿರುವುದು ಸಮ್ಮೇಳನದ ವಿಶೇಷತೆಯಾಗಿದೆ. ಅವರ ಆದ್ಯತೆ ಜನಪ್ರಿಯ ಕಿರುಹೊತ್ತಿಗೆಗಳ ಕಡೆಗಿದೆ.

ಮಕ್ಕಳ ಪುಸ್ತಕಗಳು, ಮಹಿಳೆಯರಿಗೆ ಸಂಬಂಧಿಸಿದ ಪುಸ್ತಕಗಳು, ಎಲ್ಲಾ ಬಗೆಯ ಹಾಡುಗಳ ಪುಸ್ತಕಗಳು, ಜ್ಯೋತಿಷ್ಯ ಪುಸ್ತಕಗಳು, ಅಡಿಗೆ ಪುಸ್ತಕಗಳು ಹೆಚ್ಚು ಮಾರಾಟಗೊಂಡವು.

Dakshina Kannada district Sahithya Sammelana Book Sales Novels More popular

ಎಸ್. ಎಲ್ ಬೈರಪ್ಪನವರ "ಉತ್ತರಕಾಂಡ", ಮಣಿಕಾಂತ್‍ನವರ "ಮನಸ್ಸು ಮಾತಾಡಿತು" "ಭಾವ ತೀರಯಾನ" "ಅಮ್ಮ ಹೇಳಿದ ಎಂಟು ಸುಳ್ಳುಗಳು" "ಅಪ್ಪ ಅಂದ್ರೆ ಆಕಾಶ", ರವಿ ಬೆಳಗೆರೆಯವರ "ರಾಜ್ ಲೀಲಾ ವಿನೋದ" "ಆತ್ಮ" "ನಕ್ಷತ್ರ ಜಾರಿದಾಗ" "ಕಾಳಿಂಗ" ಕೃತಿಗಳನ್ನು ಕುತೂಹಲದಿಂದ ಹಲವರು ಗಮನಿಸುತ್ತಿದ್ದಾರೆ. ನಂತರ ಖರೀದಿಸುತ್ತಿದ್ದಾರೆ.

ಜನಸಾಮಾನ್ಯರಿಗೆ ಪುಸ್ತಕಗಳನ್ನು ತೆಗೆದುಕೊಳ್ಳುವ ಮನಸ್ಸು ಇದ್ದರೂ ಖರೀದಿ ಬೆಲೆಯು ಜನರನ್ನು ಹಿಂದೇಟು ಹಾಕಿಸುವಂತಹ ಪರಿಸ್ಥಿತಿ ಉಂಟಾಗುತ್ತಿದೆ. ಎಸ್. ಎಲ್ ಬೈರಪ್ಪನವರ "ಉತ್ತರಕಾಂಡ" ಅಧಿಕ ಬೆಲೆಯುಳ್ಳದ್ದು. ಇಷ್ಟವಿದ್ದರೂ ಕೆಲವರು ಈ ಕಾರಣಕ್ಕಾಗಿ ಖರೀದಿಗೆ ಹಿಂದೇಟು ಹಾಕಿದರು ಎಂದು ವೆಂಕಟೇಶ ಪುಸ್ತಕ ಭಂಡಾರದ ಚರಣ್ ತಿಳಿಸಿದರು.

Dakshina Kannada district Sahithya Sammelana Book Sales Novels More popular

ಪ್ರತಿಯೊಂದು ಪುಸ್ತಕ ಮಳಿಗೆಗಳಲ್ಲಿ ಜನಪ್ರಿಯ ಪುಸ್ತಕಗಳಾದ ಪಂಡಿತ ಜಿ.ವಿ ಶರ್ಮರವರ "ಆರ್ಷಧರ್ಮ" "ಸಂಪ್ರದಾಯ" "ದೈವದರ್ಶನ" "ಪಂಚಮವೇದ ಮಹಾಭಾರತ", ಡಾ.ಬಿ.ಆರ್. ಸುಹಾಸ್‍ರವರ "ಚಾಣಕ್ಯ ನೀತಿ ದರ್ಶನ" "ಪ್ರಾಚೀನ ಭಾರತ ಪ್ರೇಮ ಕಥೆಗಳು" "ಪ್ರಶ್ನೋತ್ತರ ಸುಭಾಷಿತಗಳು" "ಭೋಜ ಪ್ರಬಂಧ", ಎಸ್ ಜಗನ್ನಾಥರಾವ್ ಬಹುಳೆರವರ
"ಡಾ. ರಾಜ್‍ಕುಮಾರ್ ಸಿನಿಮಾ-ಬಹುಕು-ಸಾಧನೆ "ಅಣ್ಣಾವ್ರ ಅಮರ ಗೀತೆಗಳು", ಹೊ.ಶಾ ಅರುಣ್‍ರವರ "ಯೋಗ ಪರಿಚಯ" "ನಿತ್ಯ ಜೀವನದಲ್ಲಿ ಯೋಗ", "ತರವೇಹಾರಿ ಅಡುಗೆಗಳು" "ಗೃಹಣಿಯರ ಉಪಯುಕ್ತ ಸಲಹೆಗಳು", ಗಾದೆ, ಹಾಸ್ಯ, ಕ್ವಿಜ್ ಪುಸ್ತಕಗಳು ಹೀಗೆ ಹಲವಾರು ಪುಸ್ತಕಗಳನ್ನು ಖರೀದಿಸಲು ಜನರು ಆಸಕ್ತಿ ತೋರುತ್ತಿದ್ದಾರೆ.

ಹಲವಾರು ಪುಸ್ತಕಗಳು ಕೇವಲ ಬರಹಗಾರರ ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ಮಾರಾಟವಾಗುತ್ತವೆ. ಕೆಲವು ಓದುಗರು ಮಾತ್ರ ಬರವಣಿಗೆಯನ್ನು ಗಮನಿಸಿ ಮುನ್ನುಡಿ ಹಿನ್ನುಡಿಗಳನ್ನು ಓದಿ ಖರೀದಿಸುತ್ತಿರುವುದು ಕಂಡುಬಂತು.

"ಉಜಿರೆ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ಹಾಕಿರುವುದು ಹೊಸ ಅನುಭವವನ್ನು ತಂದಿದೆ. ಇಲ್ಲಿನ ಜನರಿಗೆ ಓದಿನ ಅಭಿರುಚಿ ಇದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ಖರೀಸುತ್ತಿದ್ದಾರೆ. ಜೊತೆಗೆ ಪುಸ್ತಕಗಳನ್ನು ಮಕ್ಕಳಿಗೆ ಕೊಡಿಸುವಂತಹ ಅಭಿರುಚಿಯ ತಂದೆ ತಾಯಿಯರೂ ಇದ್ದಾರೆ. ಮಕ್ಕಳು ತಮ್ಮ ಜ್ಞಾನ ಹಾಗೂ ವಯಸ್ಸಿನ ಮಿತಿಗೆ ಮೀರಿದ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ ಎಂದವರು ಕುಂದಾಪುರದ ಜಿ.ವಿ.ಎನ್ ಬುಕ್ ಮಾರ್ಕ್‍ನ ನವೀನ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada district Sahithya Sammelana 2017: Old books sold at discount rates, Kannada novels are more popular among the youth says store keeper.
Please Wait while comments are loading...