ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಗಾಂಧಿ ಸ್ವಾಗತಕ್ಕೆ ಕರಾವಳಿಯಲ್ಲಿ ಕಾಂಗ್ರೆಸ್ ನಿಂದ ಭರ್ಜರಿ ಸಿದ್ದತೆ

|
Google Oneindia Kannada News

ಮಂಗಳೂರು, ಮಾರ್ಚ್ 19: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ಭರಾಟೆ ಕರಾವಳಿಯಲ್ಲಿ ಜೋರಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರವಾಸ, ಬಿಜೆಪಿ ಸಂಸದರ ಜನರಕ್ಷಾ ಯಾತ್ರೆ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಬಳಿಕ ಇದೀಗ ಕಾಂಗ್ರೆಸ್ ನವರು ಪ್ರಚಾರಕ್ಕೆ ಧುಮುಕಿದ್ದಾರೆ.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ರಾಜ್ಯ ಕರಾವಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವುದು ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯದ ಕರಾವಳಿಗೆ ಭೇಟಿ ನೀಡುತ್ತಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಸ್ವಾಗತಕ್ಕೆ ಕಾಂಗ್ರೆಸ್ಸಿಗರು ಭರ್ಜರಿ ತಯಾರಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಮಾರ್ಚ್ 20, 21 ಕರ್ನಾಟಕ ಪ್ರವಾಸ ವೇಳಾಪಟ್ಟಿರಾಹುಲ್ ಗಾಂಧಿ ಮಾರ್ಚ್ 20, 21 ಕರ್ನಾಟಕ ಪ್ರವಾಸ ವೇಳಾಪಟ್ಟಿ

ಕಾಂಗ್ರೆಸಿಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ

ಕಾಂಗ್ರೆಸಿಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 13 ಕ್ಷೇತ್ರಗಳ ಪೈಕಿ 10ರಲ್ಲಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಈ ಬಾರಿ ತನ್ನ ಎಲ್ಲಾ ಸ್ಥಾನಗಳನ್ನು ಉಳಿಸಿಕೊಳ್ಳುವುದು, ಮಾತ್ರವಲ್ಲದೆ ಬಿಜೆಪಿಯ ಕೈಯಲ್ಲಿರುವ ಉಳಿದ 3 ಸ್ಥಾನಗಳನ್ನೂ ಕಸಿದುಕೊಳ್ಳುವ ಎಲ್ಲಾ ಪ್ರಯತ್ನ ಮಾಡುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭೇಟಿಯ ಬಳಿಕ ಇನ್ನೇನಿದ್ದರೂ ಕರಾವಳಿಯಲ್ಲಿ ರಾಗಾ ಹವಾ ಸೃಷ್ಟಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಗಾ ಭೇಟಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಒಂದಾದ ಮೇಲೊಂದು ಸಭೆ ನಡೆಯುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ರಾಹುಲ್ ಗಾಂಧಿ ಭೇಟಿ ವೇದಿಕೆಯಾಗಲಿದೆ.

ಎಲ್ಲೆಡೆ ಕಟೌಟ್

ಎಲ್ಲೆಡೆ ಕಟೌಟ್

ರಾಹುಲ್ ಸ್ವಾಗತಕ್ಕೆ ಮಂಗಳೂರಿನಲ್ಲಿ ಕಾಂಗ್ರೆಸ್‌ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮಂಗಳೂರಿನಲ್ಲಿ ಎಲ್ಲೆಡೆ ಬ್ಯಾನರ್ ಕಟೌಟ್‌ಗಳು ರಾರಾಜಿಸುತ್ತಿವೆ. ನಗರದ ಪ್ರಮುಖ ಸ್ಥಳಗಳಲ್ಲಿ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರುವ ಬ್ಯಾನರ್ ಕಟೌಟ್‌ಗಳನ್ನು ಹಾಕಲಾಗಿದೆ.

ರಾಹುಲ್ ಭೇಟಿಯನ್ನು ಯಶಸ್ವಿಗೊಳಿಸಲು ಕಾಂಗ್ರೆಸ್‌ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಮುಸ್ಲಿಂ ನಾಯಕರೂ ರಾಗಾ ಭೇಟಿ ಯಶಸ್ವಿಗೊಳಿಸಲು ನಿರ್ಧರಿಸಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮತ್ತು ನೆಹರೂ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಭೆಯ ಮೂಲಕ ಹೊಸ ಸಂದೇಶ ರವಾನಿಸಲು ಮುಸ್ಲಿಮ್ ನಾಯಕರು ಪಣತೊಟ್ಟಿದ್ದಾರೆ ಎಂದು ಹೇಳಲಾಗಿದೆ.

 ಮಾರ್ಚ್ 20, ಮಂಗಳವಾರ

ಮಾರ್ಚ್ 20, ಮಂಗಳವಾರ

11.30 - 11.45 ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ಉಡುಪಿಯ ತೆಂಕ ಎರ್ಮಾಳ್ ಗೆ ಆಗಮನ

12.00 - 12.45 ಮೀಸಲು ಸಮಯ

12.55 - 13.35 ರಾಜೀವ್ ಗಾಂಧಿ ಪೊಲಿಟಕಲ್ ಇನ್ ಸ್ಟಿಟ್ಯೂಟ್ ಉದ್ಘಾಟನೆ (ಸೇವಾ ದಲ ತರಬೇತಿ ಸಂಸ್ಥೆ), ಉಡುಪಿಯ ತೆಂಕ ಎರ್ಮಾಳ್ ನಲ್ಲಿ ಸೇವಾದಳದ ರಾಜ್ಯ ಪದಾಧಿಕಾರಿಗಳನ್ನು ಉದ್ದೇಶಿಸಿ ಭಾಷಣ

13.45 - 14.20 ಕಾರ್ನರ್ ಮೀಟಿಂಗ್, ಪಡುಬಿದ್ರಿ, ಉಡುಪಿ

14.25 - 15.00 ಮೀಸಲು ಸಮಯ

15.30 - 15.50 ದಕ್ಷಿಣ ಕನ್ನಡದ ಮೂಲ್ಕಿಯಲ್ಲಿ ಸ್ವಾಗತ

16.20 - 16.50 ದಕ್ಷಿಣ ಕನ್ನಡದ ಸುರತ್ಕಲ್ ನಲ್ಲಿ ಸ್ವಾಗತದ ಜತೆಗೆ ಭಾಷಣ

17.20 - 18.00 ಮಂಗಳೂರಿನ ಜ್ಯೋತಿ ವೃತ್ತದಿಂದ ಸಿಗ್ನಲ್ ಪಾಯಿಂಟ್ ವೃತ್ತದವರೆಗೆ ಮೆರವಣಿಗೆ

18.00 - 19.30 ಸಾರ್ವಜನಿಕ ಸಭೆ, ನೆಹರೂ ಮೈದಾನ, ಮಂಗಳೂರು

19.30 - 21.00 ಗೋಕರ್ಣನಾಥ ದೇವಸ್ಥಾನ, ರೋಜಾರಿಯೊ ಚರ್ಚ್ ಮತ್ತು ಉಳ್ಳಾಲ ದರ್ಗಾ ಭೇಟ

ರಾತ್ರಿ ವಾಸ್ತವ್ಯ - ಮಂಗಳೂರು ಸರ್ಕ್ಯೂಟ್ ಹೌಸ್

ಮಾರ್ಚ್ 21 ಬುಧವಾರ

ಮಾರ್ಚ್ 21 ಬುಧವಾರ

08.30 - 09.30 ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆಗೆ ಸಭೆ

09.30 - 10. 00 ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಿರಿಯ ನಾಯಕರ ಜತೆ ಸಭೆ

10.20 - 11.00 ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ಶೃಂಗೇರಿ (ಚಿಕ್ಕಮಗಳೂರು)ಗೆ ಪ್ರಯಾಣ

11.20 - 11.50 ಶೃಂಗೇರಿ ಮಠ ಮತ್ತು ಶಾರದಾಂಬ ದೇವಸ್ಥಾನಕ್ಕೆ ಭೇಟಿ

11.55 - 12.15 ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ ಜತೆ ಸಭೆ

12.25 - 13.10 ಶೃಂಗೇರಿ ಮಠದ ರಾಜೀವ್ ಗಾಂಧಿ ಸಂಸ್ಕೃತ ವಿವಿ ವಿದ್ಯಾರ್ಥಿಗಳ ಜತೆ ಸಂವಾದ

13.20 - 13.40 ಹೊಸದಾಗಿ ನಿರ್ಮಿಸಿರುವ ಬ್ಲಾಕ್ ಕಾಂಗ್ರೆಸ್ ಕಟ್ಟಡ ಉದ್ಘಾಟನೆ

13.45 - 14.15 ಹೆಲಿಕಾಪ್ಟರ್ ಮೂಲಕ ಶೃಂಗೇರಿಯಿಂದ ಚಿಕ್ಕಮಗಳೂರಿಗೆ

14.15 - 14.50 ಮೀಸಲು ಸಮಯ

15.00 - 16.00 ಸಾರ್ವಜನಿಕ ಸಭೆ, ಚಿಕ್ಕಮಗಳೂರು

16.40 - 17.00 ಸ್ವಾಗತ, ಬೇಲೂರು, ಹಾಸನ

18.00 - 19.30 ಸಾರ್ವಜನಿಕ ಸಭೆ, ಹಾಸನ

22.00 ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಗೆ ನಿರ್ಗಮನ

English summary
AICC president Rahul Gandhi to visit coastal districts ok Karnataka, Udupi and Dakshina Kannada on March 20. Congress leaders all set to welcome Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X