ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ: ಮಳೆ ಕಾರಣ ಇಂದು, ನಾಳೆ ಶಾಲೆಗೆ ರಜೆ

By Manjunatha
|
Google Oneindia Kannada News

ಮಂಗಳೂರು, ಜೂನ್ 08: ಕರಾವಳಿಯಲ್ಲಿ ಭಾರಿ ಮಳೆ ಮುಂದುವರೆದಿದ್ದು ಮುಂಜಾಗೃತಾ ಕ್ರಮವಾಗಿ ಇಂದು ಮತ್ತು ನಾಳೆ (ಜೂನ್ 08, ಜೂನ್ 9) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನಿನ್ನೆ ರಾತ್ರಿಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದ್ದು, ಬೆಳಿಗ್ಗೆ ಸಹ ಜೋರು ಮಳೆ ಬರುತ್ತಲೇ ಇರುವ ಕಾರಣ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ. ರಜೆಯನ್ನು ಶಾಲೆಗಳಿಗೆ ಮಾತ್ರವೇ ನೀಡಲಾಗಿದ್ದು ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಮುಂಬೈನಲ್ಲಿ ಭಾರಿ ಮಳೆ ನಿರೀಕ್ಷೆ, ಕಡಲಿಗೆ ಇಳಿಯದಂತೆ ಕೇರಳ ಮೀನುಗಾರರಿಗೆ ಸೂಚನೆಮುಂಬೈನಲ್ಲಿ ಭಾರಿ ಮಳೆ ನಿರೀಕ್ಷೆ, ಕಡಲಿಗೆ ಇಳಿಯದಂತೆ ಕೇರಳ ಮೀನುಗಾರರಿಗೆ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಟ್ಟ ಮೋಡಗಳು ಇದ್ದು, ದಿನವಿಡೀ ಮಳೆ ಆಗುವ ಸಾಧ್ಯತೆ ಇದೆ. ಈಗಾಗಲೆ ಭಾರಿ ಮಳೆ ಕಂಡಿರುವ ಜಿಲ್ಲೆಯಲ್ಲಿ ಇನ್ನೂ ಕೆಲವು ದಿನ ಪರಿಸ್ಥಿತಿ ಹೀಗೆ ಮುಂದುವರೆಯಲಿದೆ.

ಕರಾವಳಿಯಲ್ಲಿ ಜೂ. 7, 8 ರಂದು ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ ಕರಾವಳಿಯಲ್ಲಿ ಜೂ. 7, 8 ರಂದು ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ

Dakshin Kannada schools declared holiday due to heavy Rain

ಕರಾವಳಿ ಭಾಗದ ಕಾರವಾರ, ಮಂಗಳೂರು, ಉಡುಪಿಗಳಲ್ಲೂ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ. ಇದೇ ವಾತಾವರಣ ಇನ್ನೂ ಕೆಲವು ದಿನ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಗಳು ಪ್ರವಾಹ ಪರಿಸ್ಥತಿಇಗೆ ಸಿಲುಕಲಿವೆ.

English summary
Dakshin Kannada district commissioner declared holiday for school due to heavy rain. coastal area districts suffering from heavy rain they may face flood like situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X