ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೆ ಬಂತು ಸೈಬರ್ ಕ್ರೈಂ ಪೊಲೀಸ್ ಠಾಣೆ

|
Google Oneindia Kannada News

ಮಂಗಳೂರು, ಅ.9 : ಮಂಗಳೂರಿನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಠಾಣೆ ಆರಂಭವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ತಿಳಿಸಿದ್ದಾರೆ. ಪ್ರತಿ ವಲಯಲ್ಲಿ ಒಂದು ಸೈಬರ್ ಕ್ರೈಂ ಪೊಲೀಸ್ ಠಾಣೆ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಅದರಂತೆ ಪಶ್ಚಿಮ ವಲಯದ ಕಚೇರಿ ಮಂಗಳೂರಿನಲ್ಲಿ ಆರಂಭವಾಗಲಿದೆ ಎಂದರು.

ಮಂಗಳೂರಿನಲ್ಲಿ ಆರಂಭವಾಗುವ ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿಐಡಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ರಾಜ್ಯದ 6 ವಲಯಗಳಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಅದರಂತೆ ಮಂಗಳೂರಿನಲ್ಲಿಯೂ ಆರಂಭವಾಗಲಿದೆ ಎಂದು ಹಿತೇಂದ್ರ ಅವರು ಹೇಳಿದರು. ಸರ್ಕಿಟ್‌ ಹೌಸ್ ಬಳಿ ಇರುವ ಸಂಚಾರಿ ಪೊಲೀಸ್ ಠಾಣೆ ಕಟ್ಟಡದಲ್ಲಿ ಠಾಣೆ ಆರಂಭಿಸಲಾಗುತ್ತದೆ ಎಂದರು.

ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಆರಂಭದ ಹಂತದಲ್ಲಿ ಒಪ್ಪಂದದ ಮೇರೆಗೆ ಕೆಲವು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸಿಐಡಿ ಪೊಲೀಸರು ಯಾವ ಪ್ರಕರಣದ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡುತ್ತಾರೆ. ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿ ಠಾಣೆಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಒದಗಿಸಲಿದೆ ಎಂದು ತಿಳಿಸಿದರು. [ಸೈಬರ್ ಕ್ರೈಂ ಪಟ್ಟಿಯಲ್ಲಿ ಕರ್ನಾಟಕ ಟಾಪ್ 3]

ದೇಶದಲ್ಲಿ ಇತ್ತೀಚೆಗೆ ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಮೊದಲ ಮೂರು ಸ್ಥಾನಗಳಲ್ಲಿವೆ ಎಂದು ಎನ್‌ಸಿಆರ್‌ಬಿ ಇತ್ತಿಚಿನ ವರದಿಯಲ್ಲಿ ತಿಳಿಸಿತ್ತು. ಬೆಂಗಳೂರು ಹೊರತು ಪಡಿಸಿ ಇತರ ಜಿಲ್ಲೆಯಲ್ಲಿಯೂ ಸೈಬರ್ ಕ್ರೈಂ ಪೊಲೀಸ್ ಠಾಣೆ ತೆರೆಯಲು ಸರ್ಕಾರ ನಿರ್ಧರಿಸಿತ್ತು, ಅದರಂತೆ ಮಂಗಳೂರಿನಲ್ಲಿ ಠಾಣೆ ಆರಂಭವಾಗುತ್ತಿದೆ. [ಚಿತ್ರಗಳು : ಐಸಾಕ್ ರಿರ್ಚಡ್ ಮಂಗಳೂರು]

Cyber crime police station
English summary
To deal with the increasing number of cyber cases, the Karnataka government has sanctioned a cyber crime police station to Western range, said Mangalore City Police Commissioner R Hithendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X