ಮಂಗಳೂರಿನಲ್ಲಿ ಹಸಿದವರಿಗಾಗಿ ಊಟ ಕೊಡುವ ಫ್ರಿಡ್ಜ್!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು: ನಗರದ ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಯ ಬಳಿ ಕೈರನ್ನಾರ್ ಸಂಕೀರ್ಣದಲ್ಲಿರುವ 'ಕೊಹಿನೂರ್ ಕಂಪ್ಯೂಟರ್' ಸೈಬರ್ ಸೆಂಟರ್ ಮುಂದೆ ಇಟ್ಟಿರುವ ಆಹಾರ ತಿನಿಸುಗಳು ತುಂಬಿರುವ ಫ್ರಿಡ್ಜ್‌ವೊಂದು ಜನರ ಗಮನ ಸೆಳೆದಿದೆ.

ಅಂಗಡಿಯಲ್ಲಿ ಮಾರಾಟವಾಗದೆ ಉಳಿಯುವ ಆಹಾರ ಪದಾರ್ಥಗಳ ಜತೆ ತನ್ನದೇ ಖರ್ಚಿನಲ್ಲಿ ಊಟ, ಹಣ್ಣು-ಹಂಪಲು, ಮಿನರಲ್ ವಾಟರ್ ಗಳನ್ನು ಇಟ್ಟು ಆ ಮೂಲಕ ಆಸ್ಪತ್ರೆಯ ರೋಗಿಗಳು, ಮುಂಜಾನೆಯಲ್ಲಿ ಬರುವ ಪ್ರಯಾಣಿಕರು, ಭಿಕ್ಷುಕರು ಮತ್ತು ಹಸಿದವರ ಹಸಿವು ನೀಗಿಸುವ ಕೆಲಸವನ್ನು ಅಂಗಡಿಯ ಮಾಲೀಕ ತೋರಿಸಿದ್ದಾರೆ.

''ದೂರದ ಪ್ರದೇಶದಿಂದ ನಗರದ ಆಸ್ಪತ್ರೆಗೆ ಬರುವವರು ಹಣವಿಲ್ಲದೆ, ಆಹಾರಕ್ಕಾಗಿ ಪರದಾಡಿದ್ದನ್ನು ಮತ್ತು ಹಣ ಇದ್ದವರು ತಡ ರಾತ್ರಿಯಲ್ಲಿ ಆಹಾರದ ಹುಡುಕಾಟ ನಡೆಸುತ್ತಿದ್ದುದನ್ನು ನಾನು ಗಮನಿಸಿದ್ದೇನೆ.

ನೂರಾರು ಕಿಲೋ ಮೀಟರ್ ಬಸ್ಸಿನಲ್ಲಿ ಪ್ರಯಾಣಿಸಿ ಬೆಳಗ್ಗಿನ ಜಾವ 3-4 ಗಂಟೆಗೆ ನಗರಕ್ಕೆ ತಲುಪುವ ಪ್ರಯಾಣಿಕರು ನೀರಿಗಾಗಿ ಅಲೆದಾಟ ನಡೆಸಿರುವುದನ್ನು ಕಂಡಿದ್ದೇನೆ.

ಇವರಿಗೆಲ್ಲಾ ಉಪಯೋಗವಾಗುವ ನಿಟ್ಟಿನಲ್ಲಿ 24 ಗಂಟೆಯೂ ಅಂಗಡಿ ಮುಂದೆ ಫ್ರಿಡ್ಜ್‌ನ್ನು ಇಟ್ಟುಕೊಂಡು ಆಹಾರ ವಸ್ತುಗಳನ್ನು ತುಂಬಿಸಿದ್ದೇನೆ. ಎನ್ನುತ್ತಾರೆ ಮಾಲೀಕ ಅರಫಾತ್.

ಬಿರಿಯಾನಿಯನ್ನೂ ಪೂರೈಸುತ್ತಿದ್ದಾರೆ ಅರಫಾತ್!

ಬಿರಿಯಾನಿಯನ್ನೂ ಪೂರೈಸುತ್ತಿದ್ದಾರೆ ಅರಫಾತ್!

ಈ ಶೀತ ಪೆಟ್ಟಿಗೆಯ ಮತ್ತೊಂದು ವಿಶೇಷವೇನೆಂದರೆ, ಪ್ರತಿದಿನ ತಲಾ ಒಬ್ಬರಿಗೊಂದರಂತೆ 7 ಬಿರಿಯಾನಿ ಪೊಟ್ಟಣ, 2 ಕೆ.ಜಿ. ಕಿತ್ತಳೆ ಹಣ್ಣು, 1 ಕೆ.ಜಿ. ಬಾಳೆ ಹಣ್ಣು, 7 ಚಿಕ್ಕ ಪ್ಯಾಕ್‌ಗಳ ಫ್ರೂಟಿ ಜ್ಯೂಸ್, ಅರ್ಧ ಲೀಟರಿನ 5 ಮಿನರಲ್ ವಾಟರ್ ಬಾಟಲ್ಸ್, 1 ಲೀಟರ್‌ನ ಎರಡು ಮಿನರಲ್ ವಾಟರ್ ಬಾಟಲ್ಸ್ ಮತ್ತು ಪಪ್ಪಾಯವನ್ನು ಅವರು ತುಂಬಿಸಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಡಲಾಗಿದ್ದ ಆಹಾರ ತಿನಿಸುಗಳು ಸಂಜೆ 7 ಗಂಟೆ ಹೊತ್ತಿಗೆ ಖಾಲಿಯಾಗುತ್ತದೆ ಎಂದು ಅರಫಾತ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಸಾರ್ವಜನಿಕರೂ ಆಹಾರ ಇಡಬಹುದು

ಸಾರ್ವಜನಿಕರೂ ಆಹಾರ ಇಡಬಹುದು

ಈ ಫ್ರಿಡ್ಜ್‌ನಲ್ಲಿ ಸಾರ್ವಜನಿಕರಿಗೂ ಆಹಾರ ವಸ್ತುಗಳನ್ನು ಕೂಡ ಇಡುವ ಅವಕಾಶವನ್ನು ಕಲ್ಪಿಸಲಾಗಿದೆ. ಯಾರಾದರೂ ಹಸಿದವರಿಗೆ ನೆರವಾಗಲು ಬಯಸಿದರೆ, ಸಾರ್ವಜನಿಕರಿಗಾಗಿ ಇಡಲಾಗಿದ್ದ ಈ ಫ್ರಿಡ್ಜ್‌ನಲ್ಲಿ ಆಹಾರವನ್ನು ಇಡಬಹುದು ಎಂದು ಅರಫಾತ್ ತಿಳಿಸಿದರು.

ದುರ್ಬಳಕೆ ತಡೆಗೆ ಸಿಸಿಟಿವಿ ಕಣ್ಗಾವಲು

ದುರ್ಬಳಕೆ ತಡೆಗೆ ಸಿಸಿಟಿವಿ ಕಣ್ಗಾವಲು

ಈ ಫ್ರಿಡ್ಜ್ ದುರುಪಯೋಗವಾಗದಂತೆ ಫ್ರಿಡ್ಜ್‌ನ ಮೇಲ್ಬದಿಯಲ್ಲಿ ಸಿಸಿ ಕ್ಯಾಮರಾವನ್ನು ಕೂಡ ಅಳವಡಿಸಲಾಗಿದ್ದೆ. ಆಹಾರ ಉಪಯೋಗಿಸಬಯಸುವವರು ಸ್ವಚ್ಛತೆಯನ್ನು ಕಾಪಾಡುವಂತೆ ಕಡಕ್ ಸೋಚನೆ ಕೂಡ ಇದೆ.

ಹಗಲು ಹೊತ್ತಿನಲ್ಲಿ ಭಿಕ್ಷುಕರು ಬಂದರೆ ಅವರು ನೇರವಾಗಿ ಫ್ರಿಡ್ಜ್‌ನೊಳಗೆ ಕೈ ಹಾಕದೆ ಅವರಿಗೆ ಬೇಕಾದ ಆಹಾರವನ್ನು ತೆಗೆದು ಕೊಡುವಂತೆ ತನ್ನ ಅಂಗಡಿಯ ಸಿಬ್ಬಂದಿಗೆ ಸೂಚಿಸಿದ್ದೇನೆ ಎನ್ನುತ್ತಾರೆ ಅರಫಾತ್.

ಹಗಲಿರುಳು ಕಾರ್ಯನಿರ್ವಹಿಸುವ ಫ್ರಿಡ್ಜ್

ಹಗಲಿರುಳು ಕಾರ್ಯನಿರ್ವಹಿಸುವ ಫ್ರಿಡ್ಜ್

ಇನ್ನೂ ಹಗಲಿರುಳು ಚಾಲನೆಯಲ್ಲಿರುವ ಈ ಫ್ರಿಡ್ಜ್‌ನ ವಿದ್ಯುತ್ ಖರ್ಚನ್ನು ಸ್ವತ ಅರಫಾತ್ ಅವರೇ ಭರಿಸುತ್ತಿದ್ದಾರೆ.‘‘ಫ್ರಿಡ್ಜ್‌ನಲ್ಲಿರುವ ಆಹಾರ ಪದಾರ್ಥಗಳನ್ನು ಅವಶ್ಯಕತೆ ಇರುವ ಸಾರ್ವಜನಿಕರು ಉಚಿತವಾಗಿ ಉಪಯೋಗಿಸಬಹುದು'' ಎಂದೂ ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಬರೆಯಲಾಗಿದೆ.

ಗಮನ ಸೆಳೆಯುವ ಚಿತ್ರಗಳು

ಗಮನ ಸೆಳೆಯುವ ಚಿತ್ರಗಳು

ಫ್ರಿಡ್ಜ್‌ನ ಎಡ ಹಾಗೂ ಬಲ ಬದಿಗಳಲ್ಲಿ ಕೆಲವು ಚಿತ್ರಗಳನ್ನು ಅಳವಡಿಸಲಾಗಿದ್ದು, ಇವು ಹೊಟ್ಟೆ ತುಂಬಾ ಉಂಡು ಉಳಿದ ಆಹಾರವನ್ನು ಬಿಸಾಡುವವರ ಗಮನ ಸೆಳೆಯಲಾಗಿದೆ. ಬಿಸಾಡಿದ ಆಹಾರವನ್ನು ಹಸಿದ ಹೊಟ್ಟೆಗಳು ಸೇವನೆ ಮಾಡುತ್ತಿರುವ ಚಿತ್ರಗಳು ಇನ್ನೊಂದೆಡೆ ಗಮನ ಸೆಳೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Arafahat, owner of the Kohinur comupters a cyber center, in Mangaluru, was moved to combat both food waste and hunger after seeing people scavenging waste food from bins.
Please Wait while comments are loading...