ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಅಕ್ರಮ ಮರ ಸಾಗಾಟ, ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ

|
Google Oneindia Kannada News

ಮಂಗಳೂರು, ನವೆಂಬರ್ 29 : ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಶಿರಾಡಿ ರಕ್ಷಿತಾರಣ್ಯದಲ್ಲಿ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗ: ನೆಲಕ್ಕುರುಳಿದ ಕುವೆಂಪು ರಸ್ತೆಯ ನೇರಳೆ ಮರ, ಪ್ರತಿಭಟನೆಶಿವಮೊಗ್ಗ: ನೆಲಕ್ಕುರುಳಿದ ಕುವೆಂಪು ರಸ್ತೆಯ ನೇರಳೆ ಮರ, ಪ್ರತಿಭಟನೆ

ರಾತ್ರಿ ಹೊತ್ತಿನಲ್ಲಿ ಮರ ಕಡಿದು ವ್ಯವಸ್ಥಿತವಾಗಿ ಹೊರಗೆ ಸಾಗಿಸುವ ಜಾಲ ವ್ಯಾಪಕವಾಗಿದ್ದು, ಇದರ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಮರ ಕಳ್ಳ ಸಾಗಣೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೈಕಟ್ಟಿಕೊಂಡು ಕುಳಿತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Cutting of costly trees is been taking place at Western ghat by robbers

ಅರಣ್ಯ ಮಧ್ಯೆ ಬೃಹತ್ ಸಾಗುವಾನಿ, ಹೆಬ್ಬಲಸು, ತೇಗದ ಮರಗಳನ್ನು ಕಡಿದು ಸಣ್ಣ ದಿಮ್ಮಿಗಳಾಗಿಸಿ ಸಾಗಾಟಕ್ಕೆ ರೆಡಿ ಮಾಡಿಟ್ಟ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.

ಅರಣ್ಯ ಸಚಿವ ರಮಾನಾಥ ರೈ ಅವರ ತವರು ಜಿಲ್ಲೆಯಲ್ಲಿಯೇ ಮರ ಕಳ್ಳರಿಗೆ ಇಲಾಖೆಯ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆಯೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

ಅರಣ್ಯ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಮರ ಕಳ್ಳಸಾಗಣೆಯ ಖಚಿತ ಮಾಹಿತಿ ಇದೇ ಮೊದಲ ಬಾರಿಗೆ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವುದರಿಂದ ಲೂಟಿಕೋರರ ಕಳ್ಳಸಾಗಣೆಗೆ ರಹದಾರಿ ಸಿಕ್ಕಂತಾಗಿದೆ. ಈ ಕುರಿತು ಅರಣ್ಯ ರಾಜ್ಯ ಸರಕಾರ ಕ್ರಮಕೈಗೊಳ್ಳ ಬೇಕಾದ ಅಗತ್ಯವಿದೆ.

English summary
Cutting of costly trees is been taking place at western ghat by robbers. The incident came to light in the Shiradi sanctuary near the Mangaluru-Bangaluru National Highway in western Ghats. The network is widespread in the nighttime, with a system of slip-off and systematic outsourcing to locals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X