ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಾಯ್ಲೆಟ್ ನಲ್ಲಿ 37.17 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್!

|
Google Oneindia Kannada News

ಮಂಗಳೂರು: ನವೆಂಬರ್ 04: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಡಿ ಆರ್ ಐ ಅಧಿಕಾರಿಗಳು ನಿಲ್ದಾಣದ ಶೌಚಾಲಯದಲ್ಲಿ ಅಡಗಿಸಿ ಇಡಲಾಗಿದ್ದ 10 ಚಿನ್ನದ ಬಿಸ್ಕೆಟ್ ಗಳನ್ನು ಪತ್ತೆ ಹಚ್ಚಿ ವಶಪಡಿಸಿ ಕೊಂಡಿದ್ದಾರೆ.

ದುಬೈನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬಂಧಿದ್ದ ಪ್ರಯಾಣಿಕನೊಬ್ಬ ಈ ಚಿನ್ನದ ಬಿಸ್ಕೆಟ್ ಗಳನ್ನು ತಂದಿದ್ದ ಎನ್ನಲಾಗಿದೆ. 1.16 ಕೆಜಿ ತೂಕದ ಒಟ್ಟು 10 ಚಿನ್ನದ ಬಿಸ್ಕೆಟ್ ಗಳನ್ನು ಪ್ಯಾಕೆಟ್ ಒಂದರಲ್ಲಿ ಹಾಕಿ ಮಂಗಳೂರು ಅಂತರರಾಷ್ಟ್ರೀಯ ನಿಲ್ದಾಣದ ಶೌಚಾಲಯದಲ್ಲಿ ಅಡಗಿಸಿ ಇಡಲಾಗಿತ್ತು . ಈ ಕುರಿತು ಖಚಿತ ಮಾಹಿತಿ ಪಡೆದ ಡಿ ಆರ್ ಐ ಅಧಿಕಾರಿಗಳು ಶೌಚಾಲಯದಲ್ಲಿ ಶೋಧ ಕಾರ್ಯ ನಡೆಸಿ ಅಕ್ರಮವಾಗಿ ತರಲಾಗಿದ್ದ 10 ಚಿನ್ನದ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Customs DRI Officials Seize 10 Gold Bars

ಶೌಚಾಲಯದಿಂದ ವಶಪಡಿಸಿಕೊಂಡಿರುವ ಚಿನ್ನದ ಒಟ್ಟು ಮೌಲ್ಯ 34 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಶೌಚಾಲಯದಲ್ಲಿ ಇರಿಸಲಾಗಿದ್ದ ಚಿನ್ನದ ಬಿಸ್ಕೆಟ್ ಗಳನ್ನು ಹೊರಗೆ ಸಾಗಿಸುವಲ್ಲಿ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಡಿ ಆರ್ ಐ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ . ಚಿನ್ನ ಸಾಗಾಟ ಮಾಡಿರುವ ವ್ಯಕ್ತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

English summary
Customs DRI Officials At MIA Seize 10 Gold Bars Worth Rs 34.17 Lakh Concealed In Aircraft Toilet Specific information received by DRI Unit showed that some passenger who had arrived by Spicejet Flight No.SG60 from Dubai to Mangalore International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X