ಸಿದ್ದರಾಮಯ್ಯನವರನ್ನು ಬೆಂಬಿಡದ ಕಾಗೆ ಕಾಟ!

Written By: Ramesh
Subscribe to Oneindia Kannada

ಮಂಗಳೂರು(ಮಂಜೇಶ್ವರ),ಜನವರಿ. 20 : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅದ್ಯಾಕೋ ಕಾಗೆ ಕಾಟ ತಪ್ಪುತ್ತಿಲ್ಲ. ಬೆಂಗಳೂರಿನಲ್ಲಿ ಕಾರು ಮೇಲೆ ಕೂತು ಸುದ್ದಿ ಮಾಡಿದ್ದ ಕಾಗೆ ಸಿದ್ದರಾಮಯ್ಯ ಕೇರಳಕ್ಕೆ ಹೋದರೂ ಬಿಟ್ಟಿಲ್ಲ.

ಕಾರಿನಲ್ಲಿ ಕಾಗೆ ಕುಳಿತ ಬಳಿಕ ಸಿಎಂ ಕಾರು ಬದಲಾಯಿಸಿದ್ದು ಹಳೇ ವಿಷ್ಯವಾದ್ರೂ ಕಾಗೆ ಮಾತ್ರ ಸಿದ್ದರಾಮಯ್ಯನವರ ಬೆನ್ನು ಬಿಟ್ಟಿಲ್ಲ. ಕಳೆದ ಬಾರಿ ಕಾರಿನ ಮೇಲೆ ಕುಳಿತಿದ್ದ ಕಾಗೆ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆಯೇ ಹಿಕ್ಕೆ ಹಾಕಿದೆ.[ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ]

Crow poops on Karnataka CM Siddaramaiah's spotless white dhoti

ಗುರುವಾರ ಕರ್ನಾಟಕ ಕೇರಳ ಗಡಿ ಭಾಗದ ಮಂಜೇಶ್ವರದಲ್ಲಿ ಕವಿ ಗೋವಿಂದ ಪೈ ಗಿಳಿವಿಂಡು ಸ್ಮಾರಕ ಉದ್ಘಾಟನೆಗಾಗಿ ಆಗಮಿಸಿದ್ದ ವೇಳೆ ಸಿದ್ದರಾಮಯ್ಯನವರಿಗೆ ಕಾಗೆ ಕಾಟ ನೀಡಿದೆ.[ಕಾಗೆ ಕೂರೋದಕ್ಕೂ, ಕಾರು ಬದಲಾಯಿಸೋದಕ್ಕೂ ಸರಿ ಹೋಯ್ತು!]

ತೆರೆದ ವೇದಿಕೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಕೇರಳ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂತ್ರಿಗಳ ಜೊತೆ ಕೂತಿದ್ದ ವೇಳೆ ವೇದಿಕೆಯ ಹಿಂದಿನ ಮರದಲ್ಲಿ ಕುಳಿತಿದ್ದ ಕಾಗೆಯೊಂದು ನೇರವಾಗಿ ಸಿದ್ದರಾಮಯ್ಯನವರ ಮೇಲೆ ಹಿಕ್ಕೆ ಹಾಕಿದೆ.

ಕಾಗೆ ಹಿಕ್ಕೆ ಕಂಡು ಸಿಎಂ ವಿಚಲಿತರಾದರೂ ತಕ್ಷಣ ಜೊತೆಯಲ್ಲಿದ್ದವರ ಗಮನಕ್ಕೆ ತಂದರು. ಆಮೇಲೆ ಸೆಕ್ಯುರಿಟಿ ಗಾರ್ಡ್ ಹಾಗೂ ಶಾಸಕ ಮೊಯಿದ್ದೀನ್ ಭಾವ ಬಂದು ಸಿಎಂ ಪಂಚೆ ಮೇಲೆ ಕಾಗೆ ಹಾಕಿದ ಹಿಕ್ಕೆಯನ್ನು ಶುಚಿ ಗೊಳಿಸಿದರು.

ಸಾವಿರಾರು ಜನ ನೆರೆದಿದ್ದ ಸಭೆಯಲ್ಲಿ ಕಾಗೆ ಸಿಎಂ ಅವರನ್ನೇ ಗುರಿಯಾಗಿಸಿದ್ದು ನೆರೆದಿದ್ದ ಸಾರ್ವಜನಿಕರನ್ನು ಆಶ್ಚರ್ಯ ಗೊಳಿಸುವಂತೆ ಮಾಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A crow that was fluttering over two chief ministers during an Rashtrakavi Govinda Pai memorial inauguration ceremony at created a stir when the bird's droppings fell on Karnataka chief minister Siddaramaiah at Manjeshwara.
Please Wait while comments are loading...