ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೆ ಮಹಾರಾಷ್ಟ್ರ ಮೂಲದ ಕ್ರಿಕೆಟ್ ಬ್ಯಾಟ್ ಗಳು ಲಗ್ಗೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜನವರಿ. 03 : ನಗರದಾದ್ಯಂತ ಇನ್ನಷ್ಟೇ ಕ್ರಿಕೆಟ್ ಟೆನ್ನಿಸ್ ಬಾಲ್ ಟೂರ್ನಿಗಳು ಆರಂಭವಾಗಿದೆ. ಇದರಿಂದ ಕ್ರಿಕೆಟ್ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದ್ದರೇ, ಇತ್ತ ನಗರದಲ್ಲಿ ಮಹಾರಾಷ್ಟ್ರದ ಉತ್ತಮ ದರ್ಜೆಯ ಕಡಿಮೆ ದರದಲ್ಲಿ ಬಣ್ಣ ಬಣ್ಣದ ಬ್ಯಾಟುಗಳು ಕ್ರಿಕೆಟ್ ಪ್ರಿಯರಿಗಾಗಿ ಸಿದ್ದಗೊಂಡಿವೆ.

ಹೌದು. ನಗರದ ಕೆ.ಪಿ.ಟಿ ವೃತ್ತದಿಂದ ನಂತೂರು ಕಡೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 66ರ ಎಡಬದಿಯಲ್ಲಿ ಬ್ಯಾಟ್ ತಯಾರಿಕೆ ಹಾಗೂ ಮಾರಾಟ ಭರದಿಂದ ಸಾಗುತ್ತಿದೆ.

ಮಹಾರಾಷ್ಟ್ರದ ಧುಲೆ ಜಿಲ್ಲೆಯಿಂದ ಆಗಮಿಸಿದ ಎರಡು ಕುಟುಂಬಗಳು ಜೋಪಡಿ ರಚಿಸಿ ಬ್ಯಾಟ್ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸುಮಾರು ಹತ್ತು ದಿನಗಳಿಂದ ಈ ಕುಟುಂಬ ನಗರದಲ್ಲಿ ನೆಲೆಸಿದ್ದು, ಕ್ರಿಕೆಟ್‌ ಬ್ಯಾಟುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಹೊತ್ತಿನ ಊಟ ಕಂಡುಕೊಳ್ಳುತ್ತಿವೆ.

Cricket Bat makers from Maharashtra have arrived at mangaluru to sell colourful cricket bats

ಈ ಕುಟುಂಬಗಳು ಮಹಾರಾಷ್ಟ್ರದಿಂದ ಬ್ಯಾಟ್ ನಿರ್ಮಾಣಕ್ಕೆ ಬೇಕಾದ ಮರದ ಸಣ್ಣ ಸಣ್ಣ ದಿಮ್ಮಿಗಳೊಂದಿಗೆ ಮಂಗಳೂರಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ದೊರೆಯುವ ವಾರೂಲ್ ಎಂಬ ಮರದಿಂದ ಈ ಬ್ಯಾಟ್ ನಿರ್ಮಿಸುತ್ತಿದ್ದಾರೆ.

ತಾವು ತಯಾರಿಸುವ ಬ್ಯಾಟ್ ಗೆ ಕನಿಷ್ಠ 150ರಿಂದ 450ರೂ. ವರೆಗೆ ಬೆಲೆ ನಿಗದಿ ಮಾಡಿದ್ದಾರೆ. ಮಕ್ಕಳಿಗಂತೂ ಬಣ್ಣ ಬಣ್ಣದ ಬ್ಯಾಟ್ ಗಳು ಆಕರ್ಷಿಸುತ್ತಿವೆ.

ಚಿಕ್ಕ ಮಕ್ಕಳು ಆಡಲು ಯೋಗ್ಯವಾದ ಸಣ್ಣ ಸಣ್ಣ ಬ್ಯಾಟುಗಳು ಮಾತ್ರವಲ್ಲದೆ ದೊಡ್ಡವರು ಉಪಯೋಗಿಸುವ ದೊಡ್ಡ ಗಾತ್ರದ ಬ್ಯಾಟುಗಳನ್ನು ಇವರು ತಯಾರಿಸುತ್ತಾರೆ. ಇದಲ್ಲದೆ ಜಾಯಿಂಟ್ ವಿಕೆಟ್(ಸ್ಟಂಪ್) ಕೂಡಾ ತಯಾರಿಸುತ್ತಾರೆ.

ಕಾರ್ಯವೈಖರಿ ಗಮನಾರ್ಹ: ಬ್ಯಾಟ್ ನಿರ್ಮಾಣ ಇವರ ಕುಲಕಸಾಬಾಗಿರುವುದರಿಂದ ಒಂದು ಬ್ಯಾಟ್ ತಯಾರಿಸಲು ಕನಿಷ್ಠ ಒಂದು ಗಂಟೆ ತಗುಲುತ್ತದೆ. ಆ ಒಂದು ಗಂಟೆಯಲ್ಲಿ ಬ್ಯಾಟ್ ನ ಮೇಲೆ ಬಣ್ಣ ಬಣ್ಣದ ಟೇಪ್ ಗಳನ್ನು ಹಚ್ಚಿ ಅದರ ಅಂದ ಹೆಚ್ಚಿಸಲಾಗುತ್ತಿದೆ.

ಸಿಂಗಲ್ ವುಡ್ ನಿಂದ ಬ್ಯಾಟ್ ತಯಾರಿಸುವುದರಿಂದ ಹೆಚ್ಚಿನ ಬಾಳಿಕೆ ಬರುತ್ತದೆ. ಈ ಕುರಿತು ಒನ್ ಇಂಡಿಯಾ ಜತೆ ಬ್ಯಾಟ್ ತಯಾರಕ ಸಂದೀಪ್ ಠಾಕ್ರೆ ಮಾತನಾಡಿ ,

ಟೆನ್ನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುವವರಿಗೆ ಈ ಬ್ಯಾಟ್ ಬಹಳ ಯೋಗ್ಯವಾಗಿದೆ. ಮಿತಬೆಲೆಗೆ ಸ್ಥಳದಲ್ಲೇ ಬ್ಯಾಟ್ ನಿರ್ಮಿಸುತ್ತೇವೆ. ಮಳೆಗಾಲ ಬಿಟ್ಟು ಉಳಿದ ಆರು ತಿಂಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಬ್ಯಾಟ್ ನಿರ್ಮಿಸಿ ಮಾರಾಟ ಮಾಡುತ್ತಿದ್ದೇವೆ.

ಮಂಗಳೂರಿಗೆ ಮೊದಲ ಬಾರಿಗೆ ಬಂದಿದ್ದೇವೆ. ಮಂಗಳೂರಿನಲ್ಲಿ ವ್ಯಾಪಾರ ಉತ್ತಮವಾಗಿದೆ'' ಎಂದರು.

English summary
Cricket Bat makers from Maharashtra have arrived at mangaluru to sell colourful cricket bats. Youths throng in large numbers to buy cricket bats at K.P.T, Mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X