ಮಂಗಳೂರು ರೈಲ್ವೆ ಸ್ಟೇಷನ್ ನಲ್ಲಿ ಕಳ್ಳರು, ಕಾಸ್ಟ್ಲಿ ಮೀನೇ ಕಣ್ಮರೆ

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 14: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪರ ಊರುಗಳಿಂದ ಬರುವ, ಬೆಲೆ ಬಾಳುವ ಸರಕುಗಳು ಕಣ್ಮರೆಯಾಗುತ್ತವೆ ಎಂಬ ಆರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದೇಶದ ವಿವಿಧ ಭಾಗಗಳಿಂದ ರೈಲಿನ ಮೂಲಕ ಬರುವ ಸರಕು-ಸಾಮಗ್ರಿಗಳನ್ನು ಕದಿಯುವ ಜಾಲವೊಂದು ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಸಕ್ರಿಯವಾಗಿದೆ.

ರೈಲು ನಿಲ್ದಾಣದಲ್ಲಿ ಮುಖ್ಯವಾಗಿ ಈ ಕಳ್ಳರು ಚೆನ್ನೈನಿಂದ ಮಂಗಳೂರಿಗೆ ಬರುವ ಅಲಂಕಾರಿಕ ಮೀನುಗಳನ್ನೇ ಕದಿಯುತ್ತಿದ್ದಾರೆ. ಹಲವು ವರ್ಷಗಳಿಂದ ಈ ರೈಲು ನಿಲ್ದಾಣದಲ್ಲಿ ಈ ರೀತಿ ಕಳ್ಳತನ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದವರಿಗೆ ಉಡಾಫೆ ಉತ್ತರವನ್ನು ರೈಲು ನಿಲ್ದಾಣದ ಸರಕು ನಿರ್ವಹಣಾ ಸಿಬ್ಬಂದಿ ನೀಡುತ್ತಿದ್ದಾರೆ ಎಂಬುದು ಆರೋಪ.

ಮಂಗಳೂರು: ಕಾರಿನಲ್ಲೇ ಹೆರಿಗೆ, ಮಾನವೀಯತೆ ಮೆರೆದ ಹೆಡ್‌ಕಾನ್ಸ್ಟೇಬಲ್‌

ವಾರದ ಹಿಂದೆ ಮಂಗಳೂರಿನ ಅಕ್ವೇರಿಯಂ ಫಿಶ್ ಮಾರಾಟಗಾರರು ಚೆನ್ನೈನಿಂದ ತಮಗೆ ಬೇಕಾದ ಬೆಲೆ ಬಾಳುವ ಅಲಂಕಾರಿಕ ಮೀನುಗಳನ್ನು ಖರೀದಿಸಿದ್ದರು. ದೂರವಾಣಿ ಮೂಲಕ ಮೀನುಗಳಿಗೆ ಆರ್ಡರ್ ಕೊಟ್ಟು, ಅವುಗಳಿಗೆ ತಗಲುವ ವೆಚ್ಚವನ್ನು ಚೆನ್ನೈ ಡೀಲರ್ ಗೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದರು. ಹೀಗೆ ಖರೀದಿಸಿದ ಮೀನುಗಳನ್ನು ಚೆನ್ನೈನ ಮಾರಾಟಗಾರ ರೈಲಿನ ಮೂಲಕ ಮಂಗಳೂರಿಗೆ ಕಳುಹಿಸಿದ್ದರು.

Fish

ಮಂಗಳೂರು ತನಕ ರೈಲಿನಲ್ಲಿ ಸುರಕ್ಷಿತವಾಗಿ ತಲುಪಿದ ಅಲಂಕಾರಿಕ ಮೀನುಗಳ ಬಾಕ್ಸ್ ರೈಲಿನಿಂದ ಅನ್ ಲೋಡ್ ಆಗುವ ಸಂದರ್ಭದಲ್ಲಿ ಮಾಯವಾಗಿತ್ತು. ಬೆಲೆಬಾಳುವ ಮೀನುಗಳಾದ ಅರೋನಾ, ಫೈಟರ್ ಫಿಶ್ ಸೇರಿದಂತೆ ಹಲವು ಮೀನುಗಳನ್ನು ಎಗರಿಸಲಾಗಿದೆ.

ಇವೇ ಮೀನುಗಳನ್ನಲ್ಲದೆ ಹೈಪರ್ ಮಾರುಕಟ್ಟೆಗಳಿಗೆ ಬರುವ ಮೀನುಗಳನ್ನೂ ಕದಿಯುತ್ತಿದ್ದಾರೆ ಎಂಬುದು ಅರೋಪ. ಇಲ್ಲಿಗೆ ಬರುವ ಒಂದೊಂದು ಬಾಕ್ಸ್ ಗಳಿಂದ ಐದಾರು ಮೀನುಗಳನ್ನು ಕದಿಯುತ್ತಿದ್ದು, ಮೀನಿನ ವ್ಯಾಪಾರಿಗಳು ವಿಚಾರಿಸಿದಲ್ಲಿ ಇಲ್ಲಿನ ಎಲ್ಲರೂ ಹಾರಿಕೆ ಉತ್ತರವನ್ನು ನೀಡುತ್ತಾರೆ.

ಈ ಬಗ್ಗೆ ರೈಲು ನಿಲ್ದಾಣದ ಸರಕು ನಿರ್ವಹಣಾ ಸಿಬ್ಬಂದಿಯನ್ನು ಪ್ರಶ್ನಿಸಿದರೂ ಇಂಥದೇ ಉತ್ತರ ದೊರೆಯುತ್ತಿದೆ. ರೈಲು ನಿಲ್ದಾಣದ ಕೂಲಿಯಾಳುಗಳು ಹಾಗೂ ಸರಕು ನಿರ್ವಹಣೆಯ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Costly fish worth lakhs bring from Chennai to Mangaluru through rail are stolen from coolies is now the new allegation raised. Aquarium dealers who order fish from Chennai are unable to get there orders because of robbery.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ