ಕೆಜೆ ಜಾರ್ಜ್ ಸಂಪುಟ ಸೇರಿದರೆ, ಕಾಂಗ್ರೆಸ್ ನಾಶ: ಪೂಜಾರಿ

Posted By:
Subscribe to Oneindia Kannada

ಮಂಗಳೂರು, ಸೆ.18: ಮಾಜಿ ಸಚಿವ ಕೆ.ಜೆ. ಜಾರ್ಜ್‌ ಅವರ್ಯ್ ಮತ್ತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ ಕಾಂಗ್ರೆಸ್ ಪಕ್ಷ ನಾಶವಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಭಾನುವಾರ ಭವಿಷ್ಯ ನುಡಿದಿದ್ದಾರೆ.

ಕುದ್ರೋಳಿ ಕ್ಷೇತ್ರದಲ್ಲಿ ಉರುಳು ಸೇವೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ರೀತಿ ಹೇಳಿದರು. ಕೆಜೆ ಜಾರ್ಜ್ ರನ್ನು ಉಳಿಸಲು ಎಲ್ಲರೂ ಯತ್ನಿಸುತ್ತಿದ್ದಾರೆ. ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜೆ. ಜಾರ್ಜ್‌ ಅವರಿಗೆ ಸಿಐಡಿ ಕ್ಲೀನ್‌ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಪೂಜಾರಿ ಅವರು ಮೇಲ್ಕಂಡಂತೆ ಪ್ರತಿಕ್ರಿಯಿಸಿದ್ದಾರೆ.[ಕಾವೇರಿಗಾಗಿ ಜನಾರ್ಧನ ಪೂಜಾರಿ ಉರುಳುಸೇವೆ, ಸಿಎಂಗೂ ಆಹ್ವಾನ]

Congress will vanish if KJ George makes re entry into Cabinet : Janardhana Poojary

ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಬದಲಿಗೆ ಸಿಐಡಿಗೆ ಒಪ್ಪಿಸಿದ್ದರ ಹಿಂದೆ ಯಾವ ಕುತಂತ್ರ ಇತ್ತು ಎಂಬುದು ಈಗ ಎಲ್ಲರಿಗೂ ಅರಿವಾಗಿದೆ. ಆರೋಪಿಗಳನ್ನು ಬಚಾವ್ ಮಾಡಲು ಏನೆಲ್ಲ ಮಾಡಿದರು. ಇನ್ನು ಎಷ್ಟು ಕಾಲ ಇವರನ್ನು ರಕ್ಷಿಸಲು ಸಾಧ್ಯ. ಇನ್ನೆರಡು ವರ್ಷಗಳ ಕಾಲ ಮಾತ್ರ, ಆಮೇಲೆ ಬರುವ ಹೊಸ ಸರಕಾರ ಈ ಬಗ್ಗೆ ಮರುತನಿಖೆ ನಡೆಸಬಹುದು ಎಂದರು.

ಡಿವೈಎಸ್ಪಿ ಗಣಪತಿಯ ಮರಣಪೂರ್ವ ವಿಡಿಯೋ ಹೇಳಿಕೆಯನ್ನು ತನಿಖೆಯ ವೇಳೆ ಪರಿಗಣಿಸಿದಂತೆ ತೋರುತ್ತಿಲ್ಲ. ಈ ಪ್ರಕರಣವು ಸುಪ್ರೀಂ ಕೋರ್ಟಿನ ಮೂಲಕ ತನಿಖೆ ಆಗಬೇಕು ಎಂದು ಜನಾರ್ದನ ಪೂಜಾರಿ ಆಗ್ರಹಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ಹಾಗೂ ಸಾರ್ವಜನಿಕರ ಏಳಿಗೆಗಾಗಿ, ನದಿಗಳ ವಿವಾದಗಳಲ್ಲಿ ರಾಜ್ಯದ ಪರ ತೀರ್ಪು ಬರಲಿ ಎಂದು ಬಯಸಿ ಕುದ್ರೋಳಿ ದೇಗುಲದಲ್ಲಿ ಜನಾರ್ದನ ಪೂಜಾರಿ ಅವರು ಉರುಳು ಸೇವೆ ಸಲ್ಲಿಸಿದರು. ಪೂಜಾರಿ ಅವರ ಜತೆಗೆ ಶಾಸಕರಾದ ಲೋಬೊ, ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ ಮುಂತಾದವರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress will vanish if KJ George makes re entry into Siddaramaiah Cabinet said Janardhana Poojary. Poojary today(September 18) offered Urulu Seva ta Kudroli Temple for the welfare of Congress.
Please Wait while comments are loading...