ಸ್ವಾಮೀಜಿಗೆ ಏಕವಚನ ಪ್ರಯೋಗ, ಶಾಸಕ ಜೈನ್ ವಿರುದ್ಧಆಕ್ರೋಶ

Posted By:
Subscribe to Oneindia Kannada

ಮಂಗಳೂರು, ಮಾರ್ಚ್ 14: ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಶಾಸಕ‌ ಅಭಯಚಂದ್ರ ಜೈನ್ ಮತ್ತೆ ತಮ್ಮ ಸಿಡುಕು ಸ್ವಭಾವ ಹಾಗೂ ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಬಾರಿ ಅವರು ಮೂಡಬಿದ್ರೆಯ ಕರಿಂಜೆ ಮುಕ್ತಾನಂದ ಸ್ವಾಮೀಜಿಯವರನ್ನು ಏಕ ವಚನ ಪದ ಪ್ರಯೋಗ ಮಾಡಿ ನಿಂದಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇತ್ತೀಚೆಗೆ ಮುಡಬಿದ್ರೆಯಲ್ಲಿ ಪಕ್ಷದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಶಾಸಕ ಅಭಯಚಂದ್ರ ಜೈನ್ , "ಅವಾ ಯಾರೋ ಒಬ್ಬ ಕರಿಂಜೆ ಸ್ವಾಮೀಜಿ ಭಾಷಣದಲ್ಲಿ ಹೇಳಿದನಂತೆ, 'ಒಬ್ಬ ರಾಕ್ಷಸ ಮುಖ್ಯಮಂತ್ರಿ ಇದ್ದಾನೆ. ಒಬ್ಬ ರಾಕ್ಷಸ ಎಂಎಲ್‍ಎ ಇದ್ದಾನೆ' ಅಂತ. ನನಗೆ ಬೈಯಲಿ. ಅದು ಬಿಟ್ಟು ಮುಖ್ಯಮಂತ್ರಿಗೆ ಇನ್ನೊಮ್ಮೆ ಬೈದರೆ ಅವನು ಎಷ್ಟು ದೊಡ್ಡ ಸ್ವಾಮೀಜಿ ಆದರೂ ಬಿಡುವುದಿಲ್ಲ. ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ. ಅವನು ಸರ್ಕಾರಿ ಜಾಗ ಕಬಳಿಸಿದ್ದಾನೆ. ಅವನ ವಿರುದ್ಧ ಹೋರಾಟ ಮಾಡುತ್ತೇನೆ," ಎಂದು ಹೇಳಿದ್ದಾರೆ.

ಕ್ಷೇತ್ರ ಪರಿಚಯ: ಬಿಜೆಪಿಗೆ ಒಲಿಯದ ಕಾಂಗ್ರೆಸ್ ಭದ್ರಕೋಟೆ ಮೂಡಬಿದಿರೆ

ಶಾಸಕರು ಏಕವಚನದಲ್ಲಿ ಸ್ವಾಮೀಜಿಗೆ ನಿಂದಿಸಿ ಸವಾಲೆಸೆದ ವಿಡಿಯೋ ತುಣುಕು ಈಗ ವೈರಲ್ ಆಗಿದ್ದು ಭಾರೀ ಅಕ್ರೋಶ ವ್ಯಕ್ತವಾಗುತ್ತಿದೆ. ಶಾಸಕ ಅಭಯಚಂದ್ರ ಹೇಳಿಕೆಗೆ ಹಿಂದೂಪರ ಸಂಘಟನೆಗಳು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿವೆ.

Congress MLA Abayachandra Jain is now once again in controversy

ಈ ನಡುವೆ ಬಿಜೆಪಿ ಕೂಡ ಶಾಸಕ ಅಭಯಚಂದ್ರ ಜೈನ್ ವಿರುದ್ದ ಅಕ್ರೋಶ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಉಮಾನಾಥ್ ಕೋಟ್ಯಾನ್ ಶಾಸಕ ಅಭಯ ಚಂದ್ರ ಜೈನ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬಹಿರಂಗವಾಗಿ ಕಚ್ಚಾಡಿಕೊಂಡ ಶಾಸಕ ಬಾವಾ, ಅಭಯಚಂದ್ರ ಜೈನ್

ಕರಿಂಜೆ ಮುಕ್ತಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ರಾಮ ಹಾಗೂ ರಾವಣ ರಾಜ್ಯದ ಬಗ್ಗೆ ಪ್ರಸ್ತಾವಿಸಿದ್ದರು. ಸಿದ್ಧರಾಮಯ್ಯ ಹಾಗೂ ಅಭಯಚಂದ್ರ ಜೈನ್ ಗೆ ರಾಕ್ಷಸ, ರಾವಣ ಎಂದಿಲ್ಲ. ಆದರೆ ಶಾಸಕ ಅಭಯಚಂದ್ರ ಜೈನ್ ಚೇಲಾಗಳು ಹೇಳಿದ ಮಾತನ್ನು ನಂಬಿ ಸ್ವಾಮೀಜಿ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಅಭಯ ಚಂದ್ರ ಜೈನ್ ಸ್ವಾಮೀಜಿ ಅವರನ್ನು ಚುನಾವಣೆಗೆ ನಿಲ್ಲುವಂತೆ ಸವಾಲು ಒಡ್ಡಿದ್ದಾರೆ. ತಾಕತ್ತಿದ್ದರೆ ಈ ಬಾರಿ ಅಭಯಚಂದ್ರ ಜೈನ್ ಚುನಾವಣೆಗೆ ಸ್ಪರ್ಧಿಸಲಿ ಎಂದು ಅವರು ಕಿಡಿಕಾರಿದರು.

Congress MLA Abayachandra Jain is now once again in controversy

ಕರಿಂಜೆ ಶ್ರೀಗಳು ಸರಕಾರಿ ಜಾಗ ಕಬಳಿಸಿದ್ದಾರೆಂದು ಶಾಸಕ ಅಭಯಚಂದ್ರ ಜೈನ್ ಆರೋಪಿಸಿದ್ದಾರೆ. ದೇವಸ್ಥಾನದ ಸಮಿತಿಯಲ್ಲಿ ಅಭಯಚಂದ್ರ ಜೈನ್ ಕೂಡಾ‌ ಸದಸ್ಯರು. ಸ್ವಾಮೀಜಿ ಒಂದು ಇಂಚು ಜಾಗ ಕಬಳಿಸಿದ್ದರೆ ತೋರಿಸಲಿ ಎಂದು ಅವರು ಸವಾಲೊಡ್ಡಿದ್ದಾರೆ.

ಸ್ವಾಮೀಜಿ ವಿರುದ್ಧ ಏಕವಚನ ಪದ ಬಳಕೆ, ಜಾಗ ಕಬಳಿಸಿದ‌ ಆರೋಪ ಮಾಡಿದ್ದಕ್ಕೆ ಅಭಯಚಂದ್ರ ಜೈನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು. ಕ್ಷಮೆ ಕೇಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ‌ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress MLA Abayachnadra Jain is now once again in controversy by using Singular words to Karanje Swamiji of Moodabidre. A video of this has been gone extremely viral on social media, where thousands are mocking against minister Abayachandra for his words against Swamiji.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ