ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ಧನ ಪೂಜಾರಿಗೆ ಬೆದರಿಕೆಯೊಡ್ಡಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ

|
Google Oneindia Kannada News

ಮಂಗಳೂರು, ಡಿಸೆಂಬರ್ 07: ಶ್ರೀ ರಾಮ ಮಂದಿರ ನಿರ್ಮಾಣ ಪರ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಬೆಂಬಲಕ್ಕೆ ಬಿಜೆಪಿ ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಕೂಡ ಎಚ್ಚೆತ್ತು ಕೊಂಡಿದೆ .

ಜನಾರ್ಧನ ಪೂಜಾರಿ ಅವರಿಗೆ ಎನ್ ಕೌಂಟರ್ ನಲ್ಲಿ ಕೊಲ್ಲಬೇಕೆಂದು ಬೆದರಿಕೆ ಹಾಕಿದ್ದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಹಿರಿಯ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

 ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ವೈರಲ್ ಆದ ವಾಯ್ಸ್ ಮೆಸೇಜ್ ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ವೈರಲ್ ಆದ ವಾಯ್ಸ್ ಮೆಸೇಜ್

ಪೂಜಾರಿ ಅವರನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ಗಡಿಪಾರು ಮಾಡಬೇಕೆಂದು ಆಡಿಯೋ ಸಂದೇಶ ಕಳುಹಿಸಿದ್ದ ವ್ಯಕ್ತಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮಾಜಿ ಶಾಸಕರುಗಳ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಗುರುವಾರ (ಡಿ.06) ಭೇಟಿ ಮಾಡಿ ಮನವಿ ಸಲ್ಲಿಸಿದೆ.

Congress leaders submitted a memorandum to police commissioner

ಪೂಜಾರಿ ಅವರು ರಾಮಮಂದಿರ ನಿರ್ಮಾಣ ಕುರಿತಂತೆ ನೀಡಿರುವ ಹೇಳಿಕೆಯನ್ನು ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಖಂಡಿಸಿ ವಿರೋಧ ವ್ಯಕ್ತಪಡಿಸಿತ್ತು . ಈ ನಡುವೆ ವ್ಯಕ್ತಿಯೋರ್ವ ಪೂಜಾರಿ ಅವರನ್ನು ಎನ್ ಕೌಂಟರ್ ಮಾಡಬೇಕು, ಗಡಿಪಾರು ಮಾಡಬೇಕು, ಕಾಂಗ್ರೆಸ್ ಪಕ್ಷದಿಂದ ಈ ಕೂಡಲೇ ವಜಾ ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಆಡಿಯೋ ಸಂದೇಶ ಕಳುಹಿಸಿದ್ದ.

ರಾಮ ಮಂದಿರ ಪರ ಮಾತನಾಡಿದ ಜನಾರ್ಧನ ಪೂಜಾರಿಗೆ ಬಿಜೆಪಿ ಮುಖಂಡರ ಬೆಂಬಲರಾಮ ಮಂದಿರ ಪರ ಮಾತನಾಡಿದ ಜನಾರ್ಧನ ಪೂಜಾರಿಗೆ ಬಿಜೆಪಿ ಮುಖಂಡರ ಬೆಂಬಲ

ಮಾಜಿ ಶಾಸಕರಾದ ಜೆ ಆರ್ ಲೋಬೋ, ವಿಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ನ ನಾಯಕರು ಮತ್ತು ಕಾರ್ಯಕರ್ತರು ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಜನಾರ್ಧನ ಪೂಜಾರಿ ವಿರುದ್ಧ ನೀಡಿರುವ ಹೇಳಿಕೆ ನಮಗೆ ಆಘಾತ ತಂದಿದೆ.

 ಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ ಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ

ಪೂಜಾರಿ ಅವರು ದೇಶದ ಹಿರಿಯ ನಾಯಕ. ಅವರಿಗೆ ಈ ರೀತಿ ಬೆದರಿಕೆಯೊಡ್ಡಿ, ಆಡಿಯೋ ಸಂದೇಶ ಕಳುಹಿಸಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

English summary
Former MLA JR lobo and other congress leaders submitted a memorandum to police commissioner demanding stern action against Janardhan poojary's abuser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X