ರಾಜ್ಯಸಭೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ತುಳು ಹಾಡು ಹಾಡಿದ ಗಮ್ಮತ್ತು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು / ನವ ದೆಹಲಿ, ಏಪ್ರಿಲ್ 10 : ರಾಜ್ಯಸಭೆ ಇತ್ತೀಚೆಗೆ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಗಾಯನ ಪ್ರತಿಭೆಗೆ ಸಾಕ್ಷಿಯಾಗಿತ್ತು. ಕರ್ನಾಟಕದ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಖಾಸಗಿ ಸದಸ್ಯರ ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ ಆಸ್ಕರ್ ಫೆರ್ನಾಂಡಿಸ್ ಪೂರ್ವಸಿದ್ಧತೆಯಿಲ್ಲದೆಯೇ ತುಳುವಿನ ಹಾಡೊಂದನ್ನು ಹಾಡಿದರು.

ತಮ್ಮ ಸಹಪಾಠಿ ಸಂಸದ ಮತ್ತು ಕನ್ನಡಿಗ ಜೈರಾಂ ರಮೇಶ್ ಅವರು ತಮ್ಮನ್ನು ತುಳುವಿನಲ್ಲೇ ಮಾತನಾಡುವಂತೆ ಪ್ರಚೋದಿಸಿದ್ದರು. ಆದರೆ ಮಾತನಾಡುವ ಬದಲಾಗಿ ಹಾಡನ್ನು ಹಾಡಲು ನಿರ್ಧರಿಸಿದೆ ಎಂದೂ ಅವರು ಹೇಳಿದರು.[ಉಳ್ಳಾಲಾದಲ್ಲಿ ಶಂಕಿತ ಉಗ್ರ ಚಟುವಟಿಕೆ ಪ್ರಕರಣದ ತೀರ್ಪು ಪ್ರಕಟ]

Congress leader Oscar Fernandes sings tulu song in Rajya Sabha

ಕರ್ನಾಟಕದ ಉಡುಪಿ ಮೂಲದವರಾದ ಫೆರ್ನಾಂಡಿಸ್ ಈ ತುಳು ಹಾಡನ್ನು ತಮ್ಮ ಬಾಲ್ಯದಲ್ಲಿ ಹಾಡುತ್ತಿದ್ದುದನ್ನೂ ನೆನಪಿಸಿಕೊಂಡರು. ಈ ಹಾಡನ್ನು ಎಮ್ಮೆಗಳನ್ನು ಪಳಗಿಸಲು ಹಾಡಲಾಗುತ್ತಿತ್ತು ಎಂದು ವಿವರಿಸಿದ ಆಸ್ಕರ್ ಹಾಡಲು ಶುರುವಿಟ್ಟುಕೊಂಡರು.[ಪಿಎಫ್ಐ ಈಗ ನನ್ನನ್ನು ಟಾರ್ಗೆಟ್ ಮಾಡಿದೆ: ಸಚಿವ ಖಾದರ್]

ಹಾಡುತ್ತಾ ಆಸ್ಕರ್ ನೀಡುತ್ತಿದ್ದ ಹಾವ-ಭಾವ ಜೈರಾಂ ರಮೇಶ್ ಮಾತ್ರವಲ್ಲ ಇತರ ಸಂಸದರ ಮೆಚ್ಚಿಗೆಗೂ ಪಾತ್ರವಾಯಿತು. ಆ ಸಂದರ್ಭದಲ್ಲಿ ಸಭಾಧ್ಯಕ್ಷರಾಗಿದ್ದ ಸುಖೇಂದು ಶೇಖರ್ ರಾಯ್ ಹಾಡಿಗೆ ಪ್ರಶಂಸೆ ಸೂಚಿಸಿದರು. ನೀವು ಸಾಮಾನ್ಯ ಗಾಯಕರಂತೆಯೇ ಹಾಡಿದ್ದೀರಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದಾರು.

ಆಸ್ಕರ್ ಫೆರ್ನಾಂಡಿಸ್ ರಾಜ್ಯಸಭೆಯಲ್ಲಿ ಹಾಡಿದ ತುಳು ಹಾಡು ಇಲ್ಲಿದೆ..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress leader Oscar Fernandes breaks the silent in the Rajya Sabha by singing a beatiful Tulu song to add up tulu in 8th scheduled of the constitution.
Please Wait while comments are loading...