ಭ್ರಷ್ಟ ಸಚಿವ,ಶಾಸಕರ ಹೆಸರು ಹೇಳುವಂತೆ ಯಡ್ಡಿಗೆ ಪೂಜಾರಿ ಸವಾಲ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 19 : ಎಚ್ ವೈ ಮೇಟಿ ಲೈಂಗಿಕ ಹಗರಣದ ಬಳಿಕ ಇನ್ನಿಬ್ಬರು ಸಚಿವರು ಹಾಗೂ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದಿರುವ ಬಿ ಎಸ್ ಯಡಿಯೂರಪ್ಪನವರಿಗೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಸವಾಲು ಎಸೆದಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯದ ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರು ರಾಜೀನಾಮೆ ನೀಡಲಿದ್ದಾರೆಂದು ಹೇಳಿರುವ ಯಡಿಯೂರಪ್ಪನವರು ತಕ್ಷಣಅಂತ ಸಚಿವ ಮತ್ತು ಶಾಸಕರ ಹೆಸರು ಬಹಿರಂಗ ಪಡಿಸಲಿ' ಎಂದು ಸವಾಲು ಹಾಕಿದರು. ['ದಿನೇಶ್ ಅಮಿನ್ ಮಟ್ಟುವಿನಿಂದಲೇ ಸಿಎಂ ಸಿದ್ದರಾಮಯ್ಯ ಸಮಾಧಿ']

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ನಡೆಸಲಿ ಎಂದರು. ಅಸಮರ್ಪಕ ರೀತಿಯಲ್ಲಿ ನೋಟುಗಳನ್ನು ರದ್ದುಗೊಳಿಸಿದ ಪರಿಣಾಮವಾಗಿ ದೇಶದ ಅಭಿವೃದ್ಧಿ 5ವರ್ಷ ಹಿಂದಕ್ಕೆ ಸರಿದಿದೆ. ದೇಶದಲ್ಲಿ ಭೃಷ್ಟಾಚಾರ ಹೆಚ್ಚುತ್ತಿರುವ ಕಾರಣ ಆರ್ಥಿಕ ವ್ಯವಸ್ಥೆ ನಾಶವಾಗುತ್ತಿದೆಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. [50 ಕೋಟಿ ಲಂಚ ಪಡೆದ ಕೈ ಸಚಿವರ ಹೆಸರು ತಿಳಿಸಿ: ಪೂಜಾರಿ]

Senior Congress leader Poojary challenges Yeddyurappa to reveal names of 'corrupt' ministers

ಸೈನಿಕರಿಗೆ ನೀಡಿದ ಭರವಸೆ ಈಡೇರಿಕೆ ಆಗದಿರುವ ಬಗ್ಗೆ ಅವರಿಗೆ ನಿರಾಸೆಯಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ, ಸುಶ್ಮಾ ಸ್ವರಾಜ್‌ ಕುಟುಂಬದ ಸದಸ್ಯರು, ಉದ್ಯಮಿ ವಿಜಯ ಮಲ್ಯ, ಲಲಿತ್ ಮೋದಿ ಮೊದಲಾದ ಭ್ರಷ್ಟಾಚಾರಿಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಹಾನಿಯಾಗಿದೆ ಎಂದರು.

ದೇಶದ ಆರ್ಥಿಕ ವ್ಯವಸ್ಥೆ ಈ ರೀತಿ ದುರ್ಬಲಗೊಳ್ಳುತ್ತಿದ್ದರೂ ಪ್ರಧಾನಿ ಮೋದಿ ಮೌನವಹಿಸಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ಜನರನ್ನು ಕಂಗೆಡಿಸಿದೆ ಎಂದು ಜನಾರ್ದನ ಪೂಜಾರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಪುರಂದರ, ಕರುಣಾಕರ ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior Congress leader Janardhan Poojary on Monday December 19 dared BJP state president and former chief minister B S Yeddyurappa to reveal the names of the two state ministers and two MLAs who are allegedly involved in corruption.
Please Wait while comments are loading...