ರಸ್ತೆ ಮರುನಾಮಕರಣಕ್ಕೆ ಮಂಗಳೂರು ಬಂಟರ ಸಂಘ ತೀವ್ರ ವಿರೋಧ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 1: ಮಂಗಳೂರಿನ ಕ್ಯಾಥೋಲಿಕ್ ಕ್ಲಬ್ ನಿಂದ ಅಂಬೇಡ್ಕರ್ ವೃತ್ತದವರೆಗಿನ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯನ್ನು ಸಂತ ಅಲೋಶಿಯಸ್ ಕಾಲೇಜು ರಸ್ತೆಯಾಗಿ ಪುನರ್ ನಾಮಕರಣ ಮಾಡುವ ಪ್ರಕ್ರಿಯೆಗೆ

ಮಂಗಳೂರು ಬಂಟರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಬಾವುಟ ಗುಡ್ಡೆ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ಹೆಸರಿಡುವ ಪ್ರಕ್ರಿಯೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಬಂಟ ಸಮುದಾಯದ ನಾಯಕರು ಹೇಳಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಕಾಂಗ್ರೆಸ್ ಇದರ ನೇರ ಪರಿಣಾಮಗಳನ್ನು ಚುನಾವಣೆ ಸಮಯದಲ್ಲಿ ಎದುರಿಸಲಿದೆ ಎಂದು ಕೂಡ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ.

Congress to face trouble in elections warns bunt community against St. Aloysius Road issue

ರಸ್ತೆ ಮರುನಾಮಕರಣ ವಿಷಯದಲ್ಲಿ ಶಾಸಕ ಜೆ ಆರ್ ಲೋಬೋ ಸಹಿತ ಕಾಂಗ್ರೆಸ್ ನಾಯಕರು ಬಂಟರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಸಮಸ್ಯೆಯನ್ನು ಯಾರೂ ಸೃಷ್ಟಿಸಿದ್ದಾರೆ ಅವರೇ ಸರಿಪಡಿಸಿ ಕೊಡಬೇಕು ಎಂದು ಆಗ್ರಹಿಸಲಾಗಿತ್ತು. ಗುಪ್ತ ತನಿಖೆ ಪರಿಶೀಲನೆಯ ಬಳಿಕ ಸರಕಾರವೇ ರಸ್ತೆ ನಿರ್ಮಾಣಕ್ಕೆ ಆದೇಶ ನೀಡಿತ್ತು . ಅದೇ ಸರಕಾರ ಮತ್ತೆ ತಡೆ ನೀಡಲು ಸರ್ಕಾರಕ್ಕೆ ಶಾಸಕ ಜೆ ಆರ್ ಲೋಬೋ ನೀಡಿದ ತಪ್ಪು ಮಾಹಿತಿಯೇ ಕಾರಣ ಎಂದು ಅವರು ಆರೋಪಿಸಿದರು.

'ಒನ್ ಇಂಡಿಯಾ' ಕನ್ನಡ ಜೊತೆ ಮಾತನಾಡಿದ ವಿಜಯ ಬ್ಯಾಂಕ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮುಲ್ಕಿ ಕರುಣಾಕರ್ ಶೆಟ್ಟಿ ಇದಕ್ಕೆ ಸರಿಯಾದ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದು ಮಾತ್ರವಲ್ಲ ಸಾರ್ವಜನಿಕರ ಆಕ್ಷೇಪಣೆ ಕೇಳಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಅಲ್ಲದೇ ರಸ್ತೆಗೆ ನಾಮಕರಣ ಮಾಡುವಂತೆ ಕೋರಿ 2009ರಲ್ಲಿ ಅರ್ಜಿ ಹಾಕಲಾಗಿತ್ತು. ನಾಮಕರಣದ ಆದೇಶ ಬಂದಿದ್ದು 2017ರಲ್ಲಿ. ಅಂದರೆ ಯಾವುದೋ ಹಠಾತ್‌ ಆಗಿ ನಿರ್ಧಾರವಾದದಲ್ಲ ಎಂದು ಕರುಣಾಕರ್ ಶೆಟ್ಟಿ ತಿಳಿಸಿದ್ದಾರೆ .

Mangaluru Police innovative way to punish traffic violators

ಕಾನೂನು ಹೋರಾಟಕ್ಕೆ ಸಿದ್ಧ
ಬಾವುಟ ಗುಡ್ಡೆ ಲೈಟ್ ಹೌಸ್ ಎಂದು ಕರೆಸಿಕೊಳ್ಳುವ ರಸ್ತೆಗೆ ಇನ್ನೂ ಅಧಿಕೃತ ಹೆಸರಿರಲಿಲ್ಲ. ಸಂತ ಅಲೋಶಿಯಸ್ ಕಾಲೇಜಿನವರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು ಎಂದು ಮನವಿ ಮಾಡುವ ಬಂಟ ನಾಯಕರು ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಬಂಟ ಸಮುದಾಯದ ಶಕ್ತಿ ಸಾಮರ್ಥ್ಯ ತೋರಿಸುವ ಮೂಲಕ ರಾಜಕಾರಣಿಗಳಿಗೆ ಎಚ್ಚರಿಕೆ ನೀಡುವ ಪ್ರಕ್ರಿಯೆಗಳನ್ನು ಈಗಿನಿಂದಲೇ ಆರಂಭಿಸಲಾಗಿದೆ.
ರಸ್ತೆ ನಾಮಕರಣಕ್ಕೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಂಗಳೂರು ನಗರ ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬಂಟ ಸಂಘಟನೆಯವರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಮಂಗಳೂರಿನಲ್ಲಿರುವ ಅನೇಕ ಬಂಟರ ಸಂಘಗಳು ಮೇಯರ್ ಅವರಿಗೆ ಮನವಿ ನೀಡಿದ್ದಾರೆ ಕಾಂಗ್ರೆಸ್ ನಾಯಕರ ಉದ್ಧಟತನ ಚುನಾವಣೆಯ ವೇಳೆ ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ಇದೆ. ಈ ಮಧ್ಯೆ ಬಿಜೆಪಿ ಇದರ ಲಾಭ ಪಡೆಯಲು ಪ್ರಯತ್ನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Congress will face trouble during election time is what the Bunt community states in connection with St. Aloysius Road issue. The cancellation of the renaming of the road as Mulki Sundaram Shetty Road which was scheduled on July 2 has severely hurt the sentiments of the Bunts communities.
Please Wait while comments are loading...