ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮೇಯರ್ ಕವಿತಾ ವಿರುದ್ಧ ದೂರು ದಾಖಲು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 28: ಅಪಾರ್ಟ್ ಮೆಂಟ್ ನ ವಾಚ್ ಮನ್ ಕುಟಂಬದ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಗಳೂರು ಮೇಯರ್ ಕವಿತಾ ಸನೀಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ವಾಚ್ ಮನ್ ಪುಂಡಲೀಕ ಅವರ ಪತ್ನಿ ಕಮಲಾ ದೂರು ದಾಖಲಿಸಿದ್ದಾರೆ.

ವಾಚ್ ಮನ್ ಕುಟುಂಬದ ಮೇಲೆ ಮಂಗಳೂರು ಮೇಯರ್ ಕರಾಟೆ, ಜನರ ತರಾಟೆವಾಚ್ ಮನ್ ಕುಟುಂಬದ ಮೇಲೆ ಮಂಗಳೂರು ಮೇಯರ್ ಕರಾಟೆ, ಜನರ ತರಾಟೆ

ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ಮುಖಂಡರು ಮೇಯರ್ ವಾಸವಿರುವ ಅಪಾರ್ಟ್ ಮೆಂಟ್ ಗೆ ತೆರಳಿ ವಾಚ್ ಮನ್ ಹಾಗೂ ಪತ್ನಿಯ ಭೇಟಿ ಮಾಡಿ, ಮಾಹಿತಿ ಸಂಗ್ರಹಿಸಿದ್ದಾರೆ . ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಬಿಜೆಪಿ ಮುಖಂಡರು ಸಂತ್ರಸ್ತರ ಬೆಂಬಲಕ್ಕೆ ನಿಂತಿದ್ದಾರೆ.

Complaint registered against Mangaluru mayor Kavita Sanil

ಮಂಗಳೂರು ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಮೇಯರ್ ಒಬ್ಬರು ಈ ರೀತಿ ವರ್ತನೆ ತೋರಿದ್ದಾರೆ. ಈ ಮೂಲಕ ಮೇಯರ್ ಕವಿತಾ ಸನಿಲ್ ಕಳಂಕ ತಂದಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಮೇಯರ್ ಕವಿತಾ ಸನಿಲ್, ಅಪಾರ್ಟ್ ಮೆಂಟ್ ನ ವಾಚ್ ಮನ್, ಅವರ ಪತ್ನಿ ಹಾಗೂ ಮಗುವಿನ ಮೇಲೆ ಹಲ್ಲೆ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ಬಿಜೆಪಿ ಮುಖಂಡರಾದ ಪೂಜಾ ಪೈ ಹಾಗೂ ರೂಪಾ ಬಂಗೇರ ಅಪಾರ್ಟ್ ಮೆಂಟ್ ಗೆ ಆಗಮಿಸಿ ವಾಚ್ ಮೆನ್ ಹಾಗೂ ಅವರ ಕುಟುಂಬಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲು ಪ್ರೋತ್ಸಾಹಿಸಿದ್ದಾರೆ ಎಂದಿದ್ದಾರೆ.

ಈ ಪ್ರಕರಣ ರಾಜಕೀಯ ಪ್ರೇರಿತ ಎಂದು ಮೇಯರ್ ಕವಿತಾ ಸನಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Complaint registered against Mangaluru mayor Kavita Sanil in Pandeshwara women police station. Her apartment watchmen wife Kamala has registered assault complaint against Kavita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X