ಮಂಗಳೂರು: ಕ್ರೈಸ್ತ ಧರ್ಮದ ಬಗ್ಗೆ ಅವಹೇಳನ, ಆರೋಪಿ ಬಂಧನಕ್ಕೆ ಒತ್ತಾಯ

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 12 : ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುವ ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ-ದಿನೇ ಹೆಚ್ಚುತ್ತಿದೆ.

ಮಂಗಳೂರು: ಫೇಸ್ಬುಕ್ ನಲ್ಲಿ ಅಶ್ಲೀಲ ಪೋಸ್ಟ್, ಆರೋಪಿ ಬಂಧನ

ಸಂವಹನದ ಸಂಪರ್ಕದ ಕೊಂಡಿಯಾಗಿ ಸಾಮಾಜೀಕ, ಸಾಂಸ್ಕೃತಿಕ ಅಲ್ಲದೆ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಬೇಕಾಗಿದ್ದ ಸಾಮಾಜಿಕ ಜಾಲತಾಣಗಳು ಇಂದು ದೈವ ,ದೇವರು, ಧರ್ಮಗಳನ್ನು ನಿಂದಿಸುವ ಹಾಗೂ ತೇಜೋವಧೆಗೆ ಬಳಕೆಯಾಗುತ್ತಿದೆ . ಇದಕ್ಕೆ ಪುಷ್ಟಿ ನೀಡುವಂತೆ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ .

Complaint filed against youth for derogatory post on christian In Mangaluru

ಯುವರನೋರ್ವ ಕ್ರೈಸ್ತ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ. ಈ ಅವಹೇಳನಕಾರಿ ಬರಹ ಈಗ ಭಾರಿ ವೈರಲ್ ಆಗಿದ್ದು, ಯುವಕನ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಅವಹೇಳನಕಾರಿ ಬರಹ ಪ್ರಕಟಿಸಿದ ಯುವಕನ ವಿರುದ್ಧ ಈ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಅಕ್ಷರ ಬೋಳಿಯಮಜಲ್ ಎಂಬವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕ್ರೈಸ್ತ ಧರ್ಮ, ಮದರ್ ತೆರೆಸಾ ಹಾಗೂ ಯೇಸು ಕ್ರಿಸ್ತರ ವಿರುದ್ಧ ತೀರಾ ಕೀಳು ಮಟ್ಟದ ಭಾಷೆ ಬಳಸಿ ಬರಹಗಳನ್ನು ಪ್ರಕಟಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಅಕ್ಷರ ಬೋಳಿಯಮಜಲ್ ಎಂಬವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ವಿವಿಧ ಕ್ರೈಸ್ತ ಹಾಗೂ ಮುಸ್ಲಿಂ ಸಂಘಟನೆಗಳು ಒತ್ತಾಯಿಸುವೆ.

ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕೆಡಿಸುವ ನಿಟ್ಟಿನಲ್ಲಿ ಅಕ್ಷರ್ ಬೋಳಿಮಜಲ್ ಯತ್ನಿಸುತ್ತಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ನೇತೃತ್ವದ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ಅವರನ್ನು ಭೇಟಿ ಮಾಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Christian community leaders and district Youth Congress members approached the Police commissioner to file a complaint against a person who has posted derogatory comments on Jesus and Mother Teresa on the social media on September 12.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ