ಮಂಗಳೂರು: ಇ-ಮೇಲ್ ಗೆ ಹ್ಯಾಕರ್ಸ್ ಕನ್ನ, ಲಕ್ಷಗಟ್ಟಲೇ ಕದ್ದರು!

By: ಮಂಗಳೂರು ಪ್ರಿತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್. 04 : ವ್ಯವಹಾರದ ನೆಪದಲ್ಲಿ ಎರಡು ಕಂಪೆನಿಯ ಇ- ಮೇಲ್ ಖಾತೆಗಳನ್ನು ಹ್ಯಾಕ್ ಮಾಡಿ ಬರೋಬ್ಬರಿ 11,95,216 ರುಗಳನ್ನು. ಲಪಟಾಯಿಸಿದ ಪ್ರಕರಣ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ರಿಚರ್ಡ್ ಮೊಂತೆರೊ ಹಣ ಕಳೆದುಕೊಂಡ ವ್ಯಕ್ತಿ.

ರಿಚರ್ಡ್ ಮೊಂತೆರೊ ಎಂಬುವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಂಟ್ ಟೆಕ್ ಪವರ್ ಟೆಕ್ನಿಕಲ್ ಸರ್ವಿಸಸ್ ಸಂಸ್ಥೆಯನ್ನು ನಡೆಸುತ್ತಿದ್ದು, ಕಂಪೆನಿಯ ಪ್ರಾಜೆಕ್ಟ್ ವರ್ಕ್‌ಗೆ ಬೇಕಾದ ಸೀಲಿಂಗ್ ಎಲಿಮೆಂಟ್ ಎಂಬ ಬಿಡಿ ಭಾಗಗಳನ್ನು ಅಮೆರಿಕ ಮೂಲದ ಇಎನ್ಆರ್ ಮಷಿನಿಂಗ್ ಕಂಪನಿಯಿಂದ ಆಮದು ಮಾಡಿಕೊಳ್ಳುತ್ತಿದ್ದರು.

ಈ ಕಂಪನಿಯೊಂದಿಗೆ ಇ-ಮೇಲ್ ಸಂವಹನದ ಮೂಲಕ ವ್ಯವಹಾರ ನಡೆಸುತ್ತಿದ್ದನ್ನು ಮಾಹಿತಿ ತಿಳಿದು ಹ್ಯಾಕರ್ಸ್ ಗಳು ರಿಚರ್ಡ್ ಮೊಂತೆರೊ ಅವರ ಇ-ಮೇಲ್ ಖಾತೆಗೆ ಕನ್ನ ಹಾಕಿದ್ದಾರೆ.

Company E-mail Hacked, Rs 11,95,216 Lakh Looted by Miscreants

ಅಕ್ಟೋಬರ್. 7 ರಂದು ಹಾಗೂ ಅ. 20ರಂದು ರಿಚರ್ಡ್ ಅವರು ಕಂಪೆನಿಯಿಂದ ಎರಡು ಖರೀದಿ ಆದೇಶಗಳನ್ನು ಕೊಟ್ಟಿದ್ದಾರೆ. ಷರತ್ತಿನಂತೆ ಅಕ್ಟೋಬರ್. 17ರಂದು 12,000 ಅಮೇರಿಕನ್ ಡಾಲರ್ ಹಾಗೂ ಅ.20ರಂದು 5,800 ಅಮೆರಿಕನ್ ಡಾಲರ್ ಮೊತ್ತದ ಹಣವನ್ನು ಇಎನ್ಆರ್ ಕಂಪೆನಿಗೆ ಇ-ಮೇಲ್ ಸಂವಹನದ ಮೂಲಕ ಪಾವತಿಸಿದ್ದರು ಎನ್ನಲಾಗಿದೆ.

ಆದರೆ ಅಮೆರಿಕದ ಕಂಪೆನಿಯಿಂದ ಹಣ ಸ್ವೀಕೃತಿಯ ಯಾವುದೇ ಸಂದೇಶ ಬಾರದೆ ಇದ್ದುದರಿಂದ ಸಂಶಯಗೊಂಡು ಪರಿಶೀಲಿಸಿಸಲಾಗಿತ್ತು. ಆ ವೇಳೆ ಹಣವು ಇಎನ್ಆರ್ ಕಂಪೆನಿಯ ಖಾತೆಗೆ ಜಮಾ ಆಗದೇ ಇರುವುದು ತಿಳಿದಿದೆ.

ಒಟ್ಟು 11,95,216 ರು ಹಣವನ್ನು ಕಂಪನಿಯ ಇ-ಮೇಲ್ ಹ್ಯಾಕ್ ಮಾಡುವ ಮೂಲಕ ದುಷ್ಕರ್ಮಿಗಳು ವಂಚನೆ ಮಾಡಿರುವುದು ಪತ್ತೆಯಾಗಿದೆ. ಈ ಕುರಿತು ರಿಚರ್ಡ್ ಮೊಂತೆರೊ ಅವರು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೀವೂ ಹ್ಯಾಕರ್ಸ್ ಗಳಿಂದ ಎಚ್ಚರದಿಂದ ಇರುವುದು ಒಳಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The emails of two companies being hacked and Rs 11,95,216 Lakh Looted by hackers, was reported inthe Panambur Police Station.
Please Wait while comments are loading...