ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ಸಾಂಸ್ಕೃತಿಕ ಲೋಕ ಅನಾವರಣ

|
Google Oneindia Kannada News

ಮಂಗಳೂರು, ನವೆಂಬರ್.17: ಮೂರು ದಿನಗಳ ಕಾಲ ನಡೆಯುತ್ತಿರುವ ಸಾಹಿತ್ಯ ಜಾತ್ರೆಯ ಸಂಭ್ರಮ ಕಳೆಕಟ್ಟಿದೆ. ಕನ್ನಡ ನಾಡು-ನುಡಿ-ಜಲದ ಕುರಿತ ಗಂಭೀರ ಚಿಂತನೆಗೆ ವೇದಿಕೆಯಾಗುವ ಸಾಹಿತ್ಯ ಹಬ್ಬ ಆಳ್ವಾಸ್ ನುಡಿಸಿರಿಗೆ ವಿದ್ಯುಕ್ತ ಚಾಲನೆ ದೊರೆತಿದೆ.

ಮುಂಜಾನೆಯ ಚುಮು ಚುಮು ಚಳಿಯ ನಡುವೆ ಮಂಜಿನ ಹನಿ ಸೂರ್ಯನ ಕಿರಣಗಳ ಸ್ಪರ್ಶಕ್ಕೆ ಕರಗುತ್ತಿದ್ದಂತೆ ವಿದ್ಯಾಗಿರಿಯಲ್ಲಿ ಕನ್ನಡ ನಾಡು, ನುಡಿಯ ಸಾಂಸ್ಕೃತಿಕ ಲೋಕ ತೆರೆದು ಕೊಳ್ಳುತ್ತದೆ. ಮುಂಜಾನೆಯಿಂದ ಸೂರ್ಯಾಸ್ಥದವರೆಗೆ ಆಳ್ವಾಸ್ ನುಡಿಸಿರಿಯಲ್ಲಿ ಪುಟ್ಟ ಸಾಹಿತ್ಯ ಲೋಕ ಅನಾವರಣಗೊಳ್ಳಲಿದೆ.

ಕನ್ನಡದ ಉಗಮ ಹಲ್ಮಿಡಿ ಶಾಸನದಿಂದಾಯಿತು ಎನ್ನುವುದು ಅರ್ಧ ಸತ್ಯ:ಡಾ.ಷ.ಶೆಟ್ಟರ್ಕನ್ನಡದ ಉಗಮ ಹಲ್ಮಿಡಿ ಶಾಸನದಿಂದಾಯಿತು ಎನ್ನುವುದು ಅರ್ಧ ಸತ್ಯ:ಡಾ.ಷ.ಶೆಟ್ಟರ್

ಈ ಸಮ್ಮೇಳನ ಕೇವಲ ಕನ್ನಡ ನಾಡು-ನುಡಿ-ಜನದ ಗಂಭೀರ ಚಿಂತನೆ, ಕನ್ನಡ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರದೆ ಕೃಷಿಯ ಅದ್ಭುತ ಲೋಕವೇ ತೆರೆದುಕೊಂಡಿದೆ. ಸಾಹಿತ್ಯ ಲೋಕದಲ್ಲಿ ಸಂಚರಿಸಿ ದಣಿದವರಿಗೆ ವಿಜ್ಞಾನ ಹಾಗೂ ಕೃಷಿ ಸಿರಿ ಕಣ್ಮನ ತಣಿಸುತ್ತಿದೆ. ಆಳ್ವಾಸ್ ಸಮ್ಮೇಳನಕ್ಕೆ ಬಂದ ಎಲ್ಲರಿಗೂ ಊಟ ಉಪಚಾರದ ವ್ಯವಸ್ಥೆ ಬೆರಗು ಮೂಡಿಸುತ್ತದೆ.

Colourful events attracting Alvas Nudisiri

ಜೈನರ ಶೈಲಿಯ ರುಚಿಕರ ಊಟ ಒಂದೆಡೆ ಸಾಹಿತ್ಯಾಸಕ್ತರ ಹೊಟ್ಟೆ ತಣಿಸಿದರೆ ಇನ್ನೊಂದೆಡೆ ಅಲ್ಲಲ್ಲಿ ನಡೆಯುತ್ತಿರುವ ಮನೋರಂಜನಾ ಕಾರ್ಯಕ್ರಮ ನೋಡುಗರ ಮನ ತಣಿಸುತ್ತದೆ.

 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲೂ ಸದ್ದು ಮಾಡಿದ ಶಬರಿಮಲೆ ವಿವಾದ 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲೂ ಸದ್ದು ಮಾಡಿದ ಶಬರಿಮಲೆ ವಿವಾದ

ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್ ' ಚಿತ್ರದಲ್ಲಿ ಬರುವ ಓಂಗೋಲ್ ತಳಿಯ ಗೂಳಿ ಭಾರೀ ಗಾತ್ರದ್ದು. ಇದರ ವಯಸ್ಸು 6 ವರ್ಷ. ತೂಕ ಮಾತ್ರ ಬರೋಬ್ಬರಿ 1,462 ಕೆಜಿ. ಉಡುಪಿಯ ಬ್ರಹ್ಮಾವರದ ಮಾನಾಮಾ ಫಾರ್ಮ್ಸ್ ನವರು ಈ ಹೋರಿಯನ್ನು ನುಡಿಸಿರಿಯಲ್ಲಿ ಪ್ರದರ್ಶಿಸಿದ್ದಾರೆ.

Colourful events attracting Alvas Nudisiri

ದಿನ ಒಂದಕ್ಕೆ ಈ ಗೂಳಿಯ ಸಾಕಣೆ ವೆಚ್ಚ ಸರಿಸುಮಾರು 650 ರೂಪಾಯಿ. ಜೋಳದ ಗಿಡ, ಹುಲ್ಲು, ಧಾನ್ಯ , ಬೆಣ್ಣೆ , ತುಪ್ಪ, ಒಣ ದ್ರಾಕ್ಷಿ , ಖರ್ಜೂರ, ಕಡ್ಲೆ ಹಿಂಡಿಯನ್ನು ಗೂಳಿ ಸೇವಿಸುತ್ತದೆ.

 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌. ಘಂಟಿ ಆಯ್ಕೆ 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌. ಘಂಟಿ ಆಯ್ಕೆ

ಅಷ್ಟೇ ಅಲ್ಲ, ನುಡಿಸಿರಿ ಸಮ್ಮೇಳನದಲ್ಲಿ ಆಯೋಜಿಸಲಾಗಿರುವ ಪುಸ್ತಕ ಮೇಳ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತಿನ ನಡುವೆ ಆಳ್ವಾಸ್ ನುಡಿಸಿರಿಯಲ್ಲಿರುವ ಪುಸ್ತಕ ಪ್ರದರ್ಶನ ಮಳಿಗೆಗಳು ಈ ಮಾತನ್ನು ಸುಳ್ಳಾಗಿಸಿವೆ.

Colourful events attracting Alvas Nudisiri

ಇಲ್ಲಿನ 70 ಪುಸ್ತಕ ಮಳಿಗೆಗಳಲ್ಲಿಯೂ ಸಾಹಿತ್ಯಾಸಕ್ತರು ಇಣುಕುತ್ತಿದ್ದಾರೆ. ಸಾಹಿತ್ಯ ಜಾತ್ರೆಯೊಂದಿಗೆ ನುಡಿಸಿರಿಯಲ್ಲಿ ಕನ್ನಡ, ಪ್ರಾದೇಶಿಕ ಭಾಷಾ ಚಲನಚಿತ್ರಗಳು ಜನರ ಆಕರ್ಷಣೆಯ ಮುಖ್ಯ ಕೇಂದ್ರವಾಗಿವೆ.

English summary
Colourful events attracting in Alavs Nudisiri Conference in Moodbidri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X