ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸ್ಕಾರ್ಫ್' ಬೆಂಬಲಿಸದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಿದೇಶದಿಂದ ಬೆದರಿಕೆ

|
Google Oneindia Kannada News

ಮಂಗಳೂರು, ಜೂನ್ 29: ಮಂಗಳೂರಿನ ಆಗ್ನೆಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಅಥವಾ ಸ್ಕಾರ್ಪ್ ವಿವಾದ ಈಗ ಹೊಸ ತಿರುವು ಪಡೆದಿದೆ. ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ ಕಾಲೇಜಿನ ಆಡಳಿತ ಮಂಡಳಿಯ ನಿಯಮವನ್ನು ನಿರೋಧಿಸದ ಕೆಲ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆಗಳು ಬರುತ್ತಿವೆ.

ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜು, ಕಾಲೇಜಿನ ತರಗತಿ ಒಳಗೆ ಸ್ಕಾರ್ಫ್ ಅಥವಾ ಹಿಜಾಬ್ ಧರಿಸುವಂತಿಲ್ಲ ಎಂಬ ನಿಯಮ ವಿಧಿಸಿದೆ. ಕಾಲೇಜಿನ ಅಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರ ನೇತೃತ್ವದಲ್ಲಿ ಆಗ್ನೆಸ್ ಕಾಲೇಜಿನ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕೆಲದಿನಗಳ ಹಿಂದೆ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದರು.

ಆದರೆ, ಕಾಲೇಜು ಆಡಳಿತ ಮಂಡಳಿ ಯಾವುದೇ ರೀತಿಯಲ್ಲೂ ಈ ಪ್ರತಿಭಟನೆಗೂ ಮಣಿದಿರಲಿಲ್ಲ. ಈ ನಡುವೆ, ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನೌರೀನ್ ಎಂಬವರಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿದ್ದನ್ನು ಹೇಳಿಕೊಂಡಿದ್ದಾರೆ.

College Hijab Issue, students getting threat calls from foreigners

"'ಜಸ್ಟಿಸ್ ಫಾರ್ ಸ್ಕಾರ್ಫ್ ಆ್ಯಂಡ್ ನಮಾಝ್' ಎನ್ನುವ ವಾಟ್ಸಪ್ ಗ್ರೂಪಿನಲ್ಲಿ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿ ಚರ್ಚೆ ನಡೆದಿತ್ತು. ತಾನು ಮಾತ್ರ ಚರ್ಚೆಗೆ ಸ್ಪಂದಿಸಿರಲಿಲ್ಲ. ಅಲ್ಲದೆ, ಚರ್ಚೆಯ ಮಧ್ಯೆಯೇ ಗ್ರೂಪಿನಿಂದ ಲೆಫ್ಟ್ ಆಗಿದ್ದೆ. ಆದರೆ, ಇದಕ್ಕೆ ಸಂಬಂಧಿಸಿ ಅನಾಮಿಕರೊಬ್ಬರು ಸೌದಿಯಿಂದ ಕರೆಮಾಡಿ, ಬೆದರಿಕೆ ಹಾಕಿದ್ದಾರೆ," ಎಂದು ನೌರಿನ್ ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನೌರೀನ್ ಮುಂದಾಗಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಜೆಸ್ವಿನಾ ಎ.ಸಿ. ಪ್ರತಿಕ್ರಿಯಿಸಿದ್ದು, "ಇದು ಒಂದು ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆ. ಕರಾವಳಿಯ ಪ್ರಥಮ ಮಹಿಳಾ ಕಾಲೇಜು. ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿದ್ದರೂ, ಎಲ್ಲಾ ಜಾತಿ, ಮತದವರಿಗೆ ಶಿಕ್ಷಣ ಪಡೆಯಲು ಪ್ರವೇಶ ನೀಡುತ್ತಿದೆ. ಈ ಸಂಸ್ಥೆ ಆರಂಭದಿಂದಲೇ ಎಲ್ಲಾ ಮಹಿಳೆಯರಿಗೆ ಗುಣಮಟ್ಟದ, ಮೌಲ್ಯಯುತವಾದ ಶಿಕ್ಷಣ ನೀಡಿದೆ," ಎಂಮದು ಹೇಳಿದರು.

ಕಾಲೇಜು ಮಾಡಿರುವ ನಿಯಮಗಳು ಹಲವಾರು ವರ್ಷಗಳಿಂದಲೇ ಚಾಲ್ತಿಯಲ್ಲಿದೆ. ವಸ್ತ್ರ ಸಂಹಿತೆ ನಿಯಮಗಳ ಒಂದು ಭಾಗವಾಗಿದೆ. ಕಾಲೇಜಿನಲ್ಲಿ ಶಿಸ್ತು, ಸಮಾನತೆ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಕೆಲ ವಿದ್ಯಾರ್ಥಿನಿಯರು ನಿಯಮಗಳನ್ನು ಮೀರಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದಾರೆ. ಅದಲ್ಲದೇ ಕಾಲೇಜಿನ ಘನತೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಆದರೆ, ಈ ವಿದ್ಯಾರ್ಥಿನಿಯರ ವಿರುದ್ಧ ಕಾಲೇಜು ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪ್ರತಿಭಟನೆ ಬೆಂಬಲಿಸದ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕುತ್ತಿರುವುದನ್ನು ಕಾಲೇಜು ಆಡಳಿತ ಮಂಡಳಿ ಗಂಭೀರವಾಗಿ ಪಡಿಗಣಿಸಲಿದೆ ಎಂದು ಅವರು ತಿಳಿಸಿದರು.

English summary
St. Agnes College students getting threat calls from outside countries one who not supported Hijab protest. On June 25th the Muslim students of St Agnes college Staged protest against bringing condition of not allowing to wear scarfs any more to the college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X